ಫಿಟ್ ನೆಸ್ ಗೂ ಸೈ, ಡ್ಯಾನ್ಸ್ ಗೂ ಸೈ: ಗೊರವರ ನೃತ್ಯ ಮಾಡಿದ ಸಿದ್ದರಾಮಯ್ಯ; ವಿಡಿಯೋ

ಇತ್ತೀಚಿಗಷ್ಟೇ ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ಓಡಿ ಫಿಟ್ ನೆಸ್ ಗೆ ಸೈ ಎಂದಿದ್ದ ಸಿದ್ದರಾಮಯ್ಯ ಇದೀಗ ಭರ್ಜರಿ ಸ್ಟೆಪ್ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಚಿತ್ರದುರ್ಗ: ಇತ್ತೀಚಿಗಷ್ಟೇ ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ಓಡಿ ಫಿಟ್ ನೆಸ್ ಗೆ ಸೈ ಎಂದಿದ್ದ ಸಿದ್ದರಾಮಯ್ಯ ಇದೀಗ ಭರ್ಜರಿ ಸ್ಟೆಪ್ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ ಗ್ರಾಮದಲ್ಲಿ ಗೊರವರ ನೃತ್ಯಕ್ಕೆ ಮನಸೋತ ಸಿದ್ದರಾಮಯ್ಯ, ತಾವು ಕೂಡಾ ಕೆಲಹೊತ್ತು ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.  ಕೈಯಲ್ಲಿ ಡಮರುಗ ಹಿಡಿದು ಡ್ಯಾನ್ಸ್ ಮಾಡಿದ ಸಿದ್ದರಾಮಯ್ಯ ನೆರೆದಿದ್ದ ಜನರನ್ನು ರಂಜಿಸಿದರು.

ಈ ಕುರಿತ ವಿಡಿಯೋವನ್ನು ಸಿದ್ದರಾಮಯ್ಯ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗೊರವರ ನೃತ್ಯದಲ್ಲಿ ಪಾಲ್ಗೊಂಡ ನಂತ ದಿನದ ಆಯಾಸವೆಲ್ಲ ಕಳೆದುಹೋಯಿತು. ಮೈಲಾರಲಿಂಗನ ಶಿಷ್ಯರೆಂದು ಕರೆದುಕೊಳ್ಳುವ ಗೊರವರು ಮಾಡುವ ಈ ನೃತ್ಯ ವಿಶಿಷ್ಠ ಜಾನಪದ ಕಲೆ. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com