The New Indian Express
ಪಾಟ್ನಾ: ಬಿಹಾರದ ಕತಿಹಾರ್ ಎಂಬಲ್ಲಿ ಪ್ರವಾಹ ತಲೆದೋರಿ ಶಾಲೆ, ಮನೆಗಳೆಲ್ಲಾ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ಪರಿಸ್ಥಿತಿಯಲ್ಲಿ ಮೂವರು ಪದವೀಧರ ಯುವಕರು ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಹೊಸದೊಂದು ಮಾರ್ಗ ಕಂಡುಕೊಂಡಿದ್ದಾರೆ. ತೇಲುವ ದೋಣಿಯನ್ನೇ ಶಾಲೆಯನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ.
ಬಯಲಲ್ಲಿ, ಉದ್ಯಾನವನದಲ್ಲಿ ಪಾಠ ಮಾಡುವುದನ್ನು ನಾವೆಲ್ಲರೂ ನೋಡಿಯೇ ಇರುತ್ತೇವೆ. ಆದರೆ ಪ್ರವಾಹಪೀಡಿತ ಕತಿಹಾರ್ ಗ್ರಾಮದ ಮೂವರು ಪದವೀಧರ ಯುವಕರು ದೋಣಿ ಮೇಲೆ ಒಂದರಿಂದ ಎಸ್ಸೆಸ್ಸೆಲ್ಸಿ ತನಕದ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದಾರೆ.
ಇದನ್ನೂ ಓದಿ: ಮಕ್ಕಳ ಶಾಲಾ ಶುಲ್ಕದ ಮೇಲೆ ನಿಗಾ ಇರಿಸಲು ಸಮಿತಿ ರಚಿಸುವಂತೆ ಸರ್ಕಾರಕ್ಕೆ ಪಾಲಕರ ಆಗ್ರಹ
ಈ ಗ್ರಾಮಕ್ಕೆ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುವುದು ಸಾಮಾನ್ಯ. ಆ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೆ ಮುಚ್ಚಲ್ಪಡುತ್ತವೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಮೊದಲೇ ತೊಂದರೆಗೊಳಗಾಗಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಬಾರದಂತೆ ಪ್ರವಾಹ ಪರಿಸ್ಥಿತಿ ನಡುವೆ ಪಾಠ ಪ್ರವಚನ ಮುಂದುವರಿದಿದೆ. ರವೀಂದ್ರ ಕುಮಾರ್, ಪಂಕಜ್ ಕುಮಾರ್ ಮತ್ತು ಕುಂದನ್ ಕುಮಾರ್ ಎಂಬುವವರೇ ಆ ಮೂವರು ಯುವಕರು.
ಪಾಠ ಹೇಳಿಕೊಡುತ್ತಿರುವುದಕ್ಕೆ ಯುವಕರು ಯಾವುದೇ ಶುಲ್ಕ ಪಡೆಯುತ್ತಿಲ್ಲ, ಇದು ಸಂಪೂರ್ಣ ಉಚಿತ.
ಇದನ್ನೂ ಓದಿ: ಕಾಸರಗೋಡು ದೋಣಿ ದುರಂತ: ನಾಪತ್ತೆಯಾದ ಮೂವರು ಮೀನುಗಾರರು ಶವವಾಗಿ ಪತ್ತೆ