ಫ್ಯಾಷನ್ ಶೋನಲ್ಲಿ ರಾಂಪ್ ವಾಕ್ ಮಾಡಿದ ಆದಿವಾಸಿ ಹುಡುಗಿ: ಪ್ರತಿಸ್ಪರ್ಧಿಗಳ ಮೆಚ್ಚುಗೆ

ಕೇರಳ ರಾಜ್ಯದ ಪ್ರತಿಷ್ಟಿತ ಮಿಸ್ ಕೇರಳ ಫ್ಯಾಷನ್ ಶೋಗೆ ದೇಶಾದ್ಯಂತ 500 ಮಂದಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಅನುಪ್ರಸೋಬಿನಿಯೂ ಒಬ್ಬಳಾಗಿದ್ದಳು. 
ಅನುಪ್ರಸೋಬಿನಿ
ಅನುಪ್ರಸೋಬಿನಿ

ಪಾಲಕ್ಕಾಡ್: ಅನುಪ್ರಸೋಬಿನಿ, ಆದಿವಾಸಿ ಜನಾಂಗಕ್ಕೆ ಸೇರಿದ ಹುಡುಗಿ. ಪಾಲಕ್ಕಾಡ್ ನ ಚೊರಿಯಾನೂರ್ ಎಂಬಲ್ಲಿ ಆಕೆಯ ಕುಟುಂಬ ನೆಲೆಸಿದೆ. ಆಕೆ ಫ್ಯಾಷನ್ ಶೋ ನಲ್ಲಿ ರಾಂಪ್ ವಾಕ್ ಮಾಡಿದ್ದು, ಈ ಸಾಧನೆ ಮಾಡಿದ ಮೊದಲ ಆದಿವಾಸಿ ಹೆಣ್ಣುಮಗಳು ಎನ್ನುವ ಹೆಸರಿಗೆ ಅನುಪ್ರಸೋಬಿನಿ ಪಾತ್ರಳಾಗಿದ್ದಾಳೆ. 

17 ವರ್ಷದ ಆಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಕೇರಳ ರಾಜ್ಯದ ಪ್ರತಿಷ್ಟಿತ ಮಿಸ್ ಕೇರಳ ಫ್ಯಾಷನ್ ಶೋಗೆ ದೇಶಾದ್ಯಂತ 500 ಮಂದಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಅನುಪ್ರಸೋಬಿನಿಯೂ ಒಬ್ಬಳಾಗಿದ್ದಳು. 

ಫ್ಯಾಷನ್ ಶೋ ನ ವಿವಿಧ ಹಂತಗಳ ನಂತರ, ಅಂತಿಮ ಸುತ್ತಿನಲ್ಲಿ 33 ಪ್ರತಿಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಅವರಲ್ಲಿ ಈಕೆಯೂ ಒಬ್ಬಳು. ಆಕೆಗೆ ಪ್ರತಿಸ್ಪರ್ಧಿಗಳ ಪ್ರೋತ್ಸಾಹ ಮತ್ತು ಪ್ರೀತಿ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com