ದಶಪಥ ಹೆದ್ದಾರಿ: ಚನ್ನಪಟ್ಟಣದ ವಿಶ್ವವಿಖ್ಯಾತ ‘ಆಟಿಕೆಗಳ ನಾಡು' ಖ್ಯಾತಿ ಅಂತ್ಯ!

ನೂರಾರು ವರ್ಷಗಳ ಹಿಂದಿನ ಶ್ರೀಮಂತ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಆಟಿಕೆಗಳ ನಾಡು ಚನ್ನಪಟ್ಟಣವು ಮರದ ಕರಕುಶಲ ಮತ್ತು ನುರಿತ ಕುಶಲಕರ್ಮಿಗಳಿಗೆ ಹೆಸರುವಾಸಿಯಾಗಿದೆ.
ದಶಪಥ ಹೆದ್ದಾರಿ: ಚನ್ನಪಟ್ಟಣದ ವಿಶ್ವವಿಖ್ಯಾತ ‘ಆಟಿಕೆಗಳ ನಾಡು' ಖ್ಯಾತಿ ಅಂತ್ಯ!

ನೂರಾರು ವರ್ಷಗಳ ಹಿಂದಿನ ಶ್ರೀಮಂತ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಆಟಿಕೆಗಳ ನಾಡು ಚನ್ನಪಟ್ಟಣವು ಮರದ ಕರಕುಶಲ ಮತ್ತು ನುರಿತ ಕುಶಲಕರ್ಮಿಗಳಿಗೆ ಹೆಸರುವಾಸಿಯಾಗಿದೆ. ರಾಮನಗರ ಜಿಲ್ಲೆಯ ತಾಲೂಕು ಕೇಂದ್ರವಾದ ಚನ್ನಪಟ್ಟಣವು ಆಟಿಕೆಗಳು ಮತ್ತು ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾಗಿದೆ, ಇದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ.

ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ 10 ಪಥಗಳ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಭರದಿಂದ ಸಾಗುತ್ತಿರುವ ಕಾರಣ ಇದೆಲ್ಲವೂ ಶೀಘ್ರದಲ್ಲೇ ಇತಿಹಾಸವಾಗಬಹುದು ಎಂಬ ಭೀತಿ ಎದುರಾಗಿದೆ. ಎಕ್ಸ್‌ಪ್ರೆಸ್‌ವೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡದಿದ್ದರೂ ಸಾವಿರಾರು ಜನರ ಜೀವನೋಪಾಯವನ್ನು ಕಿತ್ತುಕೊಂಡಿದೆ. ಈ ಕಾರಿಡಾರ್ ಒಂಬತ್ತು ಪ್ರಮುಖ ಸೇತುವೆಗಳು, 44 ಸಣ್ಣ ಸೇತುವೆಗಳು ಮತ್ತು ನಾಲ್ಕು ರೈಲು ಮೇಲ್ಸೇತುವೆಗಳನ್ನು ಹೊಂದಿದೆ. ಒಮ್ಮೆ ಸಂಪೂರ್ಣವಾಗಿ ಕಾರ್ಯಗತಗೊಂಡ ನಂತರ, 117-ಕಿಮೀ ಹೆದ್ದಾರಿ -- ಬೆಂಗಳೂರಿನ ನೈಸ್ ಪ್ರವೇಶದ್ವಾರದಿಂದ ಮೈಸೂರಿನ ರಿಂಗ್ ರೋಡ್ ಜಂಕ್ಷನ್‌ವರೆಗೆ -- ಪ್ರಯಾಣದ ಸಮಯವನ್ನು ಸರಾಸರಿ ಮೂರು ಗಂಟೆಗಳಿಂದ ಸುಮಾರು 90 ನಿಮಿಷಗಳಿಗೆ ಕಡಿತಗೊಳಿಸುವ ನಿರೀಕ್ಷೆಯಿದೆ.

ಆದರೆ ಅಂತೆಯೇ ಮತ್ತೊಂದು ಭಾಗದಲ್ಲಿ ಈ ಮಾರ್ಗದಲ್ಲಿ ಅಭಿವೃದ್ಧಿ ಹೊಂದುವ ವ್ಯವಹಾರಗಳು ಮತ್ತು ಐತಿಹಾಸಿ ಆಟಿಕೆ ಅಂಗಡಿಗಳೂ ಕೂಡ ಮುಚ್ಚಲ್ಪಡುತ್ತವೆ. ಈ ಕುರಿತ ಸಮೀಕ್ಷೆಯು ಕಠೋರ ಚಿತ್ರವನ್ನು ಚಿತ್ರಿಸುತ್ತದೆ. ಉದಾಹರಣೆಗೆ ಶ್ರೀ ಮೀನಾಕ್ಷಿ ಕರಕುಶಲ ಅಂಗಡಿಯನ್ನೇ ತೆಗೆದುಕೊಳ್ಳಿ. ಚನ್ನಪಟ್ಟಣದ ದೊಡ್ಡ ಆಟಿಕೆ ಅಂಗಡಿಗಳಲ್ಲಿ ಒಂದಾದ ಇದು ಈಗ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದೆ. ಇತ್ತೀಚಿನವರೆಗೂ ಚಟುವಟಿಕೆಯಿಂದ ಗಿಜಿಗುಡುತ್ತಿದ್ದ ಇಲ್ಲಿನ ಸಿಬ್ಬಂದಿ ಸಂಖ್ಯೆ ಮೊದಲಿನ 15ರಿಂದ ಕೇವಲ ಎರಡಕ್ಕೆ ಇಳಿದಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಕೈಯಿಂದ ಮಾಡಿದ ಮರದ ಆಟಿಕೆಗಳು ಮಾರಾಟವಾಗದೆ ಆಂಗಡಿಗಳಲ್ಲೇ ಬಿದ್ದಿವೆ.

ಇದು ಕೇವಲ ಈ ಅಂಗಡಿಯ ಕಥೆಯಷ್ಟೇ ಅಲ್ಲ.. ಹಳೆಯ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಚನ್ನಪಟ್ಟಣ ಮತ್ತು ಸುತ್ತಮುತ್ತಲಿನ ಇಂತಹ ಅನೇಕ ಆಟಿಕೆ ಎಂಪೋರಿಯಂಗಳ ಕಥೆ ಕೂಡ ಆಗಿದೆ. 60 ವರ್ಷಗಳ ಹಿಂದೆ ಶ್ರೀ ಮೀನಾಕ್ಷಿ ಹ್ಯಾಂಡಿಕ್ರಾಫ್ಟ್ ಅನ್ನು ಚಿಕ್ಕಪ್ಪ ಪ್ರಾರಂಭಿಸಿದರು. ಚನ್ನಪಟ್ಟಣದ ದೊಡ್ಡ ಆಟಿಕೆ ಮಳಿಗೆಗಳಲ್ಲಿ ಒಂದಾಗಿ ಅಂಗಡಿ ಬೆಳೆದಿದೆ ಎಂದು ಅಂಗಡಿ ಮಾಲೀಕ ಶೇಖರ್ ಹೇಳಿದ್ದಾರೆ. ಆದರೆ ವರ್ಷಗಳಲ್ಲಿ, ಪ್ರವಾಸಿಗರು ಈ ವಿಶಿಷ್ಟವಾದ, ಪರಿಸರ ಸ್ನೇಹಿ ಆಟಿಕೆಗಳನ್ನು ಖರೀದಿಸಲು ನಿಲ್ಲಿಸಿದ ಕಾರಣ ಬೇಡಿಕೆ ಕಡಿಮೆಯಾಗಿದೆ. ನಾವು ಆಟಿಕೆಗಳನ್ನು ಪ್ರದರ್ಶಿಸಲು ದೊಡ್ಡ ಕಟ್ಟಡವನ್ನು ಹೊಂದಿದ್ದೇವೆ, ಆದರೆ ದಶಪಥ ಹೆದ್ದಾರಿಯಿಂದಾಗಿ ಕಿರಾಣಿ ಅಂಗಡಿಯಂತಹ ಇತರ ವ್ಯಾಪಾರಕ್ಕಾಗಿ ಸ್ಥಳವನ್ನು ಬದಲಾಯಿಸಲು ಮತ್ತು ಬಳಸಲು ನಾವು ಒತ್ತಾಯಿಸಬಹುದು ಎಂದು ಅವರು ಹೇಳಿದರು.

ದೊಡ್ಡಮಾಳೂರಿನ ಅಂಬೇಗಾಲು ಕೃಷ್ಣ ದೇವಸ್ಥಾನದ ಬಳಿಯ ಮತ್ತೊಂದು ದೊಡ್ಡ ಆಟಿಕೆ ಅಂಗಡಿಯ ಉದ್ಯೋಗಿ ನಾಗ ಮಾತನಾಡಿ, ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಚರಿಸುವ ಜನರು ದೇವಸ್ಥಾನದಲ್ಲಿ ನಿಲ್ಲುತ್ತಾರೆ ಮತ್ತು ಆಟಿಕೆಗಳನ್ನು ಖರೀದಿಸಲು ತಮ್ಮ ಅಂಗಡಿಗೆ ಭೇಟಿ ನೀಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಜನರು ಬರುತ್ತಿಲ್ಲ, ಮತ್ತು ನಮಗೆ ಹೋಗಲು ಎಲ್ಲಿಯೂ ಸ್ಥಳ ಇಲ್ಲ. ಸರ್ಕಾರ ನಮಗೆ ಪರ್ಯಾಯ ವ್ಯವಸ್ಥೆ ಮಾಡಬೇಕು' ಎಂದು ಮನವಿ ಮಾಡಿದರು.

ಚನ್ನಪಟ್ಟಣದ ಕಲಾನಗರದ 400ಕ್ಕೂ ಹೆಚ್ಚು ಕುಟುಂಬಗಳು ಆಟಿಕೆಗಳನ್ನು ತಯಾರಿಸಿ ಮುಖ್ಯರಸ್ತೆಯಲ್ಲಿರುವ ದೊಡ್ಡ ಅಂಗಡಿಗಳಿಗೆ ಸರಬರಾಜು ಮಾಡುತ್ತಿವೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಅಂಗಡಿಗಳು ಕುಶಲಕರ್ಮಿಗಳಿಗೆ ಆರ್ಡರ್ ನೀಡುವುದನ್ನೇ ನಿಲ್ಲಿಸಿವೆ. “ಕೋವಿಡ್-ಪ್ರೇರಿತ ಲಾಕ್‌ಡೌನ್‌ಗಳ ಸಮಯದಲ್ಲಿ, ಅಗತ್ಯ ಸೇವೆಗಳನ್ನು ಮಾತ್ರ ಕಾರ್ಯನಿರ್ವಹಿಸಲು ಅನುಮತಿಸಲಾಗಿತ್ತು. ಆಟಿಕೆ ತಯಾರಿಕೆ ಅದರಲ್ಲಿ ಇಲ್ಲದ ಕಾರಣ ನಮಗೆ ಕೆಲಸ ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಉತ್ತಮವಾಗುತ್ತಿರುವಾಗ, ಎಕ್ಸ್‌ಪ್ರೆಸ್‌ವೇ ಹೆದ್ದಾರಿ ಕಾಮಗಾರಿ ಕೆಲಸವು ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಅದು ನಮ್ಮ ಕೆಲಸವನ್ನು ಕಿತ್ತುಕೊಳ್ಳುವ ಭೀತಿ ಕಾಡುತ್ತಿದೆ. ಸರ್ಕಾರ ನಮಗೆ ಹೆದ್ದಾರಿಯಲ್ಲಿ ಸ್ಥಳಾವಕಾಶ ನೀಡಿ, ಕೆಲಸ ಮುಂದುವರಿಸಲು ಅನುವು ಮಾಡಿಕೊಡಬೇಕು' ಎಂದು ಕಳೆದ 27 ವರ್ಷಗಳಿಂದ ಆಟಿಕೆ ತಯಾರಕರಾದ ಫರೀದ್ ಖಾನ್ ಹೇಳಿದ್ದಾರೆ.

ಕಳೆದ 37 ವರ್ಷಗಳಿಂದ ಕುಶಲಕರ್ಮಿ ವೃತ್ತಿಯಲ್ಲಿರುವ ಮಹಮ್ಮದ್ ಸೈಯದ್ ಅವರು ಮಾತನಾಡಿ ಪ್ರತಿ ವಾರ 200 ಗೊಂಬೆಗಳು ಮತ್ತು 1,000 ಬಳೆಗಳನ್ನು ಮಾಡಲು ಆರ್ಡರ್ ಪಡೆಯುತ್ತಿದ್ದೆ. ಆದರೆ ಈಗ ಅದನ್ನು ಕೇವಲ 50 ಆಟಿಕೆಗಳಿಗೆ ಇಳಿಸಲಾಗಿದೆ. ನನ್ನ ಮಗ ಬೆಂಗಳೂರಿನಲ್ಲಿ ಪ್ಯಾರಾಮೆಡಿಕಲ್ ಕೋರ್ಸ್ ಓದುತ್ತಿದ್ದಾನೆ. ನಮ್ಮ ಕೌಶಲ್ಯವು ನನ್ನ ಪೀಳಿಗೆಯೊಂದಿಗೆ ನಿಲ್ಲುತ್ತದೆ ಎಂದು ತೋರುತ್ತಿದೆ. ಎಕ್ಸ್‌ಪ್ರೆಸ್‌ವೇ ನಮ್ಮ ಜೀವನೋಪಾಯವನ್ನು ಕೊಂದು ಹಾಕಿದೆ. ಈಗ ತಯಾರಾಗುತ್ತಿರುವ ಗೊಂಬೆಗಳು ಮುಂದಿನ ತಿಂಗಳು ಬರುವ ದಸರಾಕ್ಕೆ ಮುಗಿಯಬಹುದು. ದಸರಾ ನಂತರ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಕಾನಿಕ್ ತಿಂಡಿ ಅಂಗಡಿಗಳಿಗೂ ಭೀತಿ
ಕಳೆದ 70 ರಿಂದ 100 ವರ್ಷಗಳಿಂದ ನಡೆಯುತ್ತಿರುವ ರಾಮನಗರದ ಬಿಡದಿ ಮತ್ತು ಮದ್ದೂರಿನ ಮದ್ದೂರು ಟಿಫಾನಿಸ್‌ನ ಪ್ರಸಿದ್ಧ ಇಡ್ಲಿ ಜಾಯಿಂಟ್‌ಗಳು ಸಹ ಎಕ್ಸ್‌ಪ್ರೆಸ್‌ವೇ ಬೈಪಾಸ್‌ನಿಂದ ಮುಚ್ಚುವ ಅಪಾಯವನ್ನು ಎದುರಿಸುತ್ತಿವೆ. 1959ರಲ್ಲಿ ಆರಂಭವಾದ ಬಿಡದಿ ತಟ್ಟೆ ಇಡ್ಲಿ ಖ್ಯಾತಿಯ ರೇಣುಕಾಂಬ ತಟ್ಟೆ ಇಡ್ಲಿ ವ್ಯಾಪಾರದಲ್ಲಿ ನಷ್ಟವಾಗುತ್ತಿದೆ. ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡಾಗ ಪ್ರಯಾಣಿಕರು ಬಿಡದಿಯನ್ನು ಮುಟ್ಟದೆ ನೇರವಾಗಿ ರಾಮನಗರದಲ್ಲಿ ಇಳಿಯುತ್ತಾರೆ ಎಂದು ಜಂಟಿ ಮೂರನೇ ತಲೆಮಾರಿನ ಮಾಲೀಕ ಸುರೇಶ್ ಬಾಬು ಎಚ್‌ಕೆ ಹೇಳಿದ್ದಾರೆ. ನಾವು ನಮ್ಮ ಶೇಕಡಾ 80 ರಷ್ಟು ಗ್ರಾಹಕರನ್ನು ಕಳೆದುಕೊಂಡಿದ್ದೇವೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಅಂತೆಯೇ ಮದ್ದೂರು ಟಿಫಾನಿಸ್ ಮ್ಯಾನೇಜರ್‌ಗಳದ್ದೂ ಇದೇ ಕಥೆ. ಶತಮಾನದಷ್ಟು ಹಳೆಯದಾದ ಮದ್ದೂರು ವಡೆಯನ್ನು ಕಳೆದ 34 ವರ್ಷಗಳಿಂದ ಮಾರಾಟ ಮಾಡುತ್ತಿರುವ ಈ ತಿನಿಸು ಇದೀಗ ಎಕ್ಸ್‌ಪ್ರೆಸ್‌ವೇಯ ನಿಡಘಟ್ಟ ಬಳಿ ಪರ್ಯಾಯ ಸ್ಥಳವನ್ನು ಹುಡುಕುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com