ಕೋವಿಡ್ ಸಂಕಷ್ಟ: ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಪುಸ್ತಕ ನೀಡಿ, ಮಕ್ಕಳಿಗೆ ನೆರವಾಗುತ್ತಿರುವ ವಿದ್ಯಾರ್ಥಿಗಳು

ಮಹಾಮಾರಿ ಕೊರೋನಾ ವೈರಸ್ ಶಿಕ್ಷಣ ಕ್ಷೇತ್ರದ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಸಾಂಕ್ರಾಮಿಕ ರೋಗದ ಪರಿಣಾಮ ಶಾಲೆಗಳು ಬಂದ್ ಆಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಓದು ಹಾಗೂ ಕಲಿಕೆಯ ಆಸಕ್ತಿ ದೂರಾಗುತ್ತಿದೆ. 
ದೇಣಿಗೆ ಪಡೆದ ಪುಸ್ತಕಗಳೊಂದಿಗಿರುವ ವಿದ್ಯಾರ್ಥಿಗಳು
ದೇಣಿಗೆ ಪಡೆದ ಪುಸ್ತಕಗಳೊಂದಿಗಿರುವ ವಿದ್ಯಾರ್ಥಿಗಳು

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಶಿಕ್ಷಣ ಕ್ಷೇತ್ರದ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಸಾಂಕ್ರಾಮಿಕ ರೋಗದ ಪರಿಣಾಮ ಶಾಲೆಗಳು ಬಂದ್ ಆಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಓದು ಹಾಗೂ ಕಲಿಕೆಯ ಆಸಕ್ತಿ ದೂರಾಗುತ್ತಿದೆ. 

ಇನ್ನು ಓದುವ ಆಸಕ್ತಿ ಇದ್ದರೂ ವ್ಯವಸ್ಥೆ, ಸೌಲಭ್ಯಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳಿಗೆ ನಗರದಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿರುವ ಕೆಲ ವಿದ್ಯಾರ್ಥಿಗಳು ನೆರವಿನ ಹಸ್ತ ಚಾಚಿದ್ದಾರೆ. 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಅವರ ಮಾರ್ಗದರ್ಶನದಲ್ಲಿ ನಗರ ಮೂವರು ವಿದ್ಯಾರ್ಥಿಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ. 

ರೈಟ್ ಟು ರೀಡ್ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆರಂಭಿಸಿರುವ ಈ ವಿದ್ಯಾರ್ಥಿಗಳು ಜನರಿಂದ ಪುಸ್ತಕಗಳನ್ನು ಸಂಗ್ರಹಿಸಿ ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಆ ಪುಸ್ತಕಗಳನ್ನು ನೀಡಿ ಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿರುವ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. 

ಬೆಂಗಳೂರಿನ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳಾದ ಪ್ರಣೀತ್ ಗುಡ್ಲದಾನ, ಆರ್ಯನ್ ಗುಪ್ತಾ ಮತ್ತು ಇಂದೂಸ್ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿ ಹರೀಶ್ ಶಂಕರ್ ಎಂಬ ಮೂವರು ವಿದ್ಯಾರ್ತಿಗಳು ತಿಂಗಳಲ್ಲಿ 1000 ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳನ್ನು ಜನರಿಂದ ಸಂಗ್ರಹಿಸಿ ಅವುಗಳನ್ನು ಗ್ರಂಥಾಲಯಗಳಿಗೆ ನೀಡುವ ಕೆಲಸ ಮಾಡುತ್ತಿದ್ದಾರೆ. 

ದೇಣಿಗೆಯಾಗಿ ಸಂಗ್ರಹಿಸಿರುವ ಪುಸ್ತಕಗಳು
ದೇಣಿಗೆಯಾಗಿ ಸಂಗ್ರಹಿಸಿರುವ ಪುಸ್ತಕಗಳು

ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಸಹಾಯ ಮಾಡಲು ದಾರಿ ಹುಡುಕುತ್ತಿದ್ದೆವು. ದಿನಪತ್ರಿಕೆಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಸುದ್ದಿಗಳು ಪ್ರಕಟಗೊಂಡಿದ್ದವು. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಡೆತ ಬೀಳುವುದು ತಿಳಿಯಿತು. ಹೀಗಾಗಿ ಪುಸ್ತಕಗಳ ದೇಣಿಗೆ ನೀಡುವಂತೆ ಅಪಾರ್ಟ್'ಮೆಂಟ್ ಜನರ ಬಳಿ ಮನವಿ ಮಾಡಿಕೊಂಡೆವು. ಬಳಿಕ ಪ್ರತೀಯೊಂದು ಮನೆಗಳಿಗೂ ಭೇಟಿ ನೀಡಿ ಪುಸ್ತಕಗಳ ಸಂಗ್ರಹಿಸಲು ಆರಂಭಿಸಿದ್ದೆವು. ಆರಂಭದಲ್ಲಿ ಅತ್ಯಂತ ಕಡಿಮೆ ಪುಸ್ತಕಗಳು ಸಿಕ್ಕಿದ್ದೆವು. ಇದೀಗ ಐಸಿಎಸ್'ಸಿ, ಸಿಬಿಎಸ್ಇ ಮತ್ತು ಐಜಿಸಿಎಸ್ಇ ಪಠ್ಯಪುಸ್ತಕಗಳು, ಕಥೆ ಪುಸ್ತಕಗಳು, ಕಾದಂಬರಿ ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ದೇಣಿಗೆಯಾಗಿ ನೀಡುತ್ತಿದ್ದಾರೆಂದು ಪ್ರಣೀತ್ ಅವರು ಹೇಳಿದ್ದಾರೆ.

ಮಹದೇವನ್ ಅವರ ನೆರವಿನೊಂದಿಗೆ ನಾವು ಈ ಕಾರ್ಯಕ್ರಮವನ್ನು ಆರಂಭಿಸಿದ್ದೆವು. ಇದೀಗ ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಈ ಪುಸ್ತಕಗಳನ್ನು ನೀಡುತ್ತಿದ್ದೇವೆಂದು ತಿಳಿಸಿದ್ದಾರೆ.

ಇಷ್ಟೂ ದಿನ ಗ್ರಂಥಾಲಯಗಳಲ್ಲಿ ಲಭ್ಯವಿಲ್ಲದ ಪುಸ್ತಕಗಳು ಇದೀಗ ಲಭ್ಯವಾಗುತ್ತಿರುವುದಕ್ಕೆ ಜನರೂ ಸಂತಸ ವ್ಯಕ್ತಪಡಿಸುತ್ತಿದ್ದಾರೆಂದು ಆರ್ಯನ್ ಅವರು ಹೇಳಿದ್ದಾರೆ. 

ನಮ್ಮ ಈ ಕಾರ್ಯ ಇದೀಗ ಹಲವು ಜನರ ಮನಮುಟ್ಟಿದ್ದು, ಜನರೇ ಇದೀಗ ತಮ್ಮ ಮನೆಗೆ ಬರುವಂತೆ ತಿಳಿಸಿ ಪುಸ್ತಕಗಳ ದೇಣಿಗೆಯಾಗಿ ನೀಡುತ್ತಿದ್ದಾರೆ. ಇತರೆ ಸ್ಥಳೀಯರೂ ಕೂಡ ನಮ್ಮ ಈ ಕಾರ್ಯಕ್ಕೆ ಪ್ರತಿಕ್ರಿಯೆ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಮಹಾದೇವನ್ ಅವರು ಮಾತನಾಡಿ ರಾಜ್ಯದಲ್ಲಿ ಒಟ್ಟು 7,000 ಗ್ರಂಥಾಲಯಗಳಿವೆ. ಇದರಲ್ಲಿ 5,622 ಗ್ರಂಥಾಲಯಗಳು ಗ್ರಾಮ ಪಂಚಾಯಿತಿಗಳಲ್ಲಿವೆ. ಗ್ರಂಥಾಲಯಗಳ ಸುಧಾರಿಸಲು ಕಳೆದ ವರ್ಷ 6ರಿಂದ 18ವರ್ಷದೊಳಗಿನ ಮಕ್ಕಳಿಗಾಗಿ ಓದುವ ಬೆಳಕು ಎಂಬ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಓದಿನ ಕಡೆ ಗಮನ ಕಳೆದುಕೊಂಡಿರುವ ಮಕ್ಕಳನ್ನು ಪುನಃ ಓದಿನ ಕಡೆ ಸೆಳೆಯುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಈ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಭಾಗದ 6-18 ವರ್ಷದ ಮಕ್ಕಳಿಗೆ ಉಚಿತ ಸದಸ್ಯತ್ವನ್ನು ನೀಡಿ, ಹಂತ ಹಂತವಾಗಿ ಡಿಜಿಟಲ್ ಗ್ರಂಥಾಲಯದತ್ತ ಅವರ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿತ್ತು. ಇದೀಗ ಗ್ರಂಥಾಲಯಗಳಿಗೆ ಪುಸ್ತಕಗಳ ದಾನ ಮಾಡುವುದರಿಂದ ಮಕ್ಕಳ ನಿರಂತರವಾಗಿರುವಂತೆ ಮಾಡಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ. 

ಈ ಮೂವರು ವಿದ್ಯಾರ್ಥಿಗಳಷ್ಟೇ ಅಲ್ಲ, ಸರ್ಕಾರ ಕೂಡ ಪುಸ್ತಕ ಜೋಳಿಗೆ ಎಂಬ ಕಾರ್ಯಕ್ರಮದ ಮೂಲಕ ಬೆಂಗಳೂರು ಹಾಗೂ ಗ್ರಾಮೀಣ ಭಾಗದಲ್ಲೂ ಪುಸ್ತಕಗಳ ಸಂಗ್ರಹಿಸುತ್ತಿದೆ. ಅಜೀಂ ಪ್ರೇಮ್‌ಜಿ ಫೌಂಡೇಶನ್, ಶಿಕ್ಷಣ ಮತ್ತು ಪ್ರಥಮ್ ಬುಕ್ಸ್‌ನಂತಹ ಅನೇಕ ಸ್ವಯಂಸೇವಾ ಸಂಸ್ಥೆಗಳು ಈ ಕಾರ್ಯಕ್ರಮವನ್ನು ಬೆಂಬಲಿಸಿವೆ. ಗ್ರಾಮೀಣ ಭಾಗದ ಪ್ರತೀ ಮಕ್ಕಳು ಓದುವ ಮತ್ತು ಕಲಿಯುವ ಅವಕಾಶವನ್ನು ಹೊಂದಬೇಕೆಂದು ನಾವು ಬಯಸುತ್ತೇವೆ. ರಾಜ್ಯದಲ್ಲಿರುವ ಗ್ರಂಥಾಲಯಗಳು ಇದೀಗ ವಾರಾಂತ್ಯದ ದಿನಗಳಲ್ಲೂ ಕೂಡ 6 ಗಂಟೆಗಳ ಕಾಲ ತೆರೆದಿರುತ್ತವೆ. ಈ ಕಾರ್ಯಕ್ರಮವು ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಬಹಲ ಉಪಯುಕ್ತವಾಗಿದೆ. ವಿದ್ಯಾರ್ಥಇಗಲ ಬದ್ಧತೆ ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಎಂದು ಮಹಾದೇವನ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com