ವಿರಾಟ್ ತದ್ರೂಪಿ ಪಾಕಿಸ್ತಾನಿ ಸಾಮಾಜಿಕ ಅಂತರ್ಜಾಲದಲ್ಲಿ ವೈರಲ್

ಭಾರತದ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರಂತೆಯೇ ಕಾಣುವ ಪಾಕಿಸ್ತಾನದ ಯುವಕನ ಫೋಟೊ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಸಂಚಲನ ಮೂಡಿಸಿದೆ.
ವಿರಾಟ್ ತದ್ರೂಪಿ ಪಾಕಿಸ್ತಾನಿ
ವಿರಾಟ್ ತದ್ರೂಪಿ ಪಾಕಿಸ್ತಾನಿ
Updated on: 

ಭಾರತದ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರಂತೆಯೇ ಕಾಣುವ ಪಾಕಿಸ್ತಾನದ ಯುವಕನ ಫೋಟೊ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಸಂಚಲನ ಮೂಡಿಸಿದೆ.

ಪಾಕಿಸ್ತಾನ ಮತ್ತು ಭಾರತದ ಕ್ರಿಕೆಟ್ ವೈರತ್ವ ಬಹಳ ಹಿಂದಿನದ್ದು. ಈ ಅಂಶ ಕೂಡ ಈ ಕ್ರಿಕೆಟ್ ತಾರೆಯ ತದ್ರೂಪಿಯ ಬಗ್ಗೆ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಲು ಕಾರಣವಿರಬಹುದು.

ಈ ಹಿಂದೆ ವಿರಾಟ್ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಅಹ್ಮದ್ ಶೆಹ್ಜಾದ್ ಅವರನ್ನು ನೋಟದ ಸಮಾನತೆಗೆ ಹೆಚ್ಚೆಚ್ಚು ಹೋಲಿಕೆ ಮಾಡಲಾಗುತ್ತಿತ್ತು. ಗಡ್ಡ ಮತ್ತು ಕೇಶ ಸೌಂದರ್ಯದಿಂದ ಒಬ್ಬರನೊಬ್ಬರು ಹೋಲುತ್ತಿದ್ದರು ಎನ್ನಲಾಗುತ್ತಿತ್ತು. ಈ ಫೋಟೋದಲ್ಲಿ ಪಾಕಿಸ್ತಾನದ ಈ ಮನುಷ್ಯ ವಿರಾಟ್ ಗಿಂತಲೂ ಸ್ವಲ್ಪ ಸಣ್ಣದಾಗಿ ಕಾಣುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com