ಕುಂದಗೋಳ: ಡಿಕೆ ಶಿವಕುಮಾರ್ ಕಾಂಗ್ರೆಸ್ ನ ಹರಕೆಯ ಕೋಣ- ರೇಣುಕಾಚಾರ್ಯ

ಹಿರಿಯ ಕಾಂಗ್ರೆಸ್ ಮುಖಂಡ ಡಿ. ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಹರಕೆಯ ಕೋಣ ಎಂದು ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಎಂ. ಪಿ. ರೇಣುಕಾಚಾರ್ಯ
ಎಂ. ಪಿ. ರೇಣುಕಾಚಾರ್ಯ
Updated on
ಕುಂದಗೋಳ: ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಉಪ ಚುನಾವಣೆಗೆ ಇನ್ನೂ ಒಂದು ವಾರ ಬಾಕಿ ಇರುವಂತೆಯೇ ಪ್ರಚಾರ ತಾರಕಕ್ಕೇರಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಉಭಯ ಕ್ಷೇತ್ರಗಳಲ್ಲಿ ತಮ್ಮ  ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಕುಂದಗೋಳದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹಿರಿಯ ಕಾಂಗ್ರೆಸ್ ಮುಖಂಡ ಡಿ. ಕೆ. ಶಿವಕುಮಾರ್  ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕುಂದಗೋಳದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು  ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಹರಕೆಯ ಕುರಿ ಎಂದು ಟೀಕಿಸಿದರು. ಕೋಣವನ್ನು ಬಲಿ  ನೀಡುವ ಮೊದಲು ಎಣ್ಣೆ ಹಚ್ಚುತ್ತೇವೆ. ಡಿ. ಕೆ. ಶಿವಕುಮಾರ್ ಹರಕೆಯ ಕೋಣವಾಗಿದ್ದಾರೆ. ಇಲ್ಲಿ ಬಂದು ಕಣ್ಣೀರಿನ ನಾಟಕ ಮಾಡುತ್ತಾರೆ. ಆ ಕೋಣವನ್ನು ಕಡಿದು ಹಾಕಬೇಕು ಎಂದು ಕಿಡಿಕಾರಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com