ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ
ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ

ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಪರ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಪ್ರಚಾರ!

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ ಪರವಾಗಿ ಶನಿವಾರ ಮತಯಾಚನೆ ಮಾಡಿದರು.

ಬೆಂಗಳೂರು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ ಪರವಾಗಿ ಶನಿವಾರ ಮತಯಾಚನೆ ಮಾಡಿದರು.

ಪ್ರಚಾರದ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿರುವ ರೇವಂತ್​ ರೆಡ್ಡಿ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ದೇವೇಗೌಡರು ಹಾಗೂ ಅವರ ಮಗನನ್ನು ಭ್ರಷ್ಟಾಚಾರದ ಮೇಲೆ ಜೈಲಿಗೆ ಕಳುಹಿಸುತ್ತೇನೆ ಎಂದು ವರ್ಷದ ಹಿಂದೆ ಮೋದಿ ಹೇಳಿದ್ದರು. ಆದರೆ ಈಗ ಅವರ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಮೋದಿಯವರು ದೇವೇಗೌಡ ಕುಟುಂಬದ ಬಗ್ಗೆ ಹೇಳಿರುವುದನ್ನು ಮರೆತಿದ್ದಾರೆ. ಈಗ ಗಾಲಿ ಜನಾರ್ಧನ ರೆಡ್ಡಿಯವರೂ ಮೋದಿಯ ಪಕ್ಕ ಕೂತಿದ್ದಾರೆ. ಅದರ ಅರ್ಥ ಮೋದಿಯವರು ಹೇಳಿದ್ದನ್ನೂ ಯಾವುದೂ ಮಾಡುವುದಿಲ್ಲ. ಹೇಳುವುದು ಒಂದು ಮಾಡುವುದು ಇನ್ನೊಂದು. ಕೇವಲ ಚುನಾವಣೆ ಗೆಲ್ಲಲು ಯೋಚನೆ ಮಾಡುತ್ತಾರೆಯೇ ಹೊರತು, ಕರ್ನಾಟಕ ಅಭಿವೃದ್ಧಿಗೆ ಏನನ್ನೂ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಗುಜರಾತಿನ ಏಳು ಸಂಸದರಿಗೆ ಸಂಪುಟ ಸಚಿವ ಸ್ಥಾನ ನೀಡಿದೆ. ಉತ್ತರ ಪ್ರದೇಶದ 18 ಸಂಸದರಿಗೆ ಸಂಪುಟ ಸ್ಥಾನ ನೀಡಿತ್ತು. ಆದರೆ, 25 ಸ್ಥಾನ ಗೆಲ್ಲಿಸಿ ಕೊಟ್ಟಿದ್ದ ಕರ್ನಾಟಕದಲ್ಲಿ ಪ್ರಹ್ಲಾದ್ ಜೋಷಿಗೆ ಮಾತ್ರ ಸಂಪುಟ ಸಚಿವ ಸ್ಥಾನ ನೀಡಿದೆ. ಇದು ಕರ್ನಾಟಕಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದರು.

ಗುಜರಾತ್, ಉತ್ತರ ಪ್ರದೇಶದವರಿಗೆ ಕೇಂದ್ರ ಸಂಪುಟದಲ್ಲಿ ಪ್ರಮುಖ ಸಚಿವ ಸ್ಥಾನ ನೀಡಲಾಗಿದೆ. ಕರ್ನಾಟಕ, ತೆಲಂಗಾಣದವರಿಗೆ ಪ್ರಮುಖ ಖಾತೆಗಳನ್ನು ಏಕೆ ನೀಡುತ್ತಿಲ್ಲ?. ಗುಜರಾತ್, ಉತ್ತರ ಪ್ರದೇಶದಲ್ಲಿ ಮಾತ್ರ ಸಮರ್ಥ ನಾಯಕರಿರೋದಾ?. ಕರ್ನಾಟಕ, ತೆಲಂಗಾಣದಲ್ಲಿ ಸಮರ್ಥ ನಾಯಕರು ಇಲ್ವಾ?. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯನಾ ಎಂದು ಪ್ರಶ್ನಿಸಿದರು.

ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ
ಅಂದು ಬಿಜೆಪಿ ವಿರುದ್ಧ 'ಪೇಸಿಎಂ', ಇಂದು 'ಚೊಂಬು' ಅಭಿಯಾನ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ

ಈ ಲೋಕಸಭೆ ಚುನಾವಣೆ ಎರಡು ಪರಿವಾರದ ನಡುವಿನ ಯುದ್ಧ. ಮೋದಿ ನೇತೃತ್ವದ ಇವಿ ಮಷಿನ್, ಇಡಿ, ಐಟಿ, ಸಿಬಿಐ, ಅದಾನಿ, ಅಂಬಾನಿಯ ಒಂದು ಪರಿವಾರವಾಗಿದ್ದರೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ, ಮನ್ಸೂರ್ ಅಲಿ ಖಾನ್ ನಮ್ಮ ಪರಿವಾರವಾಗಿದೆ. ಈ ಎರಡು ಪರಿವಾರದ ನಡುವಿನ ಯುದ್ಧವಾಗಿದೆ ಎಂದು ತಿಳಿಸಿದರು.

ದೇಶಕ್ಕೆ ಕಪ್ಪು ಹಣ ತರುತ್ತೇವ, 15 ಲಕ್ಷ ಹಣವನ್ನು ನಿಮ್ಮ ಖಾತೆ​ಗೆ ಹಾಕುತ್ತೇವೆಂದು ಹೇಳಿದ್ದರು. ಹಾಕಿದ್ದಾರಾ..? ಒಂದು ಪೈಸೆಯೂ ಯಾರ ಖಾತೆಗೂ ಬಂದಿಲ್ಲ. ಕುಟುಂಬ ರಾಜಕೀಯದ ಬಗ್ಗೆ ಮೋದಿ ಮಾತನಾಡುತ್ತಾರೆ, ಆದರೆ ಯಡಿಯೂರಪ್ಪ ಮಗ ವಿಜಯೇಂದ್ರ ಪಕ್ಷದ ಅಧ್ಯಕ್ಷ, ಮತ್ತೊಬ್ಬರು ಸಂಸದರು. ರಾಜನಾಥ್ ಸಿಂಗ್ ಕೇಂದ್ರ ಸಚಿವ ಅವರ ಮಗ ಶಾಸಕ, ತೇಜಸ್ವಿ ಸೂರ್ಯ ಸಂಸದ, ಅವರ ಚಿಕ್ಕಪ್ಪ ಶಾಸಕರು, ನಿಮ್ಮ ಪಾರ್ಟಿಯಲ್ಲಿ ಇರುವವರೆಲ್ಲರೂ ಕುಟುಂಬ ರಾಜಕೀಯ ಮಾಡುವವರೇ ಆಗಿದ್ದಾರೆ. ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಐದು ಗ್ಯಾರಂಟಿ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಕರ್ನಾಟಕದಲ್ಲಿ ಅನುಷ್ಠಾನ‌ ಮಾಡಿ ನುಡಿದಂತೆ ನಡೆದಿದೆ. ನುಡಿದಂತೆ ನಡೆದ ಕಾಂಗ್ರೆಸ್​​ಗೆ ಮತ ಹಾಕುತ್ತೀರಾ? ಇಲ್ಲ ನಂಬಿಸಿ ಮೋಸ ಮಾಡುವ ಮೋದಿಗೆ ಮತ ಹಾಕುತ್ತೀರಾ? ಎಂದು ಪ್ರಶ್ನಿಸಿದರು. ಇದೇ ವೇಳೆ ಮನ್ಸೂರ್ ಅವರನ್ನು ಆಯ್ಕೆ ಮಾಡುವಂತೆ ಜನತೆಗೆ ಕರೆ ನೀಡಿದರು.

Related Stories

No stories found.

Advertisement

X
Kannada Prabha
www.kannadaprabha.com