ಸಾವಯವ ಕೃಷಿ ಮೇಲೆ ಪ್ರೀತಿ: ಭಾರತಕ್ಕೆ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿದ ರಷ್ಯಾ ದಂಪತಿಗಳು!

ಕಣ್ಣೂರು ಪಟ್ಟಣದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಆದಿಕದಲಾಯಿ ಎಂಬ ಪುಟ್ಟ ಹಳ್ಳಿಯಲ್ಲಿ ರಷ್ಯಾದ ದಂಪತಿಯೊಬ್ಬರು ಲುಂಗಿ ಮತ್ತು ಟವೆಲ್ ಕಟ್ಟಿಕೊಂಡು ಜಮೀನಿನಲ್ಲಿ ದುಡಿಯುತ್ತಿರುವ ದೃಶ್ಯ ಹಲವರ ಗಮನ ಸೆಳೆದಿತ್ತು.
ಬೊಗ್ಡಾನ್ ಡ್ವೊರೊವಿ ಮತ್ತು ಅಲೆಕ್ಸಾಂಡ್ರಾ ಚೆಬ್ಬೊಟರೆವಾ
ಬೊಗ್ಡಾನ್ ಡ್ವೊರೊವಿ ಮತ್ತು ಅಲೆಕ್ಸಾಂಡ್ರಾ ಚೆಬ್ಬೊಟರೆವಾ

ಕಣ್ಣೂರು: ಕಣ್ಣೂರು ಪಟ್ಟಣದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಆದಿಕದಲಾಯಿ ಎಂಬ ಪುಟ್ಟ ಹಳ್ಳಿಯಲ್ಲಿ ರಷ್ಯಾದ ದಂಪತಿಯೊಬ್ಬರು ಲುಂಗಿ ಮತ್ತು ಟವೆಲ್ ಕಟ್ಟಿಕೊಂಡು ಜಮೀನಿನಲ್ಲಿ ದುಡಿಯುತ್ತಿರುವ ದೃಶ್ಯ ಹಲವರ ಗಮನ ಸೆಳೆದಿತ್ತು.

24 ವರ್ಷದ ಸೇಂಟ್ ಪೀಟರ್ಸ್‌ಬರ್ಗ್‌ನ ಬೊಗ್ಡಾನ್ ಡ್ವೊರೊವಿ ಮತ್ತು ಅಲೆಕ್ಸಾಂಡ್ರಾ ಚೆಬ್ಬೊಟರೆವಾ ದಂಪತಿಗಳಿಗೆ ಸಾವಯವ ಕೃಷಿ ಮೇಲೆ ಪ್ರೀತಿ ಬಂದಿದ್ದು, ಈ ಪ್ರೀತಿಯೇ ಇಬ್ಬರೂ ಭಾರತಕ್ಕೆ ಬರುವಂತೆ ಮಾಡಿತ್ತು.

ಇದೀಗ ದಂಪತಿಗಳು ಆದಿಕಡಲಾಯಿಯಲ್ಲಿ ಸೀ ಶೆಲ್ ಎಂಬ ಹೋಮ್‌ಸ್ಟೇ ನಡೆಸುತ್ತಿರುವ ಅನುಭವಿ ರೈತ ಇವಿ ಹ್ಯಾರಿಸ್ ಅವರಿಂದ, ಸಾವಯವ ಕೃಷಿಯ ಕಲೆಯನ್ನು ಕರಗತ ಮಾಡಿಕೊಳ್ಳಲು ಶ್ರಮಿಸುತ್ತಿದ್ದು, ದಂಪತಿಗಳ ಈ ಪ್ರೀತಿ, ಶ್ರಮವು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ಆರಾಮವಾಗಿ ರೂಮಿನಲ್ಲಿ ಕುಳಿತು ಎಲ್ಲಿ ಬೇಕಾದರೂ ಪುಸ್ತಕ ಓದಬಹುದು. ಪ್ರಪಂಚದಾದ್ಯಂತ ಸುತ್ತಬಹುದು. ವಿವಿಧ ರೀತಿಯ ಜನರ ಹಾಗೂ ಜನರ ಜೀವನದ ಬಗ್ಗೆ ತಿಳಿದುಕೊಳ್ಳಬಹುದು. ಆದರೆ, ಇಲ್ಲಿ ನನಗೆ ಹೊಸ ರೀತಿಯ ಅನುಭವಗಳಾಗುತ್ತಿದೆ. ಇಲ್ಲಿ ನಾವು ಜೀವನವನ್ನು ನೋಡುತ್ತಿದ್ದೇವೆಂದು ಬೊಗ್ಡಾನ್ ಅವರು ಹೇಳಿದ್ದಾರೆ.

ವರ್ಲ್ಡ್‌ವೈಡ್ ಆಪರ್ಚುನಿಟೀಸ್ ಆನ್ ಆರ್ಗಾನಿಕ್ ಫಾರ್ಮ್ಸ್ ಇಂಡಿಯಾ ಎಂಬ ವೆಬ್‌ಸೈಟ್ ಮೂಲಕ ಬೊಗ್ಡಾನ್ ಮತ್ತು ಅಲೆಕ್ಸಾಂಡ್ರಾ ಕೃಷಿ ಬಗ್ಗ ಮಾಹಿತಿ ತಿಳಿದುಕೊಂಡಿದ್ದಾರೆ. ನಂತರ ಹ್ಯಾರಿಸ್ ಅವರನ್ನು ಸಂಪರ್ಕಿಸಿ, ತಮ್ಮ ಜಮೀನನ್ನು ನೋಂದಾಯಿಸಿಕೊಂಡರು.

ಇದನ್ನೂ ಅವರಿಂದ ನಿರೀಕ್ಷಿಸಿರಲಿಲ್ಲ. ಸಾವಯವ ಕೃಷಿ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ದಂಪತಿಗಳು ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಭಾರತಕ್ಕೆ ಬರುವುದಾಗಿ ತಿಳಿಸಿದ ಅವರಿಗೆ ನಾನು ಪೂರ್ವಜನ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೆ. ಆದರೆ, ಐಶಾರಾಮಿ ವಾಸ್ತವ್ಯ ನಿರೀಕ್ಷಿಸದಂತೆ ಹೇಳಿದ್ದೆ. ಅದಕ್ಕೆ ಒಪ್ಪಿ ಬಂದರು. ದಂಪತಿಗಳು ಕಠಿಣ ಪರಿಶ್ರಮಿಗಳಾಗಿದ್ದಾರೆ. ಕಡಿಮೆ ಸಮಯದಲ್ಲಿ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡಿದ್ದಾರೆ. ಇನ್ನು ಕಲವೇ ದಿನಗಳಲ್ಲಿ ಪೂರ್ಣ ಸಮಯದ ರೈತರಾಗಿ ರೂಪಾಂತಗೊಳ್ಳಲಿದ್ದಾರೆಂದು ಹ್ಯಾರಿಸ್ ಹೇಳಿದ್ದಾರೆ.

ದಂಪತಿಗಳ ಬದ್ಧತೆ ನನ್ನಲ್ಲಿ ಆಶ್ಚರ್ಯವನ್ನುಂಟು ಮಾಡುತ್ತಿದೆ. ಬೆಳಿಗ್ಗೆ ಬೇಗನೇ ಎದ್ದು ಜಮೀನಿನ ಕೆಲಸ ಶುರು ಮಾಡುತ್ತಾರೆ. ದೇಹಕ್ಕೆ ಕೆಸರಾದರೂ ಅವರು ಹಿಂಜರಿಯುವುದಿಲ್ಲ. ದನದ ಸಗಣಿ ಎತ್ತಲೂ ಕೂಡ ಅವರು ಹಿಂಜರಿಯುವುದಿಲ್ಲ. ತಮ್ಮ ಕೆಲಸವನ್ನು ಸರಳವಾಗಿ ಹಾಗೂ ಆನಂದದಿಂದ ಮಾಡುತ್ತಾರೆಂದು ತಿಳಿಸಿದ್ದಾರೆ.

ನನ್ನ ಪೋಷಕರು ರೈತರು, ಹೀಗಾಗಿ ಕೃಷಿ ನನಗೆ ಹೊಸತಲ್ಲ. ಭಾರತಕ್ಕೆ ಬರುವ ಮೊದಲು ಕೋವಿಡ್ ಸಮಯದಲ್ಲಿ ಟರ್ಕಿಗೆ ಪ್ರಯಾಣ ಬೆಳೆಸಿದ್ದೆ. ಅಲ್ಲಿ ಜೇನುಸಾಕಣೆಯಲ್ಲಿ ಪರಿಣಿತ ವ್ಯಕ್ತಿಯೊಂದಿಗೆ ಇದ್ದೆ ಎಂದು ಬೊಗ್ಡಾನ್ ಹೇಳಿದ್ದಾರೆ.

ಟರ್ಕಿಯಿಂದ ಸೇಂಟ್ ಪೀಟರ್ಸ್ಬರ್ಗ್ಗೆ ಹಿಂದಿರುಗಿದ ಬೊಗ್ಡಾನ್ ಅವರು, ಅಲ್ಲಿ ಪ್ರಕೃತಿ ಮತ್ತು ಮಾನವರ ಬಗ್ಗೆ ರಷ್ಯನ್ ಭಾಷೆಯಲ್ಲಿ 'ದಿ ಸೀಡ್' ಎಂಬ ಪುಸ್ತಕವನ್ನು ಬರೆದರು.

ವಿರಾಮದ ಸಮಯವೆಂದು ನಾವು ಕೃಷಿ ಮಾಡುತ್ತಿಲ್ಲ. ಇದೇ ನಮ್ಮ ಜೀವನ. ಇಲ್ಲಿರುವುದಕ್ಕೆ ನಮಗೆ ಬಹಳ ಸಂತೋಷವಿದೆ. ಇಲ್ಲಿನ ಕೃಷಿ ನಮಗೆ ಹೊಸದು. ಆದರೆ, ಕೃಷಿ ನಮಗೆ ಹೊಸದಲ್ಲ. ನಮ್ಮ ತಂದೆ ರೈತರು. ಹ್ಯಾರಿಸ್ ನಮ್ಮ ತಂದೆಯಂತಿದ್ದು, ಅವರ ಬೆಂಬಲದಿಂದ ಕೃಷಿ ಕಲಿಯುತ್ತಿದ್ದೇವೆಂದು ಬೊಗ್ಡಾನ್ ತಿಳಿಸಿದ್ದಾರೆ.

ಈ ಹಿಂದೆ ನಾವು ತಿರುವನಂತಪುರದಲ್ಲಿ ತಂಗಿದ್ದೆವು. ಆ ಸಮಯದಲ್ಲಿ ನಮ್ಮ ಬಗ್ಗೆ ತುಂಬಾ ಪ್ರೀತಿಯಿಂದ ವರ್ತಿಸುತ್ತಿದ್ದ ತಿರುವನಂತಪುರದ ರಾಜಮ್ ಮುತ್ತಸ್ಸಿಗೆ ನಾನು 'ನಮಸ್ಕಾರ' ಹೇಳಲು ಬಯಸುತ್ತೇನೆಂದು ಹೇಳಿದ್ದಾರೆ.

ಬೊಗ್ಡಾನ್ ಡ್ವೊರೊವಿ ಮತ್ತು ಅಲೆಕ್ಸಾಂಡ್ರಾ ಚೆಬ್ಬೊಟರೆವಾ ದಂಪತಿಗಳು ಎನ್ನೆರಡು ತಿಂಗಳುಕಾಲ ಹ್ಯಾರಿಸ್ ಅವರ ಜಮೀನಿನಲ್ಲಿ ಕೆಲಸ ನಿರ್ವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com