ಹೊಸ ವರ್ಷದ 'ಅಚ್ಚೇ ದಿನ್' ಇನ್ನಷ್ಟು ಭೀಕರವಾಗಲಿದೆ: ಸಿದ್ದರಾಮಯ್ಯ

ಹೊಸ ವರ್ಷದ ಮೊದಲ ದಿನವೇ ರೈಲು ಪ್ರಯಾಣ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಹೊಸ ವರ್ಷದ 'ಅಚ್ಚೇ ದಿನ್' ಇನ್ನಷ್ಟು ಭೀಕರವಾಗಲಿದೆ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೊಸ ವರ್ಷದ ಮೊದಲ ದಿನವೇ ರೈಲು ಪ್ರಯಾಣ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಹೊಸ ವರ್ಷದ 'ಅಚ್ಚೇ ದಿನ್' ಇನ್ನಷ್ಟು ಭೀಕರವಾಗಲಿದೆ ಎಂದು ಹೇಳಿದ್ದಾರೆ.

ರೈಲ್ವೆ ಪ್ರಯಾಣ ದರ ಏರಿಸಿರುವುದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. "ರೈಲು ದರ ಹೆಚ್ಚಳವು ಜನ ಸಾಮಾನ್ಯರಿಗೆ ನರೇಂದ್ರ ಮೋದಿ ಸರ್ಕಾರದ ಹೊಸ ವರ್ಷದ ಉಡುಗೊರೆಯಾಗಿದೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

"ರೈಲು ಸಾರಿಗೆ ಆರ್ಥಿಕತೆಯ ಬೆನ್ನೆಲುಬಾಗಿರುವುದರಿಂದ ಬೆಲೆ ಏರಿಕೆಯು ಅಭಿವೃದ್ಧಿಯ ಭವಿಷ್ಯವನ್ನು ಮತ್ತಷ್ಟು ಕುಗ್ಗಿಸುತ್ತದೆ. ಕೇಂದ್ರ ಸರ್ಕಾರವು ನಮ್ಮ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ನಮಗೆ ಉಡುಗೊರೆಯಾಗಿ ನೀಡಬೇಕಾಗಿತ್ತು" ಎಂದು ಅವರು ಕುಟುಕಿದ್ದಾರೆ.

ಹೊಸ ವರ್ಷದ 'ಅಚ್ಚೇ ದಿನ್' ಇನ್ನಷ್ಟು ಭೀಕರವಾಗಲಿರುವ ಸೂಚನೆಯನ್ನು ನರೇಂದ್ರ ಮೋದಿ ನೀಡಿದ್ದಾರೆ. ಮೊದಲು ರೈಲ್ವೆ ಪ್ರಯಾಣ ದರ, ನಂತರ ಅಡುಗೆ ಅನಿಲದ‌ ಬೆಲೆ ಹೆಚ್ಚಿಸಲಾಗಿದೆ. ಇನ್ನೊಂದೆಡೆ ತೆರಿಗೆ ಸಂಗ್ರಹ ಕುಂಠಿತಗೊಳ್ಳುತ್ತಿದೆ. ಅಸಮರ್ಥರ ಕೈಗೆ ಅಧಿಕಾರ ಕೊಟ್ಟ ತಪ್ಪಿಗೆ ಜನ ಶಿಕ್ಷೆಗೊಳಗಾಗುತ್ತಿದ್ದಾರೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com