Source : Online Desk
ಕೊಚ್ಚಿ: 6ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದ ಕೇರಳದ ಮಹಿಳೆ ರಾಮ್ಲಾ ಅಷ್ಟೂ ವರ್ಷ ತರಗತಿಗೆ ಮೊದಲಿಗರಾಗಿದ್ದರು. ನಂತರ ಓದು ಮುಂದುವರಿಸಲಾಗಲಿಲ್ಲ. ಅದಕ್ಕೆ ಕಾರಣ, ಮದುವೆ. 12ನೇ ವಯಸ್ಸಿಗೇ ಅವರನ್ನು ವಿವಾಹ ಮಾಡಿಕೊಡಲಾಗಿತ್ತು.
ಇದನ್ನೂ ಓದಿ: ಪತ್ನಿ ಮೇಲಿನ ಪ್ರೀತಿಯಿಂದ ತಾಜ್ಮಹಲ್ ಮಾದರಿಯ ಮನೆ ಕಟ್ಟಿಸಿಕೊಟ್ಟ ಮಧ್ಯಪ್ರದೇಶ ವ್ಯಕ್ತಿ!
ಮದುವೆ ನಂತರ ಶಿಕ್ಷಣ ಮುಂದುವರಿದಲು ಅವರಿಗೆ ಸಾಧ್ಯವಾಗಲಿಲ್ಲ. ನಂತರ ಅವರ 4 ಮಕ್ಕಳ ತಾಯಿಯಾದ ನಂತರ ಮನೆಯ ಉಸ್ತುವಾರಿ ಮತ್ತು ಮಕ್ಕಳ ಲಾಲನೆಪಾಲನೆಯಲ್ಲಿಯೇ ಅವರ ಜೀವನ ಕಳೆದುಹೋಯಿತು.
ಅಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸು ಮಾಡಿದ್ದು 26ನೇ ವಯಸ್ಸಿನಲ್ಲಿ ಎನ್ನುವುದು ಅಚ್ಚರಿಯ ಸಂಗತಿ. ಮನೆಗೆ ಬಂದಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಯೋರ್ವರು 18 ದಾಟಿದ ಯಾರು ಬೇಕಾದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬಹುದು ಎನ್ನುವ ಮಾಹಿತಿ ತಿಳಿಸಿದರು. ರಾಮ್ಲಾ ಅವರ ಓದಿನ ಆಸೆ ಚಿಗುರಲು ಅ ಸಿಬ್ಬಂದಿ ಕಾರಣರಾದರು.
ಇದನ್ನೂ ಓದಿ: ಶರಣಾಗತ ನಕ್ಸಲ್ ಮಹಿಳೆಯರಿಂದ ಫಿನೈಲ್ ತಯಾರಕ ಘಟಕ ಸ್ಥಾಪನೆ; ಮಹಾರಾಷ್ಟ್ರ ಪೊಲೀಸರ ಸಹಕಾರ
ಮಕ್ಕಳ ಲಾಲನೆ ಪಾಲನೆ ನಡುವೆಯೇ ಓದಿಗೆ ಸಮಯ ಮೀಸಲಿಟ್ಟರು. ಅದೀಗ ಫಲ ನೀಡಿದೆ. ಈಗ ರಾಮ್ಲಾ ಅವರಿಗೆ 45 ವರ್ಷ ವಯಸ್ಸು. ಅರೇಬಿಕ್ ಭಾಷೆಯಲ್ಲಿ ಅವರು ಮಾಸ್ಟರ್ಸ್ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: ಯೋಧರಿಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 61'ರ ವೃದ್ಧ ಮ್ಯಾರಥಾನರ್ ಓಟ
ರಾಜ್ಯ ಸರ್ಕಾರಿ ಶಿಕ್ಷಕರ ನೇಮಕಾತಿಗೆ ನಡೆಸಲಾಗುವ ಅರ್ಹತಾ ಪರೀಕ್ಷೆಯನ್ನು ರಾಮ್ಲಾ ಪಾಸು ಮಾಡಿದ್ದಾರೆ. ಇಂದು ರಾಮ್ಲಾ ಅವರು ತಮ್ಮ ಓದುವ ಕನಸನ್ನು ಮಾತ್ರವೇ ನನಸು ಮಾಡಿಕೊಂಡಿಲ್ಲ, ನಾದಪುರಂನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಫ್ಯಾಷನ್ ಶೋನಲ್ಲಿ ರಾಂಪ್ ವಾಕ್ ಮಾಡಿದ ಆದಿವಾಸಿ ಹುಡುಗಿ: ಪ್ರತಿಸ್ಪರ್ಧಿಗಳ ಮೆಚ್ಚುಗೆ
ತಮ್ಮ ಇಂದಿನ ಸಾಧನೆಗೆ ಪತಿ ನೀಡಿದ ಸಹಕಾರವೇ ಕಾರಣ ಎಂದು ಅವರು ತಮ್ಮ ಸಾಧನೆಯ ಶ್ರೇಯವನ್ನು ಪತಿಗೆ ನೀಡುತ್ತಾರೆ. ಮಾಸ್ಟರ್ಸ್ ಪದವಿ ಪಡೆಯುವವರೆಗಿನ ಸಂದರ್ಭದಲ್ಲಿ ಮಕ್ಕಳನ್ನು ಬಿಟ್ಟಿರಬೇಕಾಗಿಬರುತ್ತಿತ್ತು. ಮನೆಗೆಲಸಗಳಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿರಲಿಲ್ಲ.
ಅಲ್ಲದೆ ಹಾಸ್ಟೆಲ್ಲಿನಲ್ಲಿ ಇರಬೇಕಾದ ಪರಿಸ್ಥಿತಿಯೂ ಬಂದಿತ್ತು. ಆ ಸಂದರ್ಭದಲ್ಲಿ ಪತಿ ಧೈರ್ಯ ತುಂಬಿ ತಮ್ಮನ್ನು ಹಾಸ್ಟೆಲ್ಲಿಗೆ ಕಳಿಸಿಕೊಟ್ಟಿದ್ದರು ಎಂದು ಪತಿಯನ್ನು ತುಂಬು ಹೃದಯದಿಂದ ನೆನೆಯುತ್ತಾರೆ ರಾಮ್ಲಾ.
ಇದನ್ನೂ ಓದಿ: 'ಮಲ್ನಾಡ್ ಕನ್ನಡ ಕಾರ್ಟೂನ್' ಮೂಲಕ ಯೂಟ್ಯೂಬ್, ಸೋಷಿಯಲ್ ಮೀಡಿಯಾದಲ್ಲಿ ಪೂಜಾ ಹರೀಶ್ ಜನಪ್ರಿಯ