ಬಿಜೆಪಿಯಿಂದ ಸಂವಿಧಾನ ಬಾಹಿರ ಕೆಲಸ: ಸಿದ್ದರಾಮಯ್ಯ

ಬಹುಮತವಿಲ್ಲದೇ ಸರ್ಕಾರ ರಚಿಸುವುದು ಅಧಿಕ್ಕಾರಕ್ಕೇರುವುದು ಸಂವಿಧಾನ ಬಾಹಿರ. ಬಹುಮತವೇ ಇಲ್ಲದ ಬಿಜೆಪಿ ಅಕ್ರಮಗಳ ಮೂಲಕ ಸರ್ಕಾರ ರಚಿಸುತ್ತಿದ್ದೆ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on: 

ದಾವಣಗೆರೆ: ಬಹುಮತವಿಲ್ಲದೇ ಸರ್ಕಾರ ರಚಿಸುವುದು ಅಧಿಕ್ಕಾರಕ್ಕೇರುವುದು ಸಂವಿಧಾನ ಬಾಹಿರ.
ಬಹುಮತವೇ ಇಲ್ಲದ ಬಿಜೆಪಿ ಅಕ್ರಮಗಳ ಮೂಲಕ ಸರ್ಕಾರ ರಚಿಸುತ್ತಿದ್ದೆ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಮಹರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಮಾಡಿದ್ದು ಇಂತಹದ್ದೇ ಕೃತ್ಯ ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಹಿರೆಕೆರೂರು ಪ್ರಚಾರಕ್ಕೂ ತೆರಳುವ ಮುನ್ನ ಇಲ್ಲಿನ ಹರಿಹರ ತಾಲೂಕಿನ ಕುಮಾರಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣಾ ಕ್ಷೇತ್ರಗಳ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನರ್ಹರನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ

ತಮ್ಮ ಮುಖ್ಯಮಂತ್ರಿ ಸ್ಥಾನ ಉಳಿಯಲು ಲಿಂಗಾಯತರೆಲ್ಲ ಮತ ನೀಡಿ ಎಂದು ಹೇಳುವುದು, ಜಾತಿ ಧರ್ಮದ ಹೆಸರಿನಲ್ಲಿ ಮತಯಾಚಿಸುವುದು ಆಮಿಷವೊಡ್ಡುವುದೆಲ್ಲವೂ ಅಪರಾಧ ಎಂದುಆರೋಪಿಸಿದ್ದಾರೆ.

ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಹೀಗಿದ್ದರೂ ಚುನಾವಣಾ ಆಯೋಗ ಇವರ ವಿರುದ್ಧ ಕ್ರಮಕೈಗೊಳ್ಳದೇ ಇರುವುದನ್ನು ಸಹಿಸಲಾಗದು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com