ದಕ್ಷಿಣ ಭಾರತದ ಕಲಾ ಸಂಪ್ರದಾಯಕ್ಕೆ ರಾಷ್ಟ್ರವ್ಯಾಪಿ ಛಾಪು: ಮಹಿಳೆಯರ ಸಬಲೀಕರಣಕ್ಕೆ ನೆರವಾಗುತ್ತಿದೆ ಗೊಂಬೆ ಅಲಂಕಾರ!

ಮಕ್ಕಳು ಆಟವಾಡುವಾಗ ಗೊಂಬೆ ಬಹುಮುಖ್ಯ ಆಟಿಕೆಯಾಗಿರುತ್ತದೆ. ಹೆಣ್ಣು ಮಕ್ಕಳಿಗೆ ಗೊಂಬೆಗಳೆಂದರೆ ಬಹಳ ಪ್ರೀತಿ. ಬಾಲ್ಯದಿಂದಲೇ ಆಕೆ ಗೊಂಬೆಗಳ ಮೂಲಕ ಜೀವನದ ಕನಸುಗಳನ್ನು ಕಾಣಲು ಆರಂಭಿಸುತ್ತಾಳೆ.
ವಿವಾಹ ಆಚರಣೆಗಳನ್ನು ಚಿತ್ರಿಸುವ ಗೊಂಬೆಗಳು.
ವಿವಾಹ ಆಚರಣೆಗಳನ್ನು ಚಿತ್ರಿಸುವ ಗೊಂಬೆಗಳು.

ಮಕ್ಕಳು ಆಟವಾಡುವಾಗ ಗೊಂಬೆ ಬಹುಮುಖ್ಯ ಆಟಿಕೆಯಾಗಿರುತ್ತದೆ. ಹೆಣ್ಣು ಮಕ್ಕಳಿಗೆ ಗೊಂಬೆಗಳೆಂದರೆ ಬಹಳ ಪ್ರೀತಿ. ಬಾಲ್ಯದಿಂದಲೇ ಆಕೆ ಗೊಂಬೆಗಳ ಮೂಲಕ ಜೀವನದ ಕನಸುಗಳನ್ನು ಕಾಣಲು ಆರಂಭಿಸುತ್ತಾಳೆ.

ಭಾರತದ ಸಂಸ್ಕೃತಿಯಲ್ಲಿ ಗೊಂಬೆಗಳಿಗೆ ಪ್ರಮುಖ ಸ್ಥಾನವಿದೆ. ಪ್ರಾಚೀನ ಕಾಲದಲ್ಲಿಯೇ ಭಾರತೀಯರು ಒಂದು ಉನ್ನತ ಸಂಸ್ಕೃತಿಯನ್ನು ಬೆಳೆಸಿಕೊಂಡು ಕಲಾಪೂರ್ಣವಾದ ಜೀವನವನ್ನು ನಡೆಸಿದರೆಂಬುದಕ್ಕೆ ಉತ್ತಮ ನಿದರ್ಶನಗಳಿವೆ. ಊಹಿಸಲೂ ಆಗದಂಥ ಅದ್ಭುತ ಕಲೆಗಾರಿಕೆಯನ್ನು ಭಾರತೀಯರು ಈ ಗೊಂಬೆಗಳಲ್ಲಿ ತೋರಿಸಿಕೊಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ  ಗೊಂಬೆಗಳನ್ನು ವಿವಾಹಗಳ ಸಂದರ್ಭಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಬಳಕೆ ಮಾಡುವುದುಂಟು. ಆದರೆ, ಇಂದು ದಕ್ಷಿಣ ಭಾರತದ ಗೊಂಬೆಗಳ ಸಂಪ್ರದಾಯ ರಾಷ್ಟ್ರವ್ಯಾಪಿ ಹರಡಿದೆ. ಇಲ್ಲಿನ ಗೊಂಬೆಗಳಿಗೆ ಬೇಡಕೆಗಳು ಹೆಚ್ಚಾಗತೊಡಗಿವೆ.

ದೇಶದ ಇತರೆ ಭಾಗಗಳಲ್ಲಿರುವ ಜನರು ಕೂಡ ತಮ್ಮ ಸಾಂಪ್ರದಾಯಿಕ ಆಚರಣೆಗಳ ವೇಳೆ ಗೊಂಬೆಗಳನ್ನು ಬಳಕೆ ಮಾಡಲು ಆರಂಭಿಸಿದ್ದಾರೆ.

ಮದುವೆ ಸಂದರ್ಭದಲ್ಲಿ ತಾಯಿ ಮನೆ ನೆನಪಿಗಾಗಿ ಮರದ ಗೊಂಬೆಗಳನ್ನು ಹೆಣ್ಣುಮಕ್ಕಳ ಕೈಗೆ ನೀಡಲಾಗುತ್ತದೆ. ಕಾಲ ಕಳೆಯುತ್ತಿದ್ದಂತೆ ಇಂದು ಈ ಗೊಂಬೆಗಳನ್ನು ಅಲಂಕಾರಕ್ಕೆ ಹಾಗೂ ಕಾರ್ಯಕ್ರಮಕ್ಕೆ ಬರುವ ಅತಿಥಿಗಳ ಸಂತೋಷ ಪಡಿಸಲು ಪ್ರದರ್ಶನಕ್ಕಿಡಲು, ಉಡುಗೊರೆಯಾಗಿ ನೀಡಲು ಬಳಸಲಾಗುತ್ತಿದೆ.

<strong>ದಿವ್ಯಾ ತೇಜಸ್ವಿ</strong>
ದಿವ್ಯಾ ತೇಜಸ್ವಿ

ದಿವ್ಯಾ ತೇಜಸ್ವಿಯವರು ಆಧುನಿಕ ಕಲೆಯೊಂದಿಗೆ ಗೊಂಬೆಗಳನ್ನು ಸಿದ್ಧಪಡಿಸುತ್ತಿದ್ದು, ಈ ಗೊಂಬೆಗಳಿಗೆ ಸಾಕಷ್ಟು ಬೇಡಿಕೆಗಳು ಬರುತ್ತಿವೆ. ದಿವ್ಯಾ ಅವರು ತಯಾರಿಸಿದ ಗೊಂಬೆಗಳನ್ನು ಅತಿಥಿಗಳಿಗೆ ಉಡುಗೊರೆಯಾಗಿ ನೀಡಲು, ಮದುವೆ ಮನೆಗಳಲ್ಲಿ ಪ್ರದರ್ಶನಕ್ಕೆ ಇಡಲು ಬಳಸಲಾಗುತ್ತಿದೆ. ತಾವು ತಯಾರಿಸುತ್ತಿರುವ ಗೊಂಬೆಗಳಿಗೆ ದಿವ್ಯಾ ಅವರು ತಮ್ಮ ತಾಯಿ ಲಲಿತಾ (ಲಲಿತಾ ಡಾಲ್ಸ್) ಅವರ ಹೆಸರನ್ನು ಇಟ್ಟಿದ್ದಾರೆ. ಏಕೆಂದರೆ, ದಿವ್ಯಾ ಅವರಿಗೆ ಈ ಕಲೆ ಬಂದಿದ್ದು ಅವರ ತಾಯಿ ಲಲಿತಾ ಅವರಿಂದಲೇ.

ಬೆಂಗಳೂರಿನ ಶಾಲೆಯೊಂದರಲ್ಲಿ ಜೀವಶಾಸ್ತ್ರ ಶಿಕ್ಷಕಿಯಾಗಿದ್ದ ಲಲಿತಾ ಅವರು, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ತಮ್ಮ ಕೆಲಸವನ್ನು ಕಳೆದುಕೊಂಡರು, ಈ ಸಂದರ್ಭದಲ್ಲಿಯೇ ಲಲಿತಾ ಅವರ ನಿಜವಾದ ಕಲೆ ಹೊರಬಂದಿತ್ತು.

ಮನೆಯಲ್ಲಿ ಸುಮ್ಮನೆ ಕುಳಿತಿದ್ದ ಲಲಿತಾ ಅವರು, ಪುತ್ರಿ ದಿವ್ಯಾ ತೇಜಸ್ವಿ ಅವರ ಗೊಂಬೆಯನ್ನು ಅಲಂಕರಿಸಲು ಶುರು ಮಾಡಿದ್ದರು. ನಂತರ ಇದರ ಫೋಟೋವನ್ನು ದಿವ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೂಡಲೇ ಇದಕ್ಕೆ ಉತ್ತಮ ಪ್ರತಿಕ್ರಿಯೆ ಬರಲು ಆರಂಭವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ 20 ಗೊಂಬೆಗಳಿಗೆ ಆರ್ಡರ್ ಬಂದಿದೆ.

ನಂತದ ದಿನಗಳಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಾಗತೊಡಗಿದೆ. ಗ್ರಾಹಕರ ಬೇಡಿಕೆಯ ಮೇರೆಗೆ, ಅವರ ಬಯಸುವಂತೆ ವಿನ್ಯಾಸಗೊಳಿಸಲು ಪ್ರಾರಂಭಿಸಿದ್ದೆವು. ಕಸ್ಟಮೈಸ್ ಗೊಂಬೆಗಳನ್ನು ಎಲ್ಲರೂ ಸಿದ್ಧಪಡಿಸುವುದಿಲ್ಲ. ಆದರೆ, ನಾವು ಮಾಡಲು ಆರಂಭಿಸಿದ್ದೆವು ಎಂದು ದಿವ್ಯಾ ಅವರು ಹೇಳಿದ್ದಾರೆ.

ಆರಂಭದಲ್ಲಿ ತಾಯಿ ಹಾಗೂ ಮಗಳು ಇಬ್ಬರೇ ಸೇರಿಕೊಂಡು ಗೊಂಬೆಗಳನ್ನು ತಯಾರಿಸುತ್ತಿದ್ದರು. ಆದರೀಗ ದೊಡ್ಡ ಉದ್ಯಮವಾಗಿ ಬೆಳೆಯ ತೊಡಗಿದೆ. ಲಲಿತಾ ಹಾಗೂ ದಿವ್ಯ ಅವರು ಇಂದು ಅನೇಕರಿಗೆ ಪ್ರೇರಣೆಯಾಗಿದ್ದಾರೆ. ಹಲವರ ಉನ್ನತೀಕರಣಕ್ಕೆ ಕಾರಣಕರ್ತರಾಗಿದ್ದಾರೆ. ಕೆಲವರನ್ನು ಗುತ್ತಿಗೆ ಮೇರೆಗೆ ಹಾಗೂ ಖಾಯಂ ಆಗಿ ಕೆಲಸಕ್ಕೆ ತೆಗೆದುಕೊಂಡಿದ್ದಾರೆ.

ನಾವು ಗೊಂಬೆಗಳನ್ನು ಕೇವಲ ಪ್ಲಾಸ್ಟಿಕ್, ಸಿಂಥೆಟಿಕ್ ವಸ್ತುಗಳಿಂದ ಮಾಡದೆ, ಉಣ್ಣೆ ಮತ್ತು ದಾರದಂತಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಸಿದ್ಧಪಡಿಸುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಇವುಗಳಿಗೆ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ ಗೊಂಬೆಗಳನ್ನು ಮದುವೆ ಸಮಾರಂಭಗಳಷ್ಟೇ ಅಲ್ಲದೆ, ಸೀಮಂತ ಶಾಸ್ತ್ರ, ನಾಮಕರಣ ಹಾಗೂ ಬರ್ತ್ ಡೇ ಪಾರ್ಟಿಗಳಲ್ಲಿಯೂ ಬಳಸುತ್ತಿದ್ದಾರೆಂದು ದಿವ್ಯಾ ಅವರು ತಿಳಿಸಿದ್ದಾರೆ.

ಹೆಣೆದ ಗೊಂಬೆ
ದಿವ್ಯಾ ಅವರಂತೆಯೇ ಪರಿಸರ ಸ್ನೇಹಿ ಗೊಂಬೆಗಳನ್ನು ತಯಾರಿಸುವ ಮತ್ತೊಬ್ಬ ಕಲಾವಿದರಿದ್ದಾರೆ. 68ರ ಹರೆಯದ ಕೆ.ಎಸ್.ನಾಗಮಣಿ ಅವರಿಗೆ ಹೆಣೆದ ಗೊಂಬೆಗಳ ವೃತ್ತಿ ಅವರ ಬದುಕಿನ ಮಾರ್ಗವಾಗಿದೆ.

ನಾಗಮಣಿ ಚಿಕ್ಕಂದಿನಿಂದಲೂ ಹೆಣಿಗೆ ಕೆಲಸ ಮಾಡುತ್ತಿದ್ದು, ದಸರಾ ಸೇರಿದಂತೆ ಇತರೆ ಹಬ್ಬ ಹರಿದಿನಗಳಲ್ಲಿ ಹಲವು ಗೊಂಬೆಗಳನ್ನು ಏಕಾಂಗಿಯಾಗಿ ಸಿದ್ಧಪಡಿಸುತ್ತಾರೆ.

<strong>ನಾಗಮಣಿ</strong>
ನಾಗಮಣಿ

ಈ ಗೊಂಬೆಗಳು ಮದುವೆಯ ಅಲಂಕಾರಗಳಲ್ಲಿ ಹೆಚ್ಚು ಜನಪ್ರಿಯವಾಗಿಲ್ಲದಿದ್ದರೂ, ಜನರು ಅವುಗಳನ್ನು ಇಷ್ಟಪಟ್ಟು ಖರೀದಿ ಮಾಡುತ್ತಾರೆ.

ನಾಗಮಣಿ ಅವರ ಮಗಳು ರೂಪಾ ಅವರು ಮಾತನಾಡಿ, ತಾಯಿ ಹಲವು ವರ್ಷಗಳಿಂದಲೂ ಗೊಂಬೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇದು ಅವರಿಗೆ ಹವ್ಯಾಸವಾಗಿದೆ. ನಾವು ಅವರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಮೊದಲು ಅವರು ಟೇಬಲ್ ಕವರ್, ಗೋಡೆಯ ಹ್ಯಾಂಗಿಂಗ್ ಗಳು, ಮನೆಯ ಸೌಂದರ್ಯ ಹೆಚ್ಚಿಸುವ ವಸ್ತುಗಳನ್ನು ಸಿದ್ಧಪಡಿಸುತ್ತಿದ್ದರು. ತಮ್ಮ ಕಲೆಯನ್ನು ವ್ಯಾಪಾರಕ್ಕೆ ಬಳಸಿಕೊಳ್ಳಲು ನನ್ನ ತಾಯಿಗೆ ಮೊದಲು ಇಷ್ಟವಿರಲಿಲ್ಲ. ನಂತರ ಗೊಂಬೆಗಳನ್ನು ಹೆಣೆಯಲು ಶುರು ಮಾಡಿದ ಬಳಿಕ ಮನಸ್ಸು ಮಾಡಿದ್ದರು. ಅತ್ಯಂತ ಕಡಿಮೆ ಸಮಯದಲ್ಲಿ ಹಲವು ಗೊಂಬೆಗಳನ್ನು ಸಿದ್ಧಪಡಿಸುತ್ತಿದ್ದರು ಎಂದು ಹೇಳಿದ್ದಾರೆ.

ಹೊಳೆನರಸೀಪುರ ತಾಲೂಕಿನ ಕಟ್ಟೆಹೊಸಹಳ್ಳಿಯ ನಾಗಮಣಿ ಅವರು ಮದುವೆಯ ನಂತರ ತಮ್ಮ ಕಲೆಗೆ ಹೆಚ್ಚು ಗಮನ ಕೊಡಲು ಆರಂಭಿಸಿದ್ದರು. ದಸರಾ ಸಂದರ್ಭದಲ್ಲಿ ತಾವು ಹೆಣೆದ ಗೊಂಬೆಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಇದು ಹಲವರ ಗಮನ ಸೆಳೆದಿತ್ತು. ಆಕೆಯ ಸಾಮರ್ಥ್ಯ ನನಗೆ ಆಗಲೇ ತಿಳಿದಿದ್ದು. ಈ ವಯಸ್ಸಿನಲ್ಲೂ ಎಲ್ಲವನ್ನೂ ಸ್ವಂತವಾಗಿ ತಾವಾಗಿಯೇ ಮಾಡಬೇಕೆಂದು ಬಯಸುತ್ತಾರೆ. ಇದು ನಮಗೆ ಹೆಮ್ಮೆ ಎನಿಸುತ್ತದೆ ಎಂದು ರೂಪಾ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com