ಮಹಾರಾಷ್ಟ್ರ ಚುನಾವಣೆ: ಟೀಕೆಗಳ ನಡುವೆಯೂ ಪ್ರಚಾರ ನಡೆಸಿದ ಸಿಎಂ ಯಡಿಯೂರಪ್ಪ

ಪ್ರವಾಹದಿಂದಾಗಿ ಇಡೀ ರಾಜ್ಯ ಕಂಗಾಲಾಗಿದ್ದು, ಈ ನಡುವಲ್ಲೇ ರಾಜ್ಯವನ್ನು ನಿರ್ಲಕ್ಷಿಸಿ ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದರೂ. ಇದಾವುದಕ್ಕೂ ಕ್ಯಾರೆ ಎನ್ನದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮತದಾರರ ಮನವೊಲಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. 
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಪ್ರವಾಹದಿಂದಾಗಿ ಇಡೀ ರಾಜ್ಯ ಕಂಗಾಲಾಗಿದ್ದು, ಈ ನಡುವಲ್ಲೇ ರಾಜ್ಯವನ್ನು ನಿರ್ಲಕ್ಷಿಸಿ ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದರೂ. ಇದಾವುದಕ್ಕೂ ಕ್ಯಾರೆ ಎನ್ನದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮತದಾರರ ಮನವೊಲಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. 

ಮಹಾರಾಷ್ಟ್ರ ಗಡಿ ಭಾಗದ ಮನವೊಲಿಸುವ ಸಲುವಾಗಿ ನಿನ್ನೆ ಯಡಿಯೂರಪ್ಪ ಅವರು ಮಹಾರಾಷ್ಟ್ರ ಗಡಿ ಭಾಗಕ್ಕೆ ತೆರಳಿ ಬಿಜೆಪಿ ಪರ ಪ್ರಚಾರ ಕಾರ್ಯ ನಡೆಸಿದರು. 

ತುಬಚಿ-ಬಬಲೇಶ್ವರ ಏತ ನೀರವಾರಿ ಯೋಜನೆಯಿಂದ 30-40 ಗ್ರಾಮಗಳಿಗೆ ನೀರು ಹರಿಸುವುದಾಗಿ ಮಹಾರಾಷ್ಟ್ರ ಗಡಿ ಭಾಗದ ಜನರಿಗೆ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
 
ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಬರುವ ನೀರು ಮಹಾರಾಷ್ಟ್ರ ಗಡಿಯಲ್ಲಿರುವ ಬೋರಾ ನದಿಗೆ ಹರಿದರೆ, ಗಡಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ. ಜಾಟ್ ಪ್ರದೇಶದಲ್ಲಿರುವ ಕನಿಷ್ಟ 1 ಲಕ್ಷ ಜನರಿಗೆ ಇದರಿಂದ ಲಾಭವಾಗಲಿದೆ. ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಅಧಿಕೃತವಾಗಿ ಮಾತುಕತೆ ನಡೆಸಲಾಗುತ್ತದೆ. ಮಹಾರಾಷ್ಟ್ರವೇ ಆಗಲೀ, ಕರ್ನಾಟಕವೇ ಆಗಲೀ ಪ್ರತೀಯೊಬ್ಬರೂ ನೀರು ಪಡೆಯಬೇಕು. ಸೂಕ್ತ ಬೆಲೆಯಲ್ಲಿ ರೈತರಿಗೆ ನೀರು ಒದಗಿಸುವುದು ಮೋದಿಯವರ ಆಶಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನನ್ನಿಂದ ಸಾಧ್ಯವಾಗುವ ಎಲ್ಲಾ ಕೆಲಸಗಳನ್ನು ನಾನು ಮಾಡುತ್ತೇನೆ. ಬಿಜೆಪಿ ಅಭ್ಯರ್ಥಿ ವಿಲಾಸ್ ರಾವ್ ಜಗ್ಪತ್ ಅವರು ಗೆಲವು ಸಾಧಿಸಿದ್ದೇ ಆದರೆ, ಜನತೆಗೆ ಸಹಾಯ ಮಾಡುತ್ತೇನೆ. ಎರಡನೇ ಬಾರಿಯೂ ಫಡ್ನವಿಸ್ ಸಿಎಂ ಆಗುವಂತೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com