ರಾಂಚಿ: ಕಲ್ಲಿದ್ದಲನ್ನು ಆಭರಣವಾಗಿ ಧರಿಸುವ ಯೋಚನೆ ನಮ್ಮಲ್ಲನೇಕರಿಗೆ ಹುಚ್ಚುತನದ ಪರಮಾವಧಿ ಎನ್ನಿಸಬಹುದು. ಅದು ಸಹಜವೂ ಕೂಡಾ. ಕಲ್ಲಿದ್ದಲು, ಇಂಧನ ಕ್ಷೇತ್ರದಲ್ಲಿ ಅಗತ್ಯ ಖನಿಜ ಎಂದು ಹೆಸರು ಮಾಡಿದೆ.
ಇದನ್ನೂ ಓದಿ: ರಾಜಸ್ಥಾನ: ವರದಕ್ಷಿಣೆಗೆಂದು ಅಪ್ಪ ಕೂಡಿಟ್ಟ 75 ಲಕ್ಷ ರು. ಹಣವನ್ನು ಹಾಸ್ಟೆಲ್ ನಿರ್ಮಾಣಕ್ಕೆ ಕೊಟ್ಟು ಮಾದರಿಯಾದ ಯುವತಿ
ಆದರೆ. ಕಲ್ಲಿದ್ದಲು ತನ್ನ ರೂಪ ಮತ್ತು ಬಣ್ಣದ ಕಾರಣದಿಂದ ಆಕರ್ಷಕವಾಗಿಲ್ಲದೇ ಇರುವುದರಿಂದ ಅದನ್ನು ಆಭರಣವನ್ನಾಗಿ ಉಪಯೋಗಿಸಲು ಆಗುವುದಿಲ್ಲ. ಆದರೆ ಈ ಅಭಿಪ್ರಾಯವನ್ನು ಹೋಗಲಾಡಿಸಿದರೆ? ಅದರ ರೂಪ ಬದಲಾವಣೆ ಮಾಡಿ ಆಕರ್ಷಕವಾಗಿ ರೂಪುಗೊಳಿಸಿದರೆ? ಅದನ್ನು ಸಂಶೋಧಕರು ಸಾಧ್ಯವಾಗಿಸಿದ್ದಾರೆ.
ಇದನ್ನೂ ಓದಿ: ತಪ್ಪಾಗಿ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆದ 8 ಲಕ್ಷ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ
ಜಾರ್ಖಡ್ ನ ಧನ್ಬಾದ್ ನಲ್ಲಿನ ಕೇಂದ್ರೀಯ ಗಣಿಗಾರಿಕೆ ಮತ್ತು ಇಂಧನ ಸಂಶೋಧನಾ ಸಂಸ್ಥೆಯಲ್ಲಿನ ಸಂಶೋಧಕರು ಕಲ್ಲಿದ್ದಲಿನಿಂದ ಆಭರಣಗಳನ್ನು ತಯಾರಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ.
ಇದನ್ನೂ ಓದಿ: 12ನೇ ವಯಸ್ಸಿಗೇ ಮದುವೆಯಾಗಿ ಶಾಲೆ ಬಿಟ್ಟಿದ್ದ ಕೇರಳ ಮಹಿಳೆ ಈಗ ಹೈಸ್ಕೂಲ್ ಶಿಕ್ಷಕಿ
ಕಲ್ಲಿದ್ದಲಿನಿಂದ ತಯಾರಾಗುವ ಅಲಂಕಾರಿಕ ಸಾಮಗ್ರಿ ಹಗುರ ಮಾತ್ರವಲ್ಲದೆ ದೀರ್ಘ ಬಾಳಿಕೆಯನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕಲ್ಲಿದ್ದಲ ತ್ಯಾಜ್ಯದಿಂದ ಆಭರಣಗಳನ್ನು ಸಂಶೋಧಕರು ರೂಪಿಸಿದ್ದಾರೆ.
ಇದನ್ನೂ ಓದಿ: ಶರಣಾಗತ ನಕ್ಸಲ್ ಮಹಿಳೆಯರಿಂದ ಫಿನೈಲ್ ತಯಾರಕ ಘಟಕ ಸ್ಥಾಪನೆ; ಮಹಾರಾಷ್ಟ್ರ ಪೊಲೀಸರ ಸಹಕಾರ