ಚತ್ತೀಸ್ ಗಢ ಬುಡಕಟ್ಟು ಜನರಿಂದ ಪರಿಸರಸ್ನೇಹಿ ಬಿದಿರಿನ ಸೈಕಲ್ 'ಬ್ಯಾಂಬೂಕಾ' ಉತ್ಪಾದನೆ: ಬೆಲೆ ಬಲು ದುಬಾರಿ!
ಮಾರುಕಟ್ಟೆಯಲ್ಲಿ ಲಭ್ಯವಿರುವ ಸೈಕಲ್ಲುಗಳಿಗೆ ಹೋಲಿಸಿದರೆ ಬಿದಿರಿನ ಸೈಕಲ್ ಅವುಗಳಿಗಿಂತ ಶೇ.60 ಪ್ರತಿಶತ ಕಡಿಮೆ ತೂಕವನ್ನು ಹೊಂದಿದೆ.
Published: 29th November 2021 12:38 PM | Last Updated: 29th November 2021 07:12 PM | A+A A-

ಬಿದಿರಿನ ಸೈಕಲ್
ರಾಯ್ಪುರ: ಬಿದಿರನ್ನು ಬಳಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ವಸ್ತುಪ್ರದರ್ಶನಗಳಲ್ಲಿ ಅದನ್ನು ನಾವು ಕಾಣಬಹುದು. ನಕ್ಸಲ್ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದ ಚತ್ತೀಸ್ ಗಢದ ಜಗ್ದಾಲ್ಪುರದಲ್ಲಿ ಪರಿಣತರು 'ಬ್ಯಾಂಬೂಕಾ' ಎನ್ನುವ ಬಿದಿರಿನ ಸೈಕಲ್ ತಯಾರಿಸುವುದರ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ಸ್ಥಳೀಯ ಬುಡಕಟ್ಟು ಜನರ ಸಹಾಯದಿಂದ ಈ ಬಿದಿರಿನ ಸೈಕಲ್ ತಯಾರಾಗಿದೆ ಎನ್ನುವುದು ವಿಶೇಷ. ಜೀವನನಿರ್ವಹಣೆಗೆ ಬಿದಿರಿನ ವಸ್ತುಗಳನ್ನು ಮಾಡುತ್ತಿದ್ದ ಇಲ್ಲಿನ ಮಂದಿ ಕೊರೊನಾ ಕಾರಣದಿಂದ ತೀವ್ರ ಸಂಕಷ್ಟವನ್ನು ಎದುರಿಸಿದ್ದರು.
ಇದನ್ನೂ ಓದಿ: ಕೇರಳದ ಅತ್ಯಂತ ಹಿರಿಯ ಸಿಂಹಕ್ಕೆ ಮೃಗಾಲಯದಲ್ಲಿ ರಾಜಾತಿಥ್ಯ: ಮೂರು ವರ್ಷಗಳ ಹಿಂದೆ ಪ್ಯಾರಾಲಿಸಿಸ್
ಬಿದಿರಿನ ಸೈಕಲ್ ನಿರ್ಮಾಣದ ಹಿಂದೆ ನ್ಯಾಚುರೋಸ್ಕೋಪ್ ಎನ್ನುವ ಸ್ವಸಹಾಯ ಸಂಘಟನೆ ಕಾರ್ಯನಿರ್ವಹಿಸಿದೆ. ಸಂಘಟನೆಯ ನೆರವಿನಿಂದ ಬುಡಕಟ್ಟು ಜನರು ಬಿದಿರಿನ ಸೈಕಲ್ ತಯಾರಾಗಿದೆ.
ಇದನ್ನೂ ಓದಿ: ಕಲ್ಲಿದ್ದಲು ತ್ಯಾಜ್ಯದಿಂದ ಅತ್ಯಾಕರ್ಷಕ ಆಭರಣ ಸೃಷ್ಟಿ: ಭಾರತೀಯ ವಿಜ್ಞಾನಿಗಳ ಸಾಧನೆ
ಮಾರುಕಟ್ಟೆಯಲ್ಲಿ ಲಭ್ಯವಿರುವ ಸೈಕಲ್ಲುಗಳಿಗೆ ಹೋಲಿಸಿದರೆ ಬಿದಿರಿನ ಸೈಕಲ್ ಅವುಗಳಿಗಿಂತ ಶೇ.60 ಪ್ರತಿಶತ ಕಡಿಮೆ ತೂಕವನ್ನು ಹೊಂದಿದೆ. ಬಿದಿರಿನ ಸೈಕಲ್ ಭಾರ 8.2 ಕೆ.ಜಿ.
ಇದನ್ನೂ ಓದಿ: ಫ್ಯಾಷನ್ ಶೋನಲ್ಲಿ ರಾಂಪ್ ವಾಕ್ ಮಾಡಿದ ಆದಿವಾಸಿ ಹುಡುಗಿ: ಪ್ರತಿಸ್ಪರ್ಧಿಗಳ ಮೆಚ್ಚುಗೆ
ಈ ಸೈಕಲ್ ಬೆಲೆ 35,000 ರೂ.ಗಳಾಗಿದೆ. ಬೆಲೆ ದುಬಾರಿಯಾಯಿತು ಎನ್ನುವುದನ್ನು ಒಪ್ಪಿಕೊಳ್ಳುವ ನ್ಯಾಚುರೊಸ್ಕೋಪಿ ಕಾರ್ಯಕರ್ತರು ಅದಕ್ಕೆ ಕಾರಣವನ್ನೂ ನೀಡುತ್ತಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಕಾಳಿ ದೇವಾಲಯ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಬಡ ಮುಸ್ಲಿಂ ರೈತ
ಒಂದು ಬಿದಿರಿನ ಸೈಕಲ್ ತಯಾರಾಗಲು 20 ದಿನಗಳು ತಗುಲುತ್ತವೆ. ಬಿದಿರನ್ನು ಕೆಮಿಕಲ್ ಬಳಸಿ ದೀರ್ಘ ಬಾಳಿಕೆಗೆ ತಕ್ಕಂತೆ ಪರಿಷ್ಕರಣೆಗೆ ಒಳಪಡಿಸಲಾಗುತ್ತದೆ.
ಇದನ್ನೂ ಓದಿ: ಬಳ್ಳಾರಿಯ 1 ರೂಪಾಯಿ ಭಿಕ್ಷುಕನ ಅಂತ್ಯಕ್ರಿಯೆಗೆ 4 ಸಾವಿರಕ್ಕೂ ಹೆಚ್ಚು ಜನ!