ವಿಧಾನಸಭಾ ಚುನಾವಣೆ: ಟಿಕೆಟ್ ಗಾಗಿ 6 ಮಂದಿ ಮಾಜಿ ಕಾರ್ಪೋರೇಟರ್ ಗಳಿಂದ ಲಾಬಿ!
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಈ ನಡುವಲ್ಲೇ ಪಕ್ಷದಿಂದ ಟಿಕೆಟ್ ಪಡೆದುಕೊಳ್ಳಲು 6 ಮಂದಿ ಬಿಬಿಎಂ ಮಾಜಿ ಕಾರ್ಪೋರೇಟರ್ ಗಳು ಎಲ್ಲಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
Published: 30th January 2023 01:42 PM | Last Updated: 30th January 2023 05:26 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಈ ನಡುವಲ್ಲೇ ಪಕ್ಷದಿಂದ ಟಿಕೆಟ್ ಪಡೆದುಕೊಳ್ಳಲು 6 ಮಂದಿ ಬಿಬಿಎಂ ಮಾಜಿ ಕಾರ್ಪೋರೇಟರ್ ಗಳು ಎಲ್ಲಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಜನರ ಮನವೊಲಿಸಲು ಹಾಗೂ ಪಕ್ಷದ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲು ಬ್ಯಾನರ್ ಗಳ ಹಾಕುವುದು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಸುವುದು, ಭಕ್ತರ ತೀರ್ಥಯಾತ್ರೆಗೆ ಬಸ್ ಗಳ ವ್ಯವಸ್ಥೆ ಮಾಡುವುದು ಸೇರಿದಂತೆ ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ.
2010ರಿಂದ 2015ರ ವರೆಗೆ ಜೋಗುಪಾಳ್ಯ ವಾರ್ಡ್ ಪ್ರತಿನಿಧಿಸಿದ್ದ ಮಾಜಿ ಮೇಯರ್ ಗೌತಮ್‌ಕುಮಾರ್ ಜೈನ್ ಬಿಜೆಪಿಯಿಂದ ಟಿಕೆಟ್ ಪಡೆದುಕೊಳ್ಳಲು ಲಾಬಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಈ ಸಂಬಂಧ ಕೇಂದ್ರ ಸರ್ಕಾರದ ಪ್ರಭಾವಿ ಸಚಿವರೊಬ್ಬರನ್ನು ಸಂಪರ್ಕಿಸಿರುವ ಗೌತಮ್ ಕುಮಾರ್ ಜೈನ್ ಅವರು, ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಹಲವು ವರ್ಷಗಳಿಂದ ನಾನು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಶಾಂತಿನಗರದ ನಿವಾಸಿಗಳ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆಂದು ಜೈನ್ ಹೇಳಿದ್ದಾರೆ.
ಗೌತಮ್ ಅವರಂತೆ ಜಯನಗರ ವಿಧಾನಸಭಾ ಕ್ಷೇತ್ರದ ಪಟ್ಟಾಭಿರಾಮ ನಗರ ವಾರ್ಡ್‌ನಿಂದ ಎರಡು ಬಾರಿ ಕಾರ್ಪೊರೇಟರ್ ಆಗಿರುವ ಸಿಎಂ ರಾಮಮೂರ್ತಿ ಕೂಡ ಪಕ್ಷದ ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆ.
ಮೂರು ವರ್ಷಗಳಿಂದ ವಿಧಾನಸಭಾ ಕ್ಷೇತ್ರದಲ್ಲಿ ರಾಮಮೂರ್ತಿಯವರು ಕೆಲಸ ಮಾಡುತ್ತಿದ್ದೇನೆ. 45 ಸಾವಿರ ಜನ ಒಂದೇ ಸಮುದಾಯಕ್ಕೆ ಸೇರಿದವರು ಕ್ಷೇತ್ರದಲ್ಲಿದ್ದು, ನನ್ನ ಜಾತಿ ನನಗೆ ಅನುಕೂಲ ಮಾಡಿಕೊಡಲಿದೆ ಎಂಬ ನಂಬಿಕೆ ಇದೆ ಎಂದು ರಾಮಮೂರ್ತಿಯವರು ಹೇಳಿದ್ದಾರೆ.
“ನಾನು ಜನರ ಮನೆ ಬಾಗಿಲಿಗೆ ಹೋಗುತ್ತಿದ್ದೇನೆ. ಸಾಂಸ್ಕೃತಿಕ. ಉತ್ಸವ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇನೆ. ಜತೆಗೆ ಶೇ.10ರಷ್ಟು ಮುಸ್ಲಿಮರು ನನಗೆ ಮತ ಹಾಕುತ್ತಾರೆ, ಒಕ್ಕಲಿಗ ಮತ್ತು ಕ್ರೈಸ್ತ ಸಮುದಾಯದವರಲ್ಲಿಯೂ ನಾನು ಜನಪ್ರಿಯತೆ ಗಳಿಸಿದ್ದೇನೆಂದು ತಿಳಿಸಿದ್ದಾರೆ.
ಸಾರಕ್ಕಿ ವಾರ್ಡ್‌ನಿಂದ ಮಾಜಿ ಮೇಯರ್ ಎಸ್‌ಕೆ ನಟರಾಜ್ ಮತ್ತು ಯಡಿಯೂರಿನಿಂದ ಎನ್‌ಆರ್ ರಮೇಶ್ ಕೂಡ ಜಯನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅದೇ ರೀತಿ ಮತ್ತೊಬ್ಬ ಮಾಜಿ ಮೇಯರ್ ಜಿ.ಪದ್ಮಾವತಿ ಕೂಡ ರಾಜಾಜಿನಗರ ಕ್ಷೇತ್ರಕ್ಕೆ ಲಾಬಿ ನಡೆಸುತ್ತಿದ್ದು, ಟಿಕೆಟ್ ಪಡೆದುಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಬಲ ನೀಡುತ್ತಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಬಿಜೆಪಿ ಮಹದಾಯಿ ವಿವಾದವನ್ನು ಬಗೆಹರಿಸಿದೆ, ನೀವು ಜೆಡಿಎಸ್ ಗೆ ಮತ ಹಾಕಿದರೆ ಅದು ಕಾಂಗ್ರೆಸ್ ಗೆ ಹೋಗುತ್ತದೆ: ಅಮಿತ್ ಶಾ
2018ರ ಚುನಾವಣೆಯಲ್ಲಿ ಸೋಲು ಕಂಡಿದ್ದೆ. ಆದರೆ, ಕಳದ 4 ವರ್ಷಗಳಿಂದ ಜನರಪರವಾದ ಕೆಲಸ ಮಾಡಿದ್ದೇನೆ. ಇತ್ತೀಚೆಗೆ ಜನರಿಗಾಗಿ ತೀರ್ಥಯಾತ್ರೆಗೆ 15ಕ್ಕೂ ಹೆಚ್ಚು ಬಸ್ ಗಳ ವ್ಯವಸ್ಥೆ ಮಾಡಿದ್ದೇನೆ. ಆಟೋರಿಕ್ಷಾಗಳ ಖರೀದಿಸಲು ಬಯಸಿದ್ದವರಿಗೆ ಸಾಲ ಕೊಡಿಸಿದ್ದೇನೆ. ಕಲ್ಯಾಣ ಕಾರ್ಯಕ್ರಮಗಳ ಕೈಗೊಂಡಿದ್ದೇನೆಂದು ಪದ್ಮಾವತಿ ಹೇಳಿದ್ದಾರೆ.
ಶಂಕರ ಮಠದ ವಾರ್ಡ್'ನ ಎನ್ ಶಿವರಾಜು ಅವರು, 2019 ರ ಡಿಸೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಕೆ ಗೋಪಾಲಯ್ಯ ವಿರುದ್ಧ ಸೋತಿದ್ದ ಮಹಾಲಕ್ಷ್ಮಿ ಲೇಔಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.