ಭೂಮಿಯ ಕಕ್ಷೆಯಿಂದ ಯಶಸ್ವಿಯಾಗಿ ಹೊರಹೋದ ಆದಿತ್ಯ ಎಲ್​-1: ಸೂರ್ಯಯಾನ ಯಾತ್ರೆ ಆರಂಭ

ಚಂದ್ರಯಾನ 3 ಬಳಿಕ ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಆದಿತ್ಯ ಎಲ್-1 ಎಲ್ಲರ ಭರವಸೆ ನೆಟ್ಟಿದ್ದು, ನಿರೀಕ್ಷೆಯಂತೆಯೇ ಆದಿತ್ಯ ಎಲ್-​1 ಭೂಮಿಯ 5 ಕಕ್ಷೆಗಳ ಬದಲಿಸಿ ಇದೀಗ ಭೂಮಿಯಿಂದ ಹೊರಗೆ ಬಂದಿದೆ, ಬೂಮಿಯ ಕಕ್ಷೆಯಿಂದ ಹೊರಬಂದಿರುವ ಆದಿತ್ಯ ಎಲ್-1 ಭೂಮಿಯ...
ಆದಿತ್ಯ ಎಲ್​-1
ಆದಿತ್ಯ ಎಲ್​-1

ನವದೆಹಲಿ: ಚಂದ್ರಯಾನ 3 ಬಳಿಕ ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಆದಿತ್ಯ ಎಲ್-1 ಎಲ್ಲರ ಭರವಸೆ ನೆಟ್ಟಿದ್ದು, ನಿರೀಕ್ಷೆಯಂತೆಯೇ ಆದಿತ್ಯ ಎಲ್-​1 ಭೂಮಿಯ 5 ಕಕ್ಷೆಗಳ ಬದಲಿಸಿ ಇದೀಗ ಭೂಮಿಯಿಂದ ಹೊರಗೆ ಬಂದಿದೆ, ಬೂಮಿಯ ಕಕ್ಷೆಯಿಂದ ಹೊರಬಂದಿರುವ ಆದಿತ್ಯ ಎಲ್-1 ಭೂಮಿಯ ಸುತ್ತಲಿನ ದತ್ತಾಂಶಗಳ ಸಂಗ್ರಹ ಕಾರ್ಯವನ್ನು ಆರಂಭಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಈ ಬಗ್ಗೆ ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)​ನಲ್ಲಿ ಪೋಸ್ಟ್​ ಮಾಡಿದೆ. "ಸತತ 5ನೇ ಬಾರಿಗೆ ಪಥದಲ್ಲಿರುವ ನೌಕೆಯನ್ನು ಮತ್ತೊಂದು ಆಕಾಶಕಾಯ ಅಥವಾ ಬಾಹ್ಯಾಕಾಶದಲ್ಲಿರುವ ಸ್ಥಳಕ್ಕೆ ಯಶಸ್ವಿಯಾಗಿ ವರ್ಗಾಯಿಸಿದೆ. ಇದನ್ನು ಸುಮಾರು 110 ದಿನಗಳ ನಂತರ ವಿವಿಧ ಪ್ರಕ್ರಿಯೆಗಳ ಮೂಲಕ ಎಲ್​1 ಸುತ್ತ ಕಕ್ಷೆಗೆ ಸೇರಿಸಲಾಗುತ್ತದೆ" ಎಂದು ಹೇಳಿದೆ.

ಆದಿತ್ಯ-ಎಲ್ 1 ಎಂಬುದು ಸೂರ್ಯನ ಸಮಗ್ರ ಅಧ್ಯಯನಕ್ಕೆ ಮೀಸಲಾದ ಗಗನ ನೌಕೆ. ಇದು ಸೂರ್ಯನ ಬಗ್ಗೆ ಅಜ್ಞಾತ ಸತ್ಯಗಳನ್ನು ಕಂಡುಹಿಡಿಯಲಿದೆ. ಉಪಗ್ರಹವು 16 ದಿನಗಳ ಕಾಲ ಭೂಮಿಗೆ ಸುತ್ತುವರಿದ ಕಕ್ಷೆಗಳಲ್ಲಿ ಪ್ರಯಾಣಿಸಲಿದೆ. ಈ ಸಮಯದಲ್ಲಿ ಅದು ತನ್ನ ಗಮ್ಯಸ್ಥಾನವನ್ನು ತಲುಪಲು ಅಗತ್ಯವಿರುವ ವೇಗವನ್ನು ಪಡೆಯಲು 5 ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ನಂತರ ಟ್ರಾನ್ಸ್-ಲಗ್ರಾಂಜಿಯನ್ 1 ಅಳವಡಿಕೆಯ ಪ್ರಕ್ರಿಯೆಗೆ ಒಳಪಡಲಿದೆ. ಅದಕ್ಕೆ ಸುಮಾರು 110 ದಿನಗಳ ಅಗತ್ಯವಿದೆ. ಎಲ್-1 ಬಿಂದು ತಲುಪಲು ಉಪಗ್ರಹವು ಸರಿಸುಮಾರು 15 ಮಿಲಿಯನ್ ಕಿ.ಮೀಟರ್ ಪ್ರಯಾಣಿಸಬೇಕು. ಈ ವೇಳೆ ಸೂಪರ್ ಥರ್ಮಲ್, ಅಯಾನುಗಳು, ಎಲೆಕ್ಟ್ರಾನ್‌ಗಳ ಬಗ್ಗೆ ಅಧ್ಯಯನ ಮಾಡಲಿದೆ.

ಈ ದತ್ತಾಂಶವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಗಳನ್ನು ಅಳೆಯಲು ಸಹಾಯ ಮಾಡಲಿದೆ. ಸೆಪ್ಟೆಂಬರ್ 2 ರಂದು ಪ್ರಾರಂಭವಾದ ಆದಿತ್ಯ-ಎಲ್1 ಮಿಷನ್‌ನ ಉದ್ದೇಶವು ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಕರೋನಾವನ್ನು ಅಧ್ಯಯನ ಮಾಡುವುದಾಗಿದೆ. ಇಲ್ಲಿಂದ ನೌಕೆಯು 15 ಲಕ್ಷ ಕಿಲೋಮೀಟರ್ ಪ್ರಯಾಣ ಆರಂಭಿಸಲಿದೆ. ಇದು ಜನವರಿ 2024 ರಲ್ಲಿ 110 ದಿನಗಳ ನಂತರ ಲಾಗ್ರಾಂಜಿಯನ್ ಪಾಯಿಂಟ್ 1 ಅನ್ನು ತಲುಪುತ್ತದೆ.

ಆದಿತ್ಯ L1 ಅನ್ನು ಸೆಪ್ಟೆಂಬರ್ 2 ರಂದು ಬೆಳಿಗ್ಗೆ 11.50 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C57 ನ XL ಆವೃತ್ತಿಯ ರಾಕೆಟ್ ಬಳಸಿ ಉಡಾವಣೆ ಮಾಡಲಾಯಿತು. ಉಡಾವಣೆಯಾದ 63 ನಿಮಿಷಗಳು ಮತ್ತು 19 ಸೆಕೆಂಡುಗಳ ನಂತರ, ಬಾಹ್ಯಾಕಾಶ ನೌಕೆಯನ್ನು ಭೂಮಿಯ 235 ಕಿಮೀ x 19500 ಕಿಮೀ ಕಕ್ಷೆಯಲ್ಲಿ ಇರಿಸಲಾಯಿತು.

ಆದಿತ್ಯ ಎಲ್-1 ವೈಜ್ಞಾನಿಕ ಮಾಹಿತಿ ಸಂಗ್ರಹಿಸಲು ಆರಂಭಿಸಿದೆ ಎಂದು ಇಸ್ರೋ ತಿಳಿಸಿತ್ತು. ಬಾಹ್ಯಾಕಾಶ ನೌಕೆಯಲ್ಲಿ ಅಳವಡಿಸಲಾಗಿರುವ ಸುಪ್ರಾ ಥರ್ಮಲ್ ಮತ್ತು ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ ಅಥವಾ STEPS ಉಪಕರಣವನ್ನು ಸೆಪ್ಟೆಂಬರ್ 10 ರಂದು ಭೂಮಿಯಿಂದ 50,000 ಕಿಲೋಮೀಟರ್ ದೂರದಲ್ಲಿ ಸಕ್ರಿಯಗೊಳಿಸಲಾಯಿತು. ದತ್ತಾಂಶದ ಸಹಾಯದಿಂದ, ಸೂರ್ಯನ ಮೇಲೆ ಉಂಟಾಗುವ ಬಿರುಗಾಳಿಗಳು ಮತ್ತು ಬಾಹ್ಯಾಕಾಶ ಹವಾಮಾನದ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

ಲ್ಯಾಗ್ರೇಂಜ್ ಪಾಯಿಂಟ್ ಅನ್ನು ಇಟಾಲಿಯನ್-ಫ್ರೆಂಚ್ ಗಣಿತಜ್ಞ ಜೋಸೆಫ್-ಲೂಯಿಸ್ ಲಾಗ್ರೇಂಜ್ ಹೆಸರಿಡಲಾಗಿದೆ. ಇದನ್ನು ಆಡುಮಾತಿನಲ್ಲಿ L-1 ಎಂದು ಕರೆಯಲಾಗುತ್ತದೆ. ಭೂಮಿ ಮತ್ತು ಸೂರ್ಯನ ನಡುವೆ ಅಂತಹ ಐದು ಬಿಂದುಗಳಿವೆ, ಅಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆಯ ಬಲವು ಸಮತೋಲನವಾಗಿರುತ್ತದೆ. ಮೊದಲ ಲ್ಯಾಗ್ರೇಂಜ್ ಪಾಯಿಂಟ್ ಭೂಮಿ ಮತ್ತು ಸೂರ್ಯನ ನಡುವೆ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಈ ಹಂತದಲ್ಲಿ ಗ್ರಹಣದ ಪರಿಣಾಮವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com