ಘೇಂಡಾಮೃಗ ಮರಿಗೆ ನಟಿ ದಿಯಾ ಮಿರ್ಜಾ ಹೆಸರು, ಯಾಕೆ ಅಂತ ಈ ಸುದ್ದಿ ನೋಡಿ!

ಕೀನ್ಯಾದ ನೈರೋಬಿ ರಾಷ್ಟ್ರೀಯ ಉದ್ಯಾನವನದಲ್ಲಿ 2017ರ ಅಕ್ಟೋಬರ್ 15ರಂದು ಜನಿಸಿದ್ದ ಘೇಂಡಾಮೃಗ ಮರಿಗೆ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರ ಹೆಸರಿಡಲಾಗಿದೆ.
ದಿಯಾ ಮಿರ್ಜಾ
ದಿಯಾ ಮಿರ್ಜಾ
ಕೀನ್ಯಾದ ನೈರೋಬಿ ರಾಷ್ಟ್ರೀಯ ಉದ್ಯಾನವನದಲ್ಲಿ 2017ರ ಅಕ್ಟೋಬರ್ 15ರಂದು ಜನಿಸಿದ್ದ ಘೇಂಡಾಮೃಗ ಮರಿಗೆ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರ ಹೆಸರಿಡಲಾಗಿದೆ. 
ನಟಿ-ನಿರ್ಮಾಪಕಿ ದಿಯಾ ಮಿರ್ಜಾ ವಿಶ್ವಸಂಸ್ಥೆ ಪರಿಸರ ಸದ್ಭಾವನಾ ರಾಯಭಾರಿಯಾಗಿ ನೇಮಕವಾಗಿದ್ದರು. ಈ ಹಿನ್ನೆಲೆಯಲ್ಲಿ ಘೇಂಡಾಮೃಗ ಮರಿಗೆ ದಿಯಾ ಮಿರ್ಜಾ ಎಂದು ಹೆಸರಿಡಲಾಗಿತ್ತು. 
ಅಳಿವಿನ ಅಂಚಿನಲ್ಲಿರುವ ಘೇಂಡಾಮೃಗದ ರಕ್ಷಣೆ ಕುರಿತು ಜಾಗೃತ ಮೂಡಿಸುವ ಸಲುವಾಗಿ ಹಮೀದ್ ಹುಸೈನ್ ಮತ್ತು ರಿಚರ್ಡ್ ಅವರು ದಿಯಾ ಮಿರ್ಜಾ ಹೆಸರನ್ನು ಘೇಂಡಾಮೃಗಕ್ಕೆ ಇಟ್ಟಿದ್ದು ಈ ಕುರಿತು ಹರ್ಷ ವ್ಯಕ್ತಪಡಿಸಿರುವ ದಿಯಾ ಮಿರ್ಜಾ ಘೇಂಡಾಮೃಗದ ಮರಿಗೆ ನನ್ನ ಹೆಸರಿಟ್ಟಿರುವುದಕ್ಕೆ ಅಭಾರಿ ಎಂದು ಹೇಳಿದ್ದಾರೆ. 
ದಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಶೇರ್ ಮಾಡಿದ್ದು ಹಮೀದ್ ಹುಸೈನ್ ಮತ್ತು ಮುಹಮ್ಮದ್ ಯಾಕೂಬ್ ಮತ್ತು ತಂಡದ ಎಲ್ಲರಿಗೂ #OlPejetaConservancy, ರಿಚರ್ಡ್, ಸರಾಹ್ ಮತ್ತು ಎಲೋಡಿ ಅವರಿಗೆ ಧನ್ಯವಾದ ತಿಳಿಸಲು ಸಂತೋಷಿಸುತ್ತೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com