ಸಿದ್ದವಾಯ್ತು ವಿಶ್ವದ ಅತೀ ದೊಡ್ಡ ಟೆಲಿಸ್ಕೋಪ್; ಏಲಿಯನ್ ಹುಡುಕಾಟಕ್ಕೆ ಮತ್ತೆ ಚಾಲನೆ!

ಅನ್ಯಗ್ರಹ ಜೀವಿಗಳ ಸಂಶೋಧನೆಗಾಗಿ ನಿರ್ಮಿಸಲಾಗುತ್ತಿದ್ದ ವಿಶ್ವದ ಅತೀ ದೊಡ್ಡ ಟೆಲಿಸ್ಕೋಪ್ ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಶೀಘ್ರದಲ್ಲೇ ತನ್ನ ಕಾರ್ಯಾರಂಭ ಮಾಡಲಿದೆ ಎಂದು ಚೀನಾದ ವಿಜ್ಞಾನಿಗಳು ಹೇಳಿದ್ದಾರೆ.
ನೈಋತ್ಯ ಚೀನಾದ ಗಿಜೌ ಪ್ರಾಂತ್ಯದಲ್ಲಿ ನಿರ್ಮಾಣವಾಗಿರುವ ಫಾಸ್ಟ್ ಟೆಲಿಸ್ಕೋಪ್ (ಸಂಗ್ರಹ ಚಿತ್ರ)
ನೈಋತ್ಯ ಚೀನಾದ ಗಿಜೌ ಪ್ರಾಂತ್ಯದಲ್ಲಿ ನಿರ್ಮಾಣವಾಗಿರುವ ಫಾಸ್ಟ್ ಟೆಲಿಸ್ಕೋಪ್ (ಸಂಗ್ರಹ ಚಿತ್ರ)

ಬೀಜಿಂಗ್: ಅನ್ಯಗ್ರಹ ಜೀವಿಗಳ ಸಂಶೋಧನೆಗಾಗಿ ನಿರ್ಮಿಸಲಾಗುತ್ತಿದ್ದ ವಿಶ್ವದ ಅತೀ ದೊಡ್ಡ ಟೆಲಿಸ್ಕೋಪ್ ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಶೀಘ್ರದಲ್ಲೇ ತನ್ನ ಕಾರ್ಯಾರಂಭ ಮಾಡಲಿದೆ  ಎಂದು ಚೀನಾದ ವಿಜ್ಞಾನಿಗಳು ಹೇಳಿದ್ದಾರೆ.

ನೈಋತ್ಯ ಚೀನಾದಲ್ಲಿ ನಿರ್ಮಿಸಲಾಗಿರುವ ಬೃಹತ್ ಟೆಲಿಸ್ಕೋಪ್ ಗೆ ಫಾಸ್ಟ್ ಎಂದು ನಾಮಕರಣ ಮಾಡಲಾಗಿದ್ದು, ಇಂದು ಈ ಬೃಹತ್ ಟೆಲಿಸ್ಕೋಪ್ ನ ಪ್ರಾಯೋಗಿಕ ಕಾರ್ಯಾಚರಣೆ  ನಡೆಯಲಿದೆ. ಸುಮಾರು 500 ಮೀಟರ್ ಅಗಲವಿರುವ ಈ ಟೆಲಿಸ್ಕೋಪ್  4.450 ಗಾಜಿನ ಪ್ಯಾನಲ್ ಗಳನ್ನು ಅಳವಡಿಸಲಾಗಿದ್ದು, ಪ್ರತಿ ಪ್ಯಾನಲ್ 11 ಮೀಟರ್ ಅಗಲವಿದೆ. ಚೀನಾ  ಆಸ್ಟ್ರೋನಾಮಿಕಲ್ ಆಬ್ಸರೆವೆಟಿವ್ಸ್ ಮತ್ತು ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ಈ ಬೃಹತ್ ಟೆಲಿಸ್ಕೋಪ್ ಅನ್ನು ನಿರ್ಮಿಸಿದೆ.

ಅಮೆರಿಕದ ಅರ್ಥ್-2 ಕೆಪ್ಲರ್ ಟೆಲಿಸ್ಕೋಪ್ ಗಿಂತಲೂ ಚೀನಾದ ಫಾಸ್ಟ್ ಬೃಹದಾಕಾರವಾಗಿದ್ದು, ಈ ರೇಡಿಯೋ ಟೆಲಿಸ್ಕೋಪ್ ಸುಮಾರು 30 ಫುಟ್ ಬಾಲ್ ಕ್ರೀಡಾಗಂಣದಷ್ಟು ದೊಡ್ಡದಾಗಿದೆ.

ಈ ಬೃಹತ್ ಟೆಲಿಸ್ಕೋಪ್ ನಿರ್ಮಾಣ ಕುರಿತಂತೆ ಮಾತನಾಡಿರುವ  ಚೀನಾ ಆಸ್ಟ್ರೋನಾಮಿಕಲ್ ಸೊಸೈಟಿ ಮುಖ್ಯಸ್ಥ ವು ಕ್ಸಿಯಾಂಗ್ ಪಿಂಗ್ ಅವರು, ಫಾಸ್ಟ್ ಟೆಲಿಸ್ಕೋಪ್ ಮುಖಾಂತರವಾಗಿ  ನಮ್ಮ ಗ್ಯಾಲಕ್ಸಿಯಿಂದ ಹೊರಗಿರುವ ಜೀವರಾಶಿಗಳ ಅಥವಾ ಏಲಿಯನ್ ಗಳ ಕುರಿತು ಅಧ್ಯಯನ ಮಾಡಲು ನೆರವಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಬೃಹತ್ ಟೆಲಿಸ್ಕೋಪ್ ನಿರ್ಮಾಣ ಕಾರ್ಯ 2011ರಲ್ಲೇ ಆರಂಭವಾಗಿ 2012ರ ಅಂತ್ಯದ ವೇಳೆ ಪೂರ್ಣಗೊಳ್ಳಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಇದರ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ಸಾಗಿತ್ತು. ಈ ಟೆಲಿಸ್ಕೋಪ್ ನಿರ್ಮಾಣಕ್ಕೆ ಸುಮಾರು 10 ಸಾವಿರ ಮಂದಿ ಶ್ರಮದಾನ ಮಾಡಿದ್ದು, ಟೆಲಿಸ್ಕೋಪ್ ಸಮೀಪದಲ್ಲೇ 5 ಕಿ.ಮೀ ವ್ಯಾಪ್ತಿಯಲ್ಲಿ ಇವರೆಲ್ಲರಿಗೂ ವಸತಿ ವ್ಯವಸ್ಥೆ ಮಾಡಲಾಗಿತ್ತಂತೆ.

ಒಟ್ಟಾರೆ ಬೃಹತ್ ಕಟ್ಟಡ ಹಾಗೂ ಕೃತಕ ದ್ವೀಪಗಳ ನಿರ್ಮಾಣದಲ್ಲಿ ಖ್ಯಾತಿ ಗಳಿಸಿರುವ ಚೀನಾ ಇದೀಗ ಟೆಲಿಸ್ಕೋಪ್ ನಿರ್ಮಾಣ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com