ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರ: ಕುಟುಂಬಸ್ಥರಿಗೆ ಟಿಕೆಟ್ ನೀಡಲು ಹೆಚ್ಚಿದ ಒತ್ತಡ

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ಸ್ಥಾನ ತೆರವಾಗಿದೆ. ಈ ನಿಟ್ಟಿನಲ್ಲಿ ಉಪ ಚುನಾವಣೆ ನಡೆಯಲಿದ್ದು ಕೆಲವು ಬಿಜೆಪಿ ನಾಯಕರು ಶತಾಯಗತಾಯ ತಮಗೆ ಟಿಕೆಟ್ ಸಿಗಬೇಕೆಂದು ಪ್ರಯತ್ನಿಸುತ್ತಿದ್ದಾರೆ.
ಸುರೇಶ್ ಅಂಗಡಿ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ(ಸಂಗ್ರಹ ಚಿತ್ರ)
ಸುರೇಶ್ ಅಂಗಡಿ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ(ಸಂಗ್ರಹ ಚಿತ್ರ)

ಬೆಳಗಾವಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ಸ್ಥಾನ ತೆರವಾಗಿದೆ. ಈ ನಿಟ್ಟಿನಲ್ಲಿ ಉಪ ಚುನಾವಣೆ ನಡೆಯಲಿದ್ದು ಕೆಲವು ಬಿಜೆಪಿ ನಾಯಕರು ಶತಾಯಗತಾಯ ತಮಗೆ ಟಿಕೆಟ್ ಸಿಗಬೇಕೆಂದು ಪ್ರಯತ್ನಿಸುತ್ತಿದ್ದಾರೆ.

ಆದರೆ ಬಿಜೆಪಿಯ ಹಲವು ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ ಮೊದಲಾದವರು ಸುರೇಶ್ ಅಂಗಡಿಯವರ ಪತ್ನಿ ಅಥವಾ ಮಗಳು ಶ್ರದ್ಧಾಗೆ ಟಿಕೆಟ್ ನೀಡಬೇಕೆಂದು ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜಗದೀಶ್ ಶೆಟ್ಟರ್ ಅವರು ತಮ್ಮ ಸೊಸೆ ಶ್ರದ್ಧಾಗೆ ಟಿಕೆಟ್ ಸಿಗಬೇಕೆಂದು ಬಯಸಿದರೆ ಇನ್ನು ಹಲವರು ಸುರೇಶ್ ಅಂಗಡಿಯವರ ಪತ್ನಿ ಮಂಗಳಾ ಅವರಿಗೆ ನೀಡಬೇಕೆಂದು ಕೇಳುತ್ತಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ರಮೇಶ್ ಜಾರಕಿಹೊಳಿಯವರ ಪುತ್ರ ಅಮರನಾಥ ಅವರಿಗೆ ಸಹ ಹಲವರಿಂದ ಬೆಂಬಲ ಸಿಗುತ್ತಿದೆ. ಆದರೆ ತಮ್ಮ ಪುತ್ರ ಟಿಕೆಟ್ ಆಕಾಂಕ್ಷಿಯಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ನನ್ನ ಸೋದರಿ ಸುರೇಶ್ ಅಂಗಡಿಯವರ ಪತ್ನಿ ಮಂಗಳಾ ಅವರಿಗೆ ಸಿಗಬೇಕೆಂದು ನನ್ನ ಬಯಕೆ ಎನ್ನುತ್ತಾರೆ.

ಸುರೇಶ್ ಅಂಗಡಿಯವರ ಸಂಬಂಧಿಕರು, ಬೆಂಬಲಿಗರು ಮತ್ತು ಸ್ನೇಹಿತರು ಅಂಗಡಿಯವರ ಪತ್ನಿ ಮಂಗಳಾಗೆ ಟಿಕೆಟ್ ಸಿಗಬೇಕೆಂದು ಬಯಸುತ್ತಿದ್ದಾರೆ. ಅಂಗಡಿಯವರ ಹತ್ತಿರದ ಬಂಧು ಲಿಂಗರಾಜ್ ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಅವರ ಕುಟುಂಬದವರಿಗೇ ನೀಡಬೇಕೆಂದು ಕೇಳುತ್ತಿದ್ದಾರೆ.

ಸುರೇಶ್ ಅಂಗಡಿಯವರ ಕುಟುಂಬಸ್ಥರು ರಾಜಕೀಯದಲ್ಲಿ ಯಾರೂ ಸಕ್ರಿಯವಾಗಿಲ್ಲ. ಹೀಗಿರುವಾಗ ಬಿಜೆಪಿ ಉನ್ನತ ಮಟ್ಟದ ನಾಯಕರು ಅದಕ್ಕೆ ಮಣೆ ಹಾಕುತ್ತಾರಾ ಎಂಬುದು ಇಲ್ಲಿರುವ ಕುತೂಹಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com