ಪ್ರವಾಹದಿಂದ ರಕ್ಷಿಸಲ್ಪಟ್ಟ ಹೆಣ್ಣುಮಗುವಿನ ಹುಟ್ಟುಹಬ್ಬ ಅಚರಿಸಿದ ಚೆನ್ನೈ ಪೊಲೀಸರು
ಚೆನ್ನೈ: ಚೆನ್ನೈನ ತೊರೈಪಕ್ಕಂ ಪೊಲೀಸ್ ಠಾಣೆಯಲ್ಲಿ ಅಂದು ಹಬ್ಬದ ಸಂಭ್ರಮ. ಕಳ್ಳಕಾಕ, ಖದೀಮರ ವಿಚಾರಣೆಗಳಿಗೆ, ದೂರು ಸಲ್ಲಿಕೆಗೆ, ಅಹವಾಲು ಸ್ವೀಕರಿಸುವುದಕ್ಕೆ ಬಳಕೆಯಾಗುತ್ತಿದ್ದ ಪೊಲೀಸ್ ಠಾಣೆಯಲ್ಲಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿತ್ತು.
ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೇದೆಗಳದೋ, ಪೊಲೀಸ್ ಅಧಿಕಾರಿಗಳದೋ ಹುಟ್ಟುಹಬ್ಬ ಆಗಿರುತ್ತಿದ್ದರೆ ಅದರಲ್ಲಿ ವಿಶೇಷ ಇರುತ್ತಿರಲಿಲ್ಲ. ಠಾಣೆಯ ಪೊಲಿಸರೆಲ್ಲರೂ ಆಚರಿಸಿದ್ದು ಹೆಣ್ಣುಮಗುವಿನ ಹುಟ್ಟುಹಬ್ಬವನ್ನು!
ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿರುವುದು ಗೊತ್ತೇ ಇರುತ್ತದೆ. ಸೋಮವಾರ ಮತ್ತು ಮಂಗಳವಾರ ಚೆನ್ನೈ ನಗರದ ಕೆ.ಪಿ.ಕೆ ನಗರ ಮತ್ತು ಕಲ್ಲುಕುಟ್ಟೈ ಪ್ರದೇಶಗಳಲ್ಲಿ ಮಳೆಯಿಂದ ನೀರು ನುಗ್ಗಿ ಪ್ರದೇಶವಿಡೀ ಜಲಾವೃತಗೊಂಡಿತ್ತು.
ರಕ್ಷಣಾ ಪಡೆ ಅಲ್ಲಿಗೆ ಧಾವಿಸುವ ವೇಳೆಗೆ ಹಲವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ತಿಳಿದುಬಂದಿತು. ಅದು ಕೊಳಚೆಪ್ರದೇಶವಾಗಿದ್ದು, ಅಲ್ಲಿ ನೆಲೆಸಿದ್ದವರಲ್ಲಿ ಬಹಳಷ್ಟು ಮಂದಿ ಕೂಲಿ ಕಾರ್ಮಿಕರಾಗಿದ್ದರು.
ಕೊಚ್ಚಿಕೊಂಡು ಹೋದವರ ರಕ್ಷಣೆಗೆ ಮುಂದಾದ ಸಿಬ್ಬಂದಿ ನೀರಿನಲ್ಲಿ ಸಿಲುಕಿಕೊಂಡಿದ್ದ ಹಲವು ಕುಟುಂಬಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟರು. ಅಲ್ಲದೆ ಸುರಕ್ಷಿತ ಸ್ಥಳಗಳಲ್ಲಿ ನೆಲೆ ಕಂಡುಕೊಂಡಿದ್ದ ಜನರನ್ನು ತಾತ್ಕಾಲಿಕ ಶಿಬಿರಕ್ಕೆ ಕರೆದೊಯ್ಯಲಾಯಿತು.
ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಒಂದೆಡೆ ಸಿಲುಕಿಕೊಂಡಿದ್ದ ಕುಟುಂಬದಲ್ಲಿ ಹೆಣ್ಣುಮಗುವೂ ಸೇರಿತ್ತು. ಅದೇ ದಿನ ಆ ಮಗುವಿನ ಮೊದಲ ವರ್ಷದ ಹುಟ್ಟಿದ ಹಬ್ಬ ಎನ್ನುವ ವಿಷಯ ಪೊಲೀಸರಿಗೆ ನಂತರ ತಿಳಿದುಬಂತು. ಒಡನೆಯೇ ಪೊಲೀಸರೆಲ್ಲರೂ ಸೇರಿ ಹೆಣ್ಣುಮಗುವಿನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಠಾಣೆಯಲ್ಲಿ ಆಚರಿಸಲು ನಿರ್ಧರಿಸಿದರು.
Related Article
ಗದಗ: ಇಟಗಿ ಪಟ್ಟಣದ ದೇವಸ್ಥಾನದ ಮುಂದೆ ಕಲ್ಲುಗಳಲ್ಲಿ ಕೇಳಿಬರುತ್ತಿದೆ ಸಂಗೀತ; ಜನರಲ್ಲಿ ಹೆಚ್ಚಿದ ಕುತೂಹಲ
ರಾಂಚಿಯಲ್ಲೊಂದು ಮಕ್ಕಳ ಬ್ಯಾಂಕ್ 'ಬಾಲ ವಿಕಾಸ್ ಖಜಾನ'; ಪ್ರಜಾಪ್ರಭುತ್ವ ಮೌಲ್ಯಗಳ ಕಲಿಸುವ ಉದ್ದೇಶ
ಜಾನುವಾರುಗಳಿಗೆ ಚಾಕಲೇಟ್ ಕೇಕ್: ವಿನೂತನ ಪ್ರಯೋಗದಿಂದ ಹಾಲಿನ ಇಳುವರಿ ಹೆಚ್ಚಳದ ಭರವಸೆ
ಕೈಮಗ್ಗ ಕಾರ್ಖಾನೆಯಾಗಿ ಬದಲಾದ ಸೆಂಟ್ರಲ್ ಜೈಲು: ಕೈದಿಗಳು ತಯಾರಿಸಿದ ವಸ್ತ್ರ ಮಾರಿ 40 ಲಕ್ಷ ರೂ. ಆದಾಯ
ಉಡುಪಿಯ ಅಜ್ಜರಕಾಡಿನಿಂದ ಹಿಮಾಲಯ ಸನ್ನಿಧಿಯಲ್ಲಿ ಪರ್ವತಾರೋಹಿ ಸುಮಲತಾ
ಪತ್ನಿಯ ಕೊನೆಯಾಸೆ ಈಡೇರಿಸಿದ ಪತಿ: ಉಜ್ಜೈನಿ ದೇಗುಲಕ್ಕೆ 17 ಲಕ್ಷ ರೂ. ಚಿನ್ನಾಭರಣ ದೇಣಿಗೆ
ಕೋಟಿ ಕೋಟಿ ಬೆಲೆಯ ದುಬಾರಿ ಮೀನು: ನೋಡೋದಕ್ಕೆ ಜನ ಜಂಗುಳಿ; ಈ ಮೀನು ಹಿಡಿದರೆ ಜೈಲೇ ಗತಿ!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ