ಮುಂದಿನ ಮುಖ್ಯಮಂತ್ರಿ ಇವ್ರೇ! ಸಿದ್ದು, ಡಿಕೆಶಿ ಮನೆ ಮುಂದೆ ಫೋಸ್ಟರ್ ಹಾಕಿದ ಅಭಿಮಾನಿಗಳು

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಿವಾಸದ ಮುಂದೆ ಫೋಸ್ಟರ್ ಹಾಕುವ ಮೂಲಕ ಮುಂದಿನ ಸಿಎಂ ಎನ್ನುತ್ತಿದ್ದಾರೆ.
ಸಿದ್ದು, ಡಿಕೆಶಿ ಫೋಸ್ಟರ್
ಸಿದ್ದು, ಡಿಕೆಶಿ ಫೋಸ್ಟರ್

ಬೆಂಗಳೂರು: ನೂತನ  ಸರ್ಕಾರ ರಚನೆಯ ಪ್ರಕ್ರಿಯೆಗಳು ನಡೆಯುತ್ತಿದ್ದು, ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ನೂತನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಿಎಂ ಹುದ್ದೆಯ ಪ್ರಮುಖ ಆಕಾಂಕ್ಷಿಗಳಾಗಿದ್ದು, ಶಾಸಕರ ಬೆಂಬಲ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. 

ಇನ್ನೂ ಸಿಎಂ ಯಾರು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಆಗಲೇ ಅವರು ಅಭಿಮಾನಿಗಳು ಮುಂದಿನ ಸಿಎಂ ಅಂತಾ ಬ್ಯಾನರ್ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಿವಾಸದ ಮುಂದೆ ಫೋಸ್ಟರ್ ಹಾಕುವ ಮೂಲಕ ಮುಂದಿನ ಸಿಎಂ ಎನ್ನುತ್ತಿದ್ದಾರೆ.

ರಾಜ್ಯದ 2ನೇ ಬಾರಿಗೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಿದ್ದರಾಮಯ್ಯ ಅಭಿನಂದನೆಗಳು ಎಂದು ಅವರ ಮನೆ ಮುಂಭಾಗ ಫೋಸ್ಟರ್ ಹಾಕಲಾಗಿದೆ. ಡಿಕೆ ಶಿವಕುಮಾರ್ ಅವರ ಮನೆ ಮುಂದೆಯೂ ಇದೇ ರೀತಿಯ ಫೋಸ್ಟರ್ ಹಾಕಿ ಶುಭ ಕೋರಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com