ಪರಿಷತ್‍ನಲ್ಲಿ ಇನ್ನೂ ಮದುವೆಯಾಗದೆ ಇರುವ ಹುಡುಗ-ಹುಡುಗಿಯರ ಬಗ್ಗೆ ಬಿಸಿ ಬಿಸಿ ಚರ್ಚೆ.!

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯ ಸರ್ಕಾರದ ಉಚಿತ‌ ಸಾಮೂಹಿಕ ವಿವಾಹಕ್ಕೆ ಬಳಕೆಯಾಗುವ ಹಣದ ಬಗೆಗಿನ‌ ಚರ್ಚೆ ಮದುವೆಯಾಗದ ಹುಡುಗ- ಹುಡುಗಿಯರ ಬಗ್ಗೆ ತಿರುಗಿ ಬಿಸಿ ಬಿಸಿ‌‌ ಚರ್ಚೆ ನಡೆದ‌ ಪ್ರಸಂಗ ನಡೆಯಿತು.
ಪ್ರೇಮಿಗಳು
ಪ್ರೇಮಿಗಳು

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯ ಸರ್ಕಾರದ ಉಚಿತ‌ ಸಾಮೂಹಿಕ ವಿವಾಹಕ್ಕೆ ಬಳಕೆಯಾಗುವ ಹಣದ ಬಗೆಗಿನ‌ ಚರ್ಚೆ ಮದುವೆಯಾಗದ ಹುಡುಗ- ಹುಡುಗಿಯರ ಬಗ್ಗೆ ತಿರುಗಿ ಬಿಸಿ ಬಿಸಿ‌‌ ಚರ್ಚೆ ನಡೆದ‌ ಪ್ರಸಂಗ ನಡೆಯಿತು.
  
ವಿಧಾನ ಪರಿಷತ್ ಕಲಾಪದಲ್ಲಿ ಮುಜರಾಯಿ ಇಲಾಖೆಯಿಂದ‌‌‌ ಆಯೋಜಿಸುವ ಉಚಿತ ಸಾಮೂಹಿಕ ವಿವಾಹ ಯೋಜನೆಯನ್ನು ಜೆಡಿಎಸ್ ಸದಸ್ಯ ಶರವಣ ಪ್ರಸ್ತಾಪಿಸಿದರು.ಸಾಮೂಹಿಕ ವಿವಾಸಕ್ಕೆ ದೇವಸ್ಥಾನದ ಹುಂಡಿ ಹಣವನ್ನು ಬಳಸಿಕೊಳ್ಳಲಾಗುತ್ತಿದೆ ಆದರೆ ಹುಂಡಿ‌ಹಣ ದೇವಾಲಯದ ಸಿಬ್ಬಂದಿಗೇ ಸಾಲುತ್ತಿಲ್ಲ ಅಂತಹದ್ದರಲ್ಲಿ‌ ಹುಂಡಿ ಹಣ ಬಳಸಿ ಪುಕ್ಕಟ್ಟೆ ಪ್ರಚಾರ ಪಡೆದು ಕೊಳ್ಳು ತ್ತಿದ್ದೀರಿ ಅದರ ಬದಲು ಸರ್ಕಾರದಿಂದಲೇ ಹಣ ಕೊಡಿ ಎಂದರು.
  
ಇದಕ್ಕೆ ಕಾಂಗ್ರೆಸ್ ನ ಜಯಮಾಲಾ ಹುಂಡಿಯದ್ದೋ‌ ಸರ್ಕಾರದ್ದೋ ಆದರೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಒಳ್ಳೆಯ ಯೋಜನೆ ಎಂದು‌ ರಾಜ್ಯ ಸರ್ಕಾರದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು‌ ಸ್ವಾಗತಿಸಿದರು.ನಮ್ಮಲ್ಲಿ ಎಷ್ಟೋ ಹೆಣ್ಣು ಮಕ್ಕಳು ಮದುವೆಯಾಗದೇ ಕೊಳೆಯುತ್ತಿದ್ದಾರೆ 30-40 ವರ್ಷ ಮದುವೆ ಇಲ್ಲದೆ ಕೊಳೆಯುತ್ತಿದ್ದಾರೆ ಇವಾಗ ಸರ್ಕಾರ ಉಚಿತ ವಿವಾಹ ಜಾರಿ ಮಾಡಿರೋದು  ಅವರಿಗೆ ತುಂಬಾ ಅನುಕೂಲ ಆಗಿದೆ ಎಂದರು.
  
ಜಯಮಾಲ ಅವರು ಹೇಳುತ್ತಿದ್ದಂತೆ ಎದ್ದು ನಿಂತ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಅಯ್ಯೋ ಆ ರೀತಿಯ ಪರಿಸ್ಥಿತಿ ಇವಾಗ ಇಲ್ಲಮ್ಮಾ, ನಮ್ಮ ಕಡೆ ಹುಡುಗರಿಗೆ ಹುಡುಗಿಯರು ಸಿಗ್ತಿಲ್ಲ ಎಂದರು.
  
ಮಾಧುಸ್ವಾಮಿ ಅವರ ಹೇಳಿಕೆಗೆ ಸಚಿವ ಸಿ.ಟಿ‌ ರವಿ ಪ್ರತಿಕ್ರಿಯಿಸಿ ಅಯ್ಯೋ ಬನ್ನಿ ನಮ್ಮ ಕಡೆ ಹುಡುಗೀಯರು ಇದ್ದಾರೆ, ಬೇಕಿದ್ದರೆ ನಿಮ್ಮ ಹುಡುಗರಿಗೆ ಹುಡುಗಿಯರನ್ನು ಹುಡುಕಿ ಕೊಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com