ನಾಯಕರ ಜೊತೆ ಸಮನ್ವಯ ಸಾಧಿಸುವುದು ಖಾಲಿ ಇರುವ ಜಾಗಕ್ಕೆ ಬೇಲಿ ಹಾಕುವಷ್ಟು ಸುಲಭವಲ್ಲ, ವಿಫಲಾಧ್ಯಕ್ಷರೇ!

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ಬಿಜೆಪಿ ಕರ್ನಾಟಕ ಹರಿಹಾಯ್ದಿದೆ,  ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜೊತೆ ಸಮನ್ವಯ ಸಾಧಿಸಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದು ಹರಿಹಾಯ್ದಿದೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Updated on: 

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ಬಿಜೆಪಿ ಕರ್ನಾಟಕ ಹರಿಹಾಯ್ದಿದೆ,  ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜೊತೆ ಸಮನ್ವಯ ಸಾಧಿಸಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದು ಹರಿಹಾಯ್ದಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಮಾನ್ಯ ಐಎನ್ ಸಿ ಕರ್ನಾಟಕದ ಭ್ರಷ್ಟ ಅಧ್ಯಕ್ಷರೇ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೊತೆ ಸಮನ್ವಯ ಸಾಧಿಸುವುದಕ್ಕೆ ಸಾಧ್ಯವಾಗಿಲ್ಲ, ಒಬ್ಬ ವ್ಯಕ್ತಿಯ ಜತೆಗೆ ಒಮ್ಮತ ಸಾಧ್ಯವಾಗದೇ ಇರುವಾಗ ಇನ್ನು ಉಳಿದ ಹಿರಿಯ ನಾಯಕರ ಜೊತೆಗೆ ಹೇಗೆ ಹೆಜ್ಜೆ ಹಾಕುತ್ತೀರಿ ಡಿಕೆ ಶಿವಕುಮಾರ್ ಅವರೇ ಎಂದು ಪ್ರಶ್ನಿಸಿದೆ.

ಇದು ಖಾಲಿ ಜಾಗಕ್ಕೆ ಬೇಲಿ ಹಾಕುವಷ್ಟು ಸುಲಭದ ಮಾತಲ್ಲ ಎಂಬುದು ಡಿಕೆ ಶಿವಕುಮಾರ್ ಅವರಿಗೆ ಅರ್ಥವಾಗಿರಬೇಕು. ಸಮನ್ವಯ ಸಾಧಿಸುವುದು ಸುಲಭದ ಮಾತೇ? ವಿಫಲಾಧ್ಯಕ್ಷ ಡಿಕೆ ಶಿವಕುಮಾರ್ ಎಂದು ಬಿಜೆಪಿ ಲೇವಡಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com