ಗತಿಗೆಟ್ಟ ಸರ್ಕಾರ ನಡೆಸಲು ಸಿಎಂ ಬೊಮ್ಮಾಯಿಗೆ ನಾಚಿಕೆ ಎನಿಸುವುದಿಲ್ಲವೇ? ಕಾಂಗ್ರೆಸ್ ಕಟು ಟೀಕೆ

ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ವಾಹನ ಸವಾರರು ಬಿದ್ದು ನಡೆಯುತ್ತಿರುವ ಅವಾಂತರಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ದ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ವಾಹನ ಸವಾರರು ಬಿದ್ದು ನಡೆಯುತ್ತಿರುವ ಅವಾಂತರಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ದ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಕುರಿತ ಕನ್ನಡ ಪ್ರಭ ಆನ್ ಲೈನ್ ಪತ್ರಿಕೆಯ ವರದಿಯೊಂದನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ರಸ್ತೆ ಗುಂಡಿಗಳಿಗೆ ದಿನಕ್ಕೊಂದು ಹೆಣ ಬೀಳ್ತಿವೆ. ಜನರ ಸಾವುಗಳನ್ನು ಶೇ. 40 ಕಮಿಷನ್ ಸರ್ಕಾರ ಮರದ ಎಲೆಗಳು ಉದುರಿದಂತೆ ಲಘುವಾಗಿ ಪರಿಗಣಿಸಿದೆ ಎಂದು ಆರೋಪಿಸಿದೆ.

ರಸ್ತೆ ಗುಂಡಿಗಳಿಗೆ ದಿನಕ್ಕೊಂದು ಹೆಣ ಬೀಳ್ತಿವೆ, ಜನರ ಸಾವುಗಳನ್ನು #40PercentSarkara ಮರದ ಎಲೆಗಳು ಉದುರಿದಂತೆ ಲಘುವಾಗಿ ಪರಿಗಣಿಸಿದೆ.

ಹೈಕೋರ್ಟ್ ಹಲವು ಬಾರಿ ಚಾಟಿ ಬೀಸಿದರೂ ರಸ್ತೆ ಗುಂಡಿಗಳನ್ನ ಮುಚ್ಚದ ಸರ್ಕಾರ ಬಂಡತನದ ಪರಮಾವಧಿಗೆ ತಲುಪಿದೆ.@BSBommai ಅವರೇ, ಇಂತಹ ಗತಿಗೆಟ್ಟ ಸರ್ಕಾರ ನಡೆಸಲು ನಾಚಿಕೆ ಎನಿಸುವುದಿಲ್ಲವೇ?#SayCM pic.twitter.com/95kGj2W9x5

ಹೈಕೋರ್ಟ್ ಹಲವು ಬಾರಿ ಚಾಟಿ ಬೀಸಿದರೂ ರಸ್ತೆ ಗುಂಡಿಗಳನ್ನು ಮುಚ್ಚದ ಸರ್ಕಾರ ಬಂಡತನದ ಪರಮಾವಧಿಗೆ ತಲುಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಇಂತಹ ಗತಿಗೆಟ್ಟ ಸರ್ಕಾರ ನಡೆಸಲು ನಾಚಿಕೆ ಎನಿಸುವುದಿಲ್ಲವೇ? ಎಂದು ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com