The New Indian Express
ರಾಂಚಿ: ಪಾಠ ಮಾಡಲು ವಿನೂತನ ದಾರಿ ಕೊಂಡುಕೊಂಡ ಜಾರ್ಖಂಡ್ ನ ಶಿಕ್ಷಕ ಸಪನ್ ಕುಮಾರ್ ರನ್ನು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ನವದೆಹಲಿಗೆ ಆಹ್ವಾನಿಸಿದ್ದಾರೆ. ಅಲ್ಲಿ ಅವರು ತಮ್ಮ ವಿನೂತನ ಮಾರ್ಗದ ಕುರಿತು ಪ್ರವಚನ ನೀಡಲಿದ್ದಾರೆ.
ಇದನ್ನೂ ಓದಿ: ದೋಣಿಯೇ ಈ ಮಕ್ಕಳ ಪಾಠಶಾಲೆ: ಪ್ರವಾಹಪೀಡಿತ ಬಿಹಾರದಲ್ಲಿ ಮೂವರು ಯುವಕರ ಸಾಧನೆ
ದುಮರ್ತುರ್ ಗ್ರಾಮದಲ್ಲಿ ಶಿಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸಪನ್ ಕುಮಾರ್ ನರೇಂದ್ರ ಮೋದಿಯವರ ಮನ್ ಕಿ ಬಾತ್ ನಿಂದಾಗಿ ಇತ್ತೀಚಿಗೆ ಸುದ್ದಿಯಾಗಿದ್ದರು. ಗ್ರಾಮದ ಮನೆಗಳ ಗೋಡೆಗಳ ಮೇಲೆ ಅವರು ಅಕ್ಷರ ಮಾಲೆ, ಪಾಠ ಪ್ರವಚನಗಳನ್ನು ಬರೆದು ಗ್ರಾಮದ ಮನೆಗಳನ್ನು ಹಲಗೆಯನ್ನಾಗಿ ಮಾರ್ಪಡಿಸಿದ್ದರು.
ಇದನ್ನೂ ಓದಿ: ಶಾಲಾ ಆವರಣಗಳಿಂದ ಹಾದು ಹೋಗಿರುವ ವಿದ್ಯುತ್ ತಂತಿಗಳ ತೆರವುಗೊಳಿಸಿ: ಸರ್ಕಾರಕ್ಕೆ 'ಹೈ' ಆದೇಶ
ಕೊರೊನಾ ಸಾಂಕ್ರಾಮಿಕದಿಂದಾಗಿ ದೇಶದೆಲ್ಲೆಡೆ ಮಕ್ಕಳು ಮೊಬೈಲು ಫೋನುಗಳಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ, ಆದರೆ ಸಪನ್ ಕುಮಾರ್ ಗ್ರಾಮದಲ್ಲಿ ಬಹುತೇಕರ ಬಳಿ ಮೊಬೈಲ್ ಫೋನುಗಳು ಇಲ್ಲದ ಕಾರಣ ಸಪನ್ ಕುಮಾರ್ ಈ ವಿನೂತನ ಮಾರ್ಗ ಅನುಸರಿಸಿದ್ದರು. ಪಾಠ ಮಾಡಲು ಅವರು ಧ್ವನಿವರ್ಧಕಗಳನ್ನೂ ಬಳಕೆ ಮಾಡುತ್ತಿದ್ದಾರೆ.