ಉದ್ದೇಶಪೂರ್ವಕವಾಗಿ ಜೆಡಿಎಸ್ ಬಾವುಟ ಹಿಡಿದಿಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

ದೆಹಲಿಯಿಂದ ನಗರಕ್ಕೆ ಆಗಮಿಸಿದ ದಿನ ಕನ್ನಡ ಬಾವೂಟ ಸೇರಿದಂತೆ ಹಲವರು ಬಾವುಟಗಳನ್ನ ಕೊಟ್ಟಿದ್ದರು. ಅದನ್ನ ನಾನು ಹಿಡಿದು ಕೊಂಡಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೆಹಲಿಯಿಂದ ನಗರಕ್ಕೆ ಆಗಮಿಸಿದ ದಿನ ಕನ್ನಡ ಬಾವೂಟ ಸೇರಿದಂತೆ ಹಲವರು ಬಾವುಟಗಳನ್ನ ಕೊಟ್ಟಿದ್ದರು. ಅದನ್ನ ನಾನು ಹಿಡಿದು ಕೊಂಡಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ತಾವು ಜೆಡಿಎಸ್ ಬಾವುಟ ಹಿಡಿದ ವಿಚಾರವಾಗಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಮ್ಮ ಹಿರಿಯ ನಾಯಕರು.ನನ್ನ ಶ್ರೇಯೋಭಿಲಾ ಶಿಗಳು ಅವರು ಆ ರೀತಿ ಮಾತನಾಡಿಲ್ಲ ಎಂದೆನಿಸುತ್ತದೆ.ತಪ್ಪು ಗ್ರಹಿಸಿ ಮಾಡಿಕೊಂಡಿರಬೇಕು.ನಾನು ಹುಟ್ಟುತ ಕಾಂಗ್ರೆಸ್ಸಿಗ.ಹೀಗಾಗಿಯೇ ವಿಮಾನ ನಿಲ್ದಾಣದಿಂದ ನೇರವಾಗಿ ಕಾಂಗ್ರೆಸ್ ಪಕ್ಷದ ಕಚೇರಿಗೆ ಆಗಮಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇಂದೂ ಸಹ ಕೆಲವರು ಜೆಡಿಎಸ್ ಶಾಸಕರು ತಮ್ಮನ್ನು ಭೇಟಿ ಮಾಡಲು ಬಂದಿದ್ದಾರೆ.ಅವರನ್ನು ಬರ ಬೇಡಿ ಎಂದು ನಾನು ಹೇಳುವುದಕ್ಕೆ ಸಾಧ್ಯವಿಲ್ಲ.ಸಿದ್ದರಾಮಯ್ಯ ಗೆ ಅವರಿಗೆ ನನ್ನ ಮೇಲೆ ತುಂಬಾ ಪ್ರೀತಿ ಇದೆ ಅದಕ್ಕಾಗಿ ಅವರು ಹಾಗೆ ಹೇಳಿರಬೇಕು ಎಂದು ಅವರು ಸಿದ್ದರಾಮಯ್ಯ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದರು. ಇಂದು ಡಿಕೆ ಶಿವಕುಮಾರ್ ಅವರನ್ನು ಮಾಜಿ ಸಚಿವ ಚಲುವರಾಯಸ್ವಾಮಿ ಭೇಟಿ ಮಾಡಿದರು. ನಂತರ ಮಾತನಾಡಿ, ಕೆಪಿಸಿಸಿ ನಲ್ಲಿ ಡಿಕೆ ಶಿವಕುಮಾರ್ ಅವರನ್ನು ಮಾತನಾಡಿಸಲು ಆಗಿರಲಿಲ್ಲ ನಿನ್ನೆ ಮಾತಾಡಿದಾಗ ಇವತ್ತು ಬಂದು ಹೋಗು ಎಂದು ಸೂಚಿಸಿದ್ದರು.ಅಂತಿಮವಾಗಿ ಇಡಿ ಇಂದ ಬಿಡುಗಡೆ ಆಗಿ ದ್ದಾರೆ ಅವರಿಗೆ ಅತೀವ ಶಕ್ತಿ ಇದೆ . ಮುಂದೆ ಯಾವುದೇ ರೀತಿಯ ತೊಂದರೆ ಇಲ್ಲದೆ ಎಲ್ಲಾ ದಾಖಲೆ ಯನ್ನು ಸರಿಯಾಗಿ ಇಟ್ಟುಕೊಳ್ಳಲಿದ್ದಾರೆ ಎಂದರು.

ಸಿದ್ದರಾಮಯ್ಯ ಅವರ ವೀಡಿಯೋ ವಿಚಾರ ಮಾತನಾಡಿ, ಯಾರೋ ಸಿದ್ದರಾಮಯ್ಯ ಅವರ ಫೋಟೊ ತೆಗೆದುಕೊಳ್ಳುತ್ತೇವೆ ಎಂದು ಸಭೆಯ ಮಧ್ಯದಲ್ಲಿ ಹೋಗಿ ವೀಡಿಯೋ ಮಾಡಿಕೊಂಡು ವಾಟ್ಸಪ್ ಸ್ಟೇಟಸ್ ಗೆ ಹಾಕಿ ಕೊಂಡಿದ್ದಾರೆ ಅದು ವೈರಲ್ ಆಗಿದೆ. ನನಗೆ ದೇವೇಗೌಡರು‌‌ ಸಿಕ್ಕರೆ ಇಳಿದು ಮಾತಾಡುತ್ತೇನೆ ‌‌‌‌ಹಾಗೆ ಕುಮಾರಸ್ವಾಮಿ ಅವರು ಎದುರಾದರೂ ಮಾತಾಡಿಸುತ್ತೇನೆ. ಏರ್ ಪೋರ್ಟ್ ನಿಂದ ಬರುವಾಗ ಜೆಡಿಎಸ್ ಬಾವುಟ ಹಿಡಿದ್ದಿದ್ದಾರೆ ಅನ್ನೊದು ವಿಚಾರ ಬಗ್ಗೆ ಮಾತಾಡಿದ್ದಾರೆ ಎಂದರು.

ಪಕ್ಷದ ಹೈಕಮಾಂಡ್ ಬೆಂಬಲಿಸಬೇಕು ಅಂತ ಹೇಳಿದ್ದರು ನಂತರ ಹೊರಗಡೆ ಬಂದ ಮೇಲೆ ಜನತಾದಳದ ಎಲ್ಲ ಮುಖಂಡರು ನಿಮ್ಮ ಸಾಹವಾಸ ಬೇಡ ಎಂದಿದ್ದರು. ಒಂದು ಕಡೆ ಹಾಗೆ ಹೇಳಿದ ಕುಮಾರ ಸ್ವಾಮಿ ನಿನ್ನೆ ಡಿಕೆ ಶಿವಕುಮಾರ್ ಅವರನ್ನು ಬರಮಾಡಿಕೊಂಡು ವಿಶ್ವಾಸ ವ್ಯಕ್ತಪಡಿಸಿದ್ದರು. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಹಂತದಲ್ಲಿ ಹೀಗೆಲ್ಲಾ ಆಗುತ್ತಿರುವುದರ ಬಗ್ಗೆ ಮಾತಾಡಿದ್ದಾರೆ ಅಷ್ಟೇ. ಪರಮೇಶ್ವರ್ ಅವರು ಖರ್ಗೆ ಅವರು ಎಲ್ಲರ ನಾಯಕರು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತಾರೆ. ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿ ಇದೆ ಎಂದು ಅವರು ಹೇಳಿದರು.

ಡಿಕೆ ಶಿವಕುಮಾರ್ ಅವರು ಸಮುದಾಯದ ಸುಖ ದುಃಖ ಹೋರಾಟದಲ್ಲಿ ಭಾಗಿಯಾಗುತ್ತಾರೆ. ಬರಿ ಅಧಿಕಾರಕ್ಕಾಗಿ ಸಂಬಂಧಗಳನ್ನು ಬಳಸಿಕೊಳ್ಳುವುದಿಲ್ಲ. ಜೊತೆಗೆ ಎಲ್ಲಾ ಸಮುದಾಯದ ಎಲ್ಲಾ ಸಮಾಜದವರು ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿ ಇದೆ. ಅವರ ಮೇಲೆ ನಂಬಿಕೆ ಇದೆ ವಿಶ್ವಾಸ ಇದೆ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ನಾವು ಯಾವಾಗಲೂ ಅವರ ಜೊತೆಗೆ ಇರುತ್ತೇವೆ ಎಂದರು. ಇದೆ ವೇಳೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಇಂದು ಕೂಡ ವಿವಿಧ ನಾಯಕರು ಭೇಟಿ ಮಾಡಿ ಚರ್ಚೆ ನಡೆಸಿದರು. ಮಾಜಿ ಸಚಿವರಾದ ಚೆಲುವರಾಯಸ್ವಾಮಿ ಹಾಗೂ ಎಂ.ಬಿ ಪಾಟೀಲ್ ಸೋಮವಾರ ಬೆಳಗ್ಗೆ ಭೇಟಿ ಮಾಡಿದರು.

ಇಂದು ಬೆಳಿಗ್ಗೆ ಡಿಕೆಶಿವಕುಮಾರ್ ತಮ್ಮ ನಿವಾಸದಿಂದ ರಾಮನಗರದ ಪ್ರಯಾಣಿಸುವ ಮುನ್ನ ಈ ಇಬ್ಬರು ನಾಯಕರು ಭೇಟಿ ಮಾಡಿ ಚರ್ಚಿಸಿದರು. ಎಂಬಿ ಪಾಟೀಲ್ ಡಿಕೆ ಶಿವಕುಮಾರ್ ಅವರಿಗೆ ಸಚಿವ ಸಹೋದ್ಯೋಗಿ ಸುದೀರ್ಘಕಾಲ ಕಾರ್ಯನಿರ್ವಹಿಸಿದ್ದು ಈ ಸಂದರ್ಭ ಭೇಟಿ ನೀಡಿ ಶಿವಕುಮಾರ್ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಅದೇ ರೀತಿ ಹಳೆ ಮೈಸೂರು ಭಾಗದ ಪ್ರಮುಖ ನಾಯಕರಾಗಿರುವ ಡಿಕೆ ಶಿವಕುಮಾರ್ ಅವರನ್ನು ಇದೇ ಭಾಗದ ಮತ್ತು ನಾಯಕರಾದ ಚೆಲುವರಾಯಸ್ವಾಮಿ ಭೇಟಿ ಮಾಡಿ ಚರ್ಚಿಸಿದರು. ನಾಯಕರೊಬ್ಬರು ಸುದೀರ್ಘ ಕಾಲ ಪ್ರತ್ಯೇಕವಾಗಿ ಡಿಕೆಶಿ ಜೊತೆ ಚರ್ಚಿಸಿದ್ದು ಅವರೊಂದಿಗೆ ಮಾತುಕತೆ ನಡೆಸಿದ ನಂತರ ಡಿಕೆ ಶಿವಕುಮಾರ್ ರಾಮನಗರ ದತ್ತ ಪ್ರಯಾಣ ಬೆಳೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com