ರಾಜಕೀಯ

ಉಪ ಚುನಾವಣೆ ಮುಂದೂಡಿಕೆ ಸ್ವಾಗತಿಸಿದ ಅನರ್ಹ ಶಾಸಕರು

ಸುಪ್ರೀಂಕೋರ್ಟ್‌ನಲ್ಲಿ ತಮ್ಮ ಪರವಾಗಿ ವಕೀಲರು ಸಮರ್ಪಕ ವಾದ ಮಂಡಿಸಿದ್ದು, ಮುಂದಿನ ದಿನಗಳಲ್ಲಿ ತೀರ್ಪು ಸಹ ನಮ್ಮ ಪರವಾಗಿಯೇ ಬರಲಿದೆ ಎಂದು ಅಥಣಿ ಅನರ್ಹ ಶಾಸಕ ಮಹೇಶ್ ಕಮಟಹಳ್ಳಿ ಹೇಳಿದ್ದಾರೆ.

ಉಪ ಚುನಾವಣೆ ಮುಂದೂಡಿಕೆ ಸ್ವಾಗತಿಸಿದ ಅನರ್ಹ ಶಾಸಕರು
ಬಿಸಿ ಪಾಟೀಲ್
Published On :

ಬೆಂಗಳೂರು: ಸುಪ್ರೀಂಕೋರ್ಟ್‌ನಲ್ಲಿ ತಮ್ಮ ಪರವಾಗಿ ವಕೀಲರು ಸಮರ್ಪಕ ವಾದ ಮಂಡಿಸಿದ್ದು, ಮುಂದಿನ ದಿನಗಳಲ್ಲಿ ತೀರ್ಪು ಸಹ ನಮ್ಮ ಪರವಾಗಿಯೇ ಬರಲಿದೆ ಎಂದು ಅಥಣಿ ಅನರ್ಹ ಶಾಸಕ ಮಹೇಶ್ ಕಮಟಹಳ್ಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯ ಸದ್ಯಕ್ಕೆ ಚುನಾವಣೆ ಮುಂದೂಡಿದೆ. ಚುನಾವಣೆ ಮುಂದೂಡಿರುವುದು ನ್ಯಾಯಸಮ್ಮತವಾಗಿಯೇ ಇದೆ. ತೀರ್ಪು ಸಹ ನಮ್ಮ ಪರವಾಗಿ ನ್ಯಾಯಸಮ್ಮತವಾಗಿಯೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿರೆಕೇರೂರು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಮಾತನಾಡಿ, ಸುಪ್ರೀಂಕೋರ್ಟ್ ಉಪ ಚುನಾವಣೆಗೆ ತಡೆಯಾಜ್ಞೆ ನೀಡಿರುವುದು ಸ್ವಾಗತಾರ್ಹ. ಸ್ಪೀಕರ್ ನಮ್ಮೆಲ್ಲರನ್ನು ಅನರ್ಹಗೊಳಿಸಿರುವುದು ಕಾನೂನುಬಾಹಿರ. ಅರ್ಜಿ ವಿಚಾರಣೆ ನಡೆಯುವ ಸಂದರ್ಭದಲ್ಲಿ  ಉಪ ಚುನಾವಣೆ ನಡೆಯುವುದು ಸರಿಯಲ್ಲ. ಇದಕ್ಕೆ ತಡೆಯಾಜ್ಞೆ ನೀಡುವಂತೆ ಕೋರ್ಟ್ ಗೆ ಮನವಿ ಸಲ್ಲಿಸಿದ್ದೆವು. ನಮ್ಮ ಮನವಿ ಪುರಸ್ಕರಿಸಿ ಸುಪ್ರೀಂಕೋರ್ಟ್ ಸಮಂಜಸ ಆದೇಶ ಕೊಟ್ಟಿದೆ ಎಂದರು.

ಒಂದು ವೇಳೆ ಉಪಚುನಾವಣೆ ನಡೆದಿದ್ದರೆ ತೀರ್ಪು ನಮ್ಮ ಪರವಾಗಿ ಬಂದರೆ ನಮ್ಮ ಶಾಸಕತ್ವ ರದ್ದಾಗುವುದಿಲ್ಲ. ಆಗ ಕ್ಷೇತ್ರಕ್ಕೆ ಇಬ್ಬರು ಶಾಸಕರಾಗುವ ಪರಿಸ್ಥಿತಿ ಬರುತ್ತಿತ್ತು. ಆಗ ಗೊಂದಲ ಸೃಷ್ಟಿಯಾಗುತ್ತಿತ್ತು. ಹೀಗಾಗಿ ಕೋರ್ಟ್ ಉತ್ತಮ ನಿರ್ಧಾರ ತೆಗೆದುಕೊಂಡಿದೆ ಎಂದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.