ದೇಶದಲ್ಲಿ ಇದೇ ಮೊದಲು: 2023ರ ವೇಳೆಗೆ ರಾಜ್ಯದ ರೈತರು ಸಂಪೂರ್ಣ ಆನ್'ಲೈನಲ್ಲಿಯೇ ಬೆಳೆಗಳ ಖರೀದಿ, ವಿತರಣೆ!
ರಾಜ್ಯದ ರೈತರು ಸಂಪೂರ್ಣ ಡಿಜಿಟಲೀಕರಣಗೊಳ್ಳುತ್ತಿದ್ದು, 2023ರ ವೇಳೆಗೆ ಆನ್'ಲೈನಲ್ಲಿಯೇ ಬೆಳೆಗಳ ವಿತರಣೆ ಹಾಗೂ ಖರೀದಿ ಮಾಡಲಿದ್ದಾರೆ. ರೈತರು ಸಂಪೂರ್ಣ ಡಿಜಿಟಲೀಕರಣಗೊಳ್ಳುತ್ತಿರುವುದು ದೇಶದಲ್ಲಿಯೇ ಮೊದಲಾಗಿದೆ.
Published: 04th December 2022 11:40 AM | Last Updated: 05th December 2022 03:50 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದ ರೈತರು ಸಂಪೂರ್ಣ ಡಿಜಿಟಲೀಕರಣಗೊಳ್ಳುತ್ತಿದ್ದು, 2023ರ ವೇಳೆಗೆ ಆನ್'ಲೈನಲ್ಲಿಯೇ ಬೆಳೆಗಳ ವಿತರಣೆ ಹಾಗೂ ಖರೀದಿ ಮಾಡಲಿದ್ದಾರೆ. ರೈತರು ಸಂಪೂರ್ಣ ಡಿಜಿಟಲೀಕರಣಗೊಳ್ಳುತ್ತಿರುವುದು ದೇಶದಲ್ಲಿಯೇ ಮೊದಲಾಗಿದೆ.
ರೈತರನ್ನು ಡಿಜಿಟಲೀಕರಣಗೊಳಿಸುವತ್ತ ರಾಜ್ಯದ ಕೃಷಿ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದ್ದು, 2023ರ ಏಪ್ರಿಲ್ 1 ರಿಂದ ರೈತರು ಸಂಪೂರ್ಣ ಕಾಗದರಹಿತ ಹಾಗೂ ಪಾರದರ್ಶಕ ರೀತಿಯಲ್ಲಿ ಖರೀದಿ ಮತ್ತು ವಿತಾರಣಾ ಪ್ರಕ್ರಿಯೆ ಮಾಡುವುದು ಕಡ್ಡಾಯ ಮಾಡಿದೆ.
ನವೆಂಬರ್ 24, 2022 ರಂದು ಸರ್ಕಾರ ಆದೇಶದ ಹೊಡಿಸಿತ್ತು. ಡಿಸೆಂಬರ್ 31, 2022 ರ ಆರಂಭದಲ್ಲಿ, ಶಿವಮೊಗ್ಗ, ವಿಜಯಪುರ, ಚಿತ್ರದುರ್ಗ ಮತ್ತು ಮೈಸೂರು ನಾಲ್ಕು ಜಿಲ್ಲೆಗಳು ಆನ್'ಲೈನ್ ವಿತರಣೆ ಹಾಗೂ ಖರೀದಿ ಮಾಡುವ ಸೌಲಭ್ಯ ನೀಡಿತ್ತು, ಇದೀಗ ಜನವರಿ 1 ರಿಂದ ಪ್ರಾಯೋಗಿಕವಾಗಿ ಎಲ್ಲಾ 31 ಜಿಲ್ಲೆಗಳಲ್ಲಿ ಇದನ್ನು ಪ್ರಾರಂಭಿಸಲಾಗುತ್ತಿದ್ದು, ಏಪ್ರಿಲ್ 1, 2023 ರಿಂದ ಕಡ್ಡಾಯ ಮಾಡಲು ಮುಂದಾಗಿದೆ.
ಇದನ್ನೂ ಓದಿ: ಬಂಜರು ಭೂಮಿಯನ್ನು ನಿತ್ಯಹರಿದ್ವರ್ಣ ಕಿರು ಅರಣ್ಯವನ್ನಾಗಿ ಪರಿವರ್ತಿಸಿದ ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯ ಮಳಿಮಠ!
ಜಂಟಿ ನಿರ್ದೇಶಕರು, ಉಪನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಸೇರಿದಂತೆ ಕೃಷಿ ಇಲಾಖೆಯ ಅಧೀನದಲ್ಲಿರುವ ಎಲ್ಲಾ ಕಚೇರಿಗಳು - ಜಿಲ್ಲಾ ತರಬೇತಿ ಕೇಂದ್ರಗಳು, ಪ್ರಯೋಗಾಲಯಗಳು ಮತ್ತು ರೈತ ಸಂಪರ್ಕ ಕೇಂದ್ರಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಡಿಜಿಟಲೀಕರಣದ ಸಂಪೂರ್ಣ ವ್ಯವಸ್ಥೆಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ (NIC) ಸಹಯೋಗದಲ್ಲಿ ಮಾಡಲಾಗುತ್ತಿದೆ. ಈ ಡಿಜಿಟಲೀಕರಣದೊಂದಿಗೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ 30 ಕ್ಕೂ ಹೆಚ್ಚು ಯೋಜನೆಗಳಿಂದ ಪ್ರಯೋಜನಗಳನ್ನು ರೈತರು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.
ರಾಜ್ಯ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, “ರೈತರು ನಿರ್ದಿಷ್ಟ ರೈತ ಸಂಪರ್ಕ ಕೇಂದ್ರದಿಂದ ಬೀಜಗಳು ಅಥವಾ ರಸಗೊಬ್ಬರಗಳನ್ನು ಖರೀದಿಸಿದರೆ, ಈ ಉತ್ಪನ್ನಗಳಿಗೆ ಕ್ಯೂಆರ್ ಕೋಡ್ ಇರುತ್ತದೆ. ಸ್ಕ್ಯಾನಿಂಗ್ ಮೂಲಕ, ಯಾವ ರೈತರು ಯಾವ ಮಾರಾಟಗಾರರಿಂದ ಖರೀದಿಸಿದ್ದಾರೆ ಮತ್ತು ಖರೀದಿದಾರರ ವಿವರಗಳನ್ನು ಇದು ಸ್ಪಷ್ಟಪಡಿಸುತ್ತದೆ.
ಇದನ್ನೂ ಓದಿ: ಪರ್ವತ ಗುಡ್ಡವನ್ನು ಕಡಿದು ತಾವೇ ರಸ್ತೆ ನಿರ್ಮಿಸಿಕೊಂಡ ಒಡಿಶಾದ ಕೊರಾಪುಟ್ ನ ಬುಡಕಟ್ಟು ಗ್ರಾಮಸ್ಥರು!
ಬೀಜಗಳು ಕಡಿಮೆ ಗುಣಮಟ್ಟದ್ದಾಗಿದ್ದರೆ ಇದು ಮೂಲತಃ ಮಾರಾಟಗಾರರನ್ನು ಜವಾಬ್ದಾರರನ್ನಾಗಿ ಮಾಡುತ್ತದೆ. ಇದು ಪ್ರತಿಯೊಂದು ರೈತ ಸಂಪರ್ಕ ಕೇಂದ್ರಗಳಲ್ಲಿನ ಸ್ಟಾಕ್‌ನ ಪ್ರಮಾಣದ ನೈಜ-ಸಮಯದ ಡೇಟಾವನ್ನು ಸಹ ನೀಡುತ್ತದೆ ಮತ್ತು ಲೈವ್ ಡೇಟಾವು ಉತ್ತಮವಾಗಿ ಕಾರ್ಯನಿರ್ವಹಿಸಲು ನಮಗೆ ಸಹಾಯ ಮಾಡುತ್ತದೆ. ಇದು ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.
ಇದು ಕೃಷಿ ಇಲಾಖೆಯಲ್ಲಿ ದಕ್ಷತೆಯನ್ನು ಸುಧಾರಿಸುವುದರ ಜೊತೆಗೆ ರೈತರಿಗೆ ಮತ್ತು ಮಾರಾಟಗಾರರಿಗೆ ಮಾಹಿತಿಗಳ ನಿರ್ವಹಿಸಲು ಸುಲಭ ಮತ್ತು ಅನುಕೂಲಕರವಾಗಿಸುವ ಗುರಿಯನ್ನು ಹೊಂದಿದೆ, ವಿವಾದಗಳ ಸಂದರ್ಭದಲ್ಲಿ ಅದನ್ನು ಸುಲಭವಾಗಿ ಉಲ್ಲೇಖಿಸಬಹುದು. ಇ-ಫೈಲ್‌ಗಳನ್ನು ಅಳವಡಿಸಿಕೊಳ್ಳುವುದರಿಂದ ಅಧಿಕಾರಿಗಳ ದಕ್ಷತೆಯನ್ನೂ ಸುಧಾರಿಸುತ್ತದೆ. ಈಗಾಗಲೇ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳಿಂದ ಬೆಂಗಳೂರಿನ ಕೇಂದ್ರ ಕಚೇರಿವರೆಗೆ ಕರ್ನಾಟಕದಾದ್ಯಂತ ಇ-ಕಚೇರಿಗಳನ್ನು ಜಾರಿಗೊಳಿಸಲು ನಿರ್ದೇಶನ ನೀಡಿ ಸರ್ಕಾರಿ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಈಗ, ಮಣ್ಣಿಲ್ಲದೆ ತರಕಾರಿ, ಹೂವು, ಹಣ್ಣು ಬೆಳೆಯಿರಿ: ಹೊಸ ತಂತ್ರಜ್ಞಾನ ಉತ್ತೇಜಿಸಲು ಐಐಎಚ್ಆರ್ ಮುಂದು!
“ಪ್ರಸ್ತುತ, ಒಬ್ಬ ರೈತ ಬೀಜಗಳನ್ನು ಖರೀದಿಸಿದರೆ, ಆತ ಅದನ್ನು ರಿಜಿಸ್ಟರ್‌ನಲ್ಲಿ ನಮೂದಿಸಿ, ಸಹಿ ಮಾಡಬೇಕು. ಅಧಿಕಾರಿಗಳು ದತ್ತಾಂಶ ನಿರ್ವಹಣೆ ಮಾಡುವುದು ಬೇಸರದ ವಿಚಾರ. ಬಾರ್‌ಕೋಡ್ ವ್ಯವಸ್ಥೆಯೊಂದಿಗೆ ಇದು ಕಾಗದರಹಿತವಾಗಲಿದೆ. ರೈತರು ಅದನ್ನು ದೂರದಿಂದಲೇ ಮಾಡಬಹುದು ಎಂದು ಹೇಳಿದರು.
ಬೆಳೆಗಳ ಸ್ಟಾಕ್ ದಾಖಲೆಗಳು, ಕಚೇರಿ ಸಭೆಗಳು, ಮಾಪನ ದಾಖಲೆಗಳು ಮತ್ತು ಇತರ ಎಲ್ಲಾ ಪ್ರಕ್ರಿಯೆಗಳ ನಡುವೆ ಫಲಾನುಭವಿಗಳಿಗೆ ವಿತರಣೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದು, ಇದನ್ನು ಸಂಪೂರ್ಣವಾಗಿ ಕಾಗದರಹಿತ ಇಲಾಖೆ ಮಾಡುವ ಗುರಿಯನ್ನು ಇದು ಹೊಂದಿದೆ.
ರಾಜ್ಯದ ಕೃಷಿ ಇಲಾಖೆಯು 53 ಲಕ್ಷಕ್ಕೂ ಹೆಚ್ಚು ರೈತರ ಗುರುತಿನ ಚೀಟಿ (ಎಫ್‌ಐಡಿ)ಗಳನ್ನು ಹೊಂದಿದ್ದು, ಇವುಗಳನ್ನು ಆಧಾರ್ ಮತ್ತು ಭೂ ದಾಖಲೆಗಳಿಗೆ (ಪಹಣಿ) ಲಿಂಕ್ ಮಾಡಲಾಗಿದೆ.