ತಪ್ಪಾಗಿ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆದ 8 ಲಕ್ಷ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ
ವ್ಯಾಪಾರಿ ಅರ್ಜುನ್ ಓಝಾ ಅವರ ಬ್ಯಾಂಕ್ ಖಾತೆಗೆ 8 ಲಕ್ಷ ರೂ. ಕ್ರೆಡಿಟ್ ಆಗಿತ್ತು. ಈ ಬಗ್ಗೆ ಅವರಿಗೆ ಎಸ್ಸೆಮ್ಮೆಸ್ ಸಂದೇಶ ಬಂದಿತ್ತು.
Published: 24th November 2021 11:52 AM | Last Updated: 24th November 2021 01:22 PM | A+A A-

ಸಾಂದರ್ಭಿಕ ಚಿತ್ರ
ಭುವನೇಶ್ವರ: ಒಡಿಶಾದ ನೌಗಾನ್ ಎಂಬಲ್ಲಿನ ವ್ಯಾಪಾರಿ ಅರ್ಜುನ್ ಓಝಾ ಅವರ ಬ್ಯಾಂಕ್ ಖಾತೆಗೆ 8 ಲಕ್ಷ ರೂ. ಕ್ರೆಡಿಟ್ ಆಗಿತ್ತು. ಈ ಬಗ್ಗೆ ಅವರಿಗೆ ಎಸ್ಸೆಮ್ಮೆಸ್ ಸಂದೇಶ ಬಂದಿತ್ತು. ಅದನ್ನು ಓದಿದ ಕೂಡಲೆ ಅವರಿಗೆ ಇದು ತಪ್ಪಾಗಿ ಆದ ಟ್ರಾನ್ಸಾಕ್ಷನ್ ಎನ್ನುವುದು ತಿಳಿದುಹೋಗಿತ್ತು.
ಇದನ್ನೂ ಓದಿ: 12ನೇ ವಯಸ್ಸಿಗೇ ಮದುವೆಯಾಗಿ ಶಾಲೆ ಬಿಟ್ಟಿದ್ದ ಕೇರಳ ಮಹಿಳೆ ಈಗ ಹೈಸ್ಕೂಲ್ ಶಿಕ್ಷಕಿ
ಒಡನೆಯೇ ಬ್ಯಾಂಕ್ ಅನ್ನು ಅವರು ಸಂಪರ್ಕಿಸಿದ್ದರು. ಆಗ ಉತ್ತರಪ್ರದೇಶದ ಎಚ್ ಡಿ ಎಫ್ ಸಿ ಬ್ಯಾಂಕಿನಿಂದ ಈ ಟ್ರಾನ್ಸಾಕ್ಷನ್ ಆಗಿರುವುದು ತಿಳಿದುಬಂದಿತ್ತು. ಅದೇ ಸಮಯಕ್ಕೆ ಸರಿಯಾಗಿ ಎಚ್ ಡಿ ಎಫ್ ಸಿ ಬ್ಯಾಂಕಿನಿಂದ ಒಂದು ಕರೆ ಬಂಡಿತ್ತು.
ಇದನ್ನೂ ಓದಿ: ಪತಿಗೆ ವಿಚ್ಛೇದನ, ಒಂಟಿತನ ನಿವಾರಿಸಲು ನಾಯಿಯನ್ನು ಮದುವೆಯಾದ ಮಹಿಳೆ!
ಕರೆ ಮಾಡಿದ್ದ ಬ್ಯಾಂಕ್ ಸಿಬ್ಬಂಡಿ ಜೊತೆ ತಮ್ಮ ಖಾತೆಗೆ 8 ಲಕ್ಷ ರೂ. ತಪ್ಪಾಗಿ ವರ್ಗಾವಣೆಯಾಗಿರುವುದಾಗಿ ಆರ್ಜುನ್ ಹೇಳಿದ್ದರು. ಅಲ್ಲದೆ ಯಾರಿಂದ ಆ ಟ್ರಾನ್ಸಾಕ್ಷನ್ ಮಾಡಲ್ಪಟ್ಟಿತೋ ಅವರ ಖಾತೆಯ ಡೀಟೇಲ್ಸ್ ಪಡೆದು ಹಣವನ್ನು ಅವರು ಹಿಂದಿರುಗಿಸಿದ್ದಾರೆ.
ಇದನ್ನೂ ಓದಿ: ಪತಿಗೆ ವಿಚ್ಛೇದನ, ಒಂಟಿತನ ನಿವಾರಿಸಲು ನಾಯಿಯನ್ನು ಮದುವೆಯಾದ ಮಹಿಳೆ!