ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋಗಲ್ಲ, ಈ ಬಗ್ಗೆ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ: ಸಿಎಂ ಸಿದ್ದರಾಮಯ್ಯ

ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಸುದ್ದಿಯೊಂದು ಜೋರಾಗಿ ಹರಿದಾಡುತ್ತಿದೆ. ಅದು ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಜೊತೆ ಮುನಿಸಿಕೊಂಡು ಬಿಜೆಪಿ ತೊರೆದು ಹೋಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೈ ತೊರೆದು ಮತ್ತೆ ಕಮಲ ಕೈಹಿಡಿಯುತ್ತಾರೆ ಎನ್ನುವುದು.
ಜಗದೀಶ್ ಶೆಟ್ಟರ್-ಸಿಎಂ ಸಿದ್ದರಾಮಯ್ಯ
ಜಗದೀಶ್ ಶೆಟ್ಟರ್-ಸಿಎಂ ಸಿದ್ದರಾಮಯ್ಯ
Updated on: 

ಮೈಸೂರು/ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಸುದ್ದಿಯೊಂದು ಜೋರಾಗಿ ಹರಿದಾಡುತ್ತಿದೆ. ಅದು ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಜೊತೆ ಮುನಿಸಿಕೊಂಡು ಬಿಜೆಪಿ ತೊರೆದು ಹೋಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೈ ತೊರೆದು ಮತ್ತೆ ಕಮಲ ಕೈಹಿಡಿಯುತ್ತಾರೆ ಎನ್ನುವುದು.

ಇದಕ್ಕೆ ಜಗದೀಶ್ ಶೆಟ್ಟರ್ ಒಪ್ಪಿಗೆ ಸೂಚಿಸಿದ್ದಾರೆ ಮತ್ತು ಬಿಜೆಪಿ ಹೈಕಮಾಂಡ್ ಕೂಡ ಸಮ್ಮತಿ ನೀಡಿದೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ಕೇಳಿಬರುತ್ತಿದೆ. ಇದಕ್ಕೆ ಮೈಸೂರಿನಲ್ಲಿಂದು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದು ಹೋಗುವುದಿಲ್ಲ, ನನಗೆ ಚೆನ್ನಾಗಿ ಗೊತ್ತಿದೆ, ಒಂದು ವೇಳೆ ಹೋಗಲು ಅವರು ಮನವೊಲಿಸಿದರೂ ಅವರನ್ನು ಉಳಿಸಿಕೊಳ್ಳಲು ಮನ ಒಲಿಸುತ್ತೇವೆ ಎಂದರು.

ಜಗದೀಶ್ ಶೆಟ್ಟರ್ದೆಹಲಿ ಪ್ರವಾಸದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಜಗದೀಶ್ ಶೆಟ್ಟರ್ ನನಗೆ ಅವಮಾನವಾಗಿರುವ ಪಕ್ಷಕ್ಕೆ ಹೋಗಲ್ಲ ಅಂತಾ ಹೇಳಿದ್ದಾರೆ. ಅಲ್ಲೇ ಉತ್ತರ ಇದೆ ಅಲ್ಲವಾ. ಯಾರು ಎಷ್ಟೇ ಪ್ರಯತ್ನ ಮಾಡಿದ್ರು ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋಗಲ್ಲ. ಈ ಬಗ್ಗೆ ಶೆಟ್ಟರ್​ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

ರಾಮಮಂದಿರದ ಕುರಿತು ಪ್ರತಿಕ್ರಿಯಿಸಿದ ಸಿಎಂ, ರಾಜಕೀಯವಾಗಿ ಅನುಕೂಲ ಆಗುತ್ತದೆ ಎಂದು ಆತುರವಾಗಿ ರಾಮ ಮಂದಿರ ಉದ್ಘಾಟನೆ ಮಾಡಿದ್ದಾರೆ. ರಾಮಮಂದಿರ ಪೂರ್ಣವಾಗಿ ನಿರ್ಮಾಣವಾಗಿಲ್ಲ. ರಾಮ ಮಂದಿರದಿಂದ ರಾಜಕೀಯ ಲಾಭ ಆಗುತ್ತೆ ಅನ್ನೋದು ಸಾಧ್ಯವಿಲ್ಲ ಎಂದು ಹೇಳಿದರು.

ನಮ್ಮ ದೇಶದ ಜನ ಪ್ರಜಾಪ್ರಭುತ್ವವನ್ನ ಒಪ್ಪಿಕೊಂಡಿದ್ದು, ಇಲ್ಲಿ ಅದೇ ಮುಖ್ಯವಾಗುತ್ತದೆ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ. ಜಾತಿಗಣತಿ ವರದಿ ನನಗೆ ಗೊತ್ತಿಲ್ಲ. ವರದಿ ಕೊಡಲು ಅವರು ಸಮಯಕ್ಕೆ ಕೇಳಿಲ್ಲ. ಕೇಳಿದರೆ ಸಮಯ ಕೊಡುತ್ತೇವೆ. ನಂತರ ವರದಿ ಪಡೆಯುತ್ತೇವೆ ಎಂದರು.

ಯಾರು ಆ ವರದಿಯನ್ನ ನೋಡಿಲ್ಲ. ಹೀಗಾಗಿ ಅದರ ಬಗ್ಗೆ ಏನು ಮಾತನಾಡಲು ಸಾಧ್ಯವಾಗಿಲ್ಲ. ವರದಿ ಕೊಟ್ಟ ನಂತರ ಪರಿಶೀಲನೆ ಕೂಡ ಇರುತ್ತದೆ ಎಂದು ಮಾಹಿತಿ ನೀಡಿದರು.

ಯುವಕರು ಇದನ್ನು ಗಮನಿಸಬೇಕು: ಒನ್ ನೇಷನ್, ಒನ್ ಎಲೆಕ್ಷನ್ ಪ್ರಾಕ್ಟಿಕಲ್ಲಾಗಿ ಸಾಧ್ಯನಾ ಅನ್ನೋದನ್ನ ನೋಡಬೇಕು. ಸಂವಿಧಾನದ ಪರವಾಗಿರುತ್ತಾ ಅನ್ನೋದು ಮುಖ್ಯ. ಸಂವಿಧಾನ ರಕ್ಷಣೆ ಆದರೆ ಒಳಿತು. ಸಂವಿಧಾನಕ್ಕೆ ಧಕ್ಕೆ ತರುವಂತಹ ಕೆಲಸ ಆಗುತ್ತಿದೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ. ಇದನ್ನೆಲ್ಲಾ ಯುವಕರು ಗಮನಿಸಬೇಕಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com