ಪಟಾಕಿ ಅಂಗಡಿಗಳಿಗಾಗಿ ಎಸ್ಒಪಿಗಳ ಮರು ರೂಪಿಸಲಾಗುತ್ತಿದೆ: ಡಿಜಿಪಿ ಕಮಲ್ ಪಂತ್ (ಸಂದರ್ಶನ)

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸಾಲು ಸಾಲು ದುರಂತಗಳು ಸಂಭವಿಸುತ್ತಿದ್ದು, ಈ ಹಿನ್ನೆಲೆ ಇದೀಗ ಬೆಂಕಿ ಅವಘಡಗಳಿಗೆ ಬ್ರೇಕ್ ಹಾಕಲು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕ ಕಮಲ್ ಅವರು ಮುಂದಾಗಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕ, ಕಮಲ್ ಪಂತ್
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕ, ಕಮಲ್ ಪಂತ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸಾಲು ಸಾಲು ದುರಂತಗಳು ಸಂಭವಿಸುತ್ತಿದ್ದು, ಈ ಹಿನ್ನೆಲೆ ಇದೀಗ ಬೆಂಕಿ ಅವಘಡಗಳಿಗೆ ಬ್ರೇಕ್ ಹಾಕಲು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕ ಕಮಲ್ ಅವರು ಮುಂದಾಗಿದ್ದಾರೆ.

ಈ ನಿಟ್ಟಿನಲ್ಲಿ ತಾವು ಕೈಗೊಂಡ ಕ್ರಮಗಳ ಕುರಿತು ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್‌ ನಡೆಸಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಕೋರಮಂಗಲ ಅಗ್ನಿ ಅವಘಡ ಬಳಿಕ ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ನಿಮ್ಮ ದೃಷ್ಟಿಕೋನವೇನು?
ಕೋರಮಂಗಲದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಕಟ್ಟಡದ ಆವರಣದಲ್ಲಿ 12ಕ್ಕೂ ಹೆಚ್ಚು ವಾಣಿಜ್ಯ ಸಿಲಿಂಡರ್ ಗಳನ್ನು ಸಂಗ್ರಹಿಸಿದ್ದರು. ಅದರಲ್ಲಿ ಒಂದು ಸಿಲಿಂಡರ್ ಸೋರಿಕೆಯಾಗಿ ಸ್ಫೋಟ ಸಂಭವಿಸಿತ್ತು. ಘಟನೆ ಬಳಿಕ ಎತ್ತರದ ಕಟ್ಟಡಗಳಿಗೆ ಅಗ್ನಿ ಸುರಕ್ಷತೆ ಕುರಿತು ಇದ್ದ ಮಾನದಂಡಗಳು ಈಗ ಬದಲಿಸಲಾಗಿದೆ. ಈ ಹಿಂದೆ 15 ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಎತ್ತರದ ಎಲ್ಲಾ ಕಟ್ಟಡಗಳಿಗೆ ಅನುಮತಿ ಪಡೆಯಬೇಕಾಗಿತ್ತು. ಈಗ ಅದನ್ನು 21 ಮೀಟರ್‌ಗೆ ಹೆಚ್ಚಿಸಲಾಗಿದೆ.

ಸುರಕ್ಷತಾ ಕ್ರಮಗಳಿಲ್ಲದೆ ಇತರೆ ರೆಸ್ಟೋರೆಂಟ್‌ಗಳು ಕಾರ್ಯನಿರ್ವಹಿಸುತ್ತಿರುವುದಾದರೂ ಹೇಗೆ?
ನಗರದ ಹಲವಾರು ರೆಸ್ಟೋರೆಂಟ್‌ಗಳು ಹಲವು ಅಗ್ನಿ ಸುರಕ್ಷತಾ ಕ್ರಮಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ, ಈ ಕಟ್ಟಡಗಳು 21-ಮೀಟರ್ ವಿನಾಯಿತಿ ಅಡಿಯಲ್ಲಿ ಬರುತ್ತವೆ. ರೂಫ್-ಟಾಪ್ ರೆಸ್ಟೋರೆಂಟ್‌ಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಅನುಮತಿಯನ್ನು ಪಡೆಯುವ ಅಗತ್ಯವಿದೆ.

ಎತ್ತರವನ್ನು ಲೆಕ್ಕಿಸದೆ ಎಲ್ಲಾ ಕಟ್ಟಡಗಳಿಗೆ ಫೈರ್ ಕ್ಲಿಯರೆನ್ಸ್ ಕಡ್ಡಾಯವಾಗಿರಬೇಕೇ?
ಕಟ್ಟಡದ ಎತ್ತರ ಮತ್ತು ಇತರವುಗಳನ್ನು ಒಳಗೊಂಡಂತೆ ವಿವಿಧ ಕೈಗಾರಿಕೆಗಳು ವಿಭಿನ್ನ ನಿಯಂತ್ರಕ ಮಾನದಂಡಗಳಿಗೆ ಒಳಪಟ್ಟಿರುತ್ತವೆ. ವಾಣಿಜ್ಯ ಕಟ್ಟಡಗಳಿಗೆ, ಪ್ರಸ್ತುತ ಮಾನದಂಡವು 21 ಮೀಟರ್ ಆಗಿದೆ. ನಗರದಲ್ಲಿ ಬಹುಮಹಡಿ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಎಲ್ಲಾ ಕಟ್ಟಡಗಳ ಮೇಲ್ವಿಚಾರಣೆ ಮಾಡುವುದು ಸವಾಲಿನ ಸಂಗತಿಯಾಗಿದೆ. ಪ್ರತಿಯೊಂದು ಇಲಾಖೆಯು ತನ್ನದೇ ಆದ ನಿರ್ಬಂಧಗಳು ಮತ್ತು ಮಿತಿಗಳನ್ನು ಹೊಂದಿದೆ. ಆದಾಗ್ಯೂ, ಜೀವ ಮತ್ತು ಆಸ್ತಿಯ ಸುರಕ್ಷತೆಯು ಪ್ರಮುಖವಾದದ್ದು. ಯಾವುದೇ ಕಟ್ಟಡದಲ್ಲಿ ಸುರಕ್ಷತಾ ದೋಷ ಅಥವಾ ನ್ಯೂನತೆಗಳು ಕಂಡು ಬಂದರೆ, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ.

ವಸತಿ ಪ್ರದೇಶಗಳಲ್ಲಿ LPG ಗೋದಾಮುಗಳು ಕಾರ್ಯನಿರ್ವಹಣೆಗೆ ಅನುಮತಿ ಇದೆಯೇ?
ಖಂಡಿತವಾಗಿಯೂ ಇಲ್ಲ,  LPG ಸಿಲಿಂಡರ್‌ಗಳನ್ನು ಸಂಗ್ರಹಿಸಲು ಹಲವು ಸಂಸ್ಥೆಗಳು, ಇಲಾಖೆಗಳಿಂದ ಅನುಮತಿ, ಪರವಾನಗಿಯ ಅಗತ್ಯವಿರುತ್ತದೆ. ಇಂತಹ ಘಟನೆಗಳು ನಡೆದಾಗ ಇಲಾಖೆಗಳು ಪರಿಶೀಲನೆ ನಡೆಸುತ್ತವೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಇಂತಹ ಹಲವಾರು ಘಟನೆಗಳು ನಡೆದರೂ ಅಗ್ನಿ ಸುರಕ್ಷತೆ ಬಗೆಗಿನ ಧೋರಣೆಗಳೇಕೆ ಬದಲಾಗುತ್ತಿಲ್ಲ?
ಅಧಿಕಾರಿಗಳಿಗೆ ತಮ್ಮ ಆದ ಜವಾಬ್ದಾರಿ ಮತ್ತು ಕರ್ತವ್ಯಗಳಿರುತ್ತವೆ. ಜನರೂ ಕೂಡ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸುರಕ್ಷತಾ ಕ್ರಮಗಳ ವಿಚಾರ ಬಂದಾಗ ಪ್ರತಿಯೊಂದು ಇಲಾಖೆಯು ತನ್ನದೇ ಆದ ನಿರ್ಬಂಧಗಳೊಂದಿಗೆ ಕಾರ್ಯನಿರ್ವಹಿಸುತ್ತವೆ. ಆದರೂ ಜನರು ಜಾಗರೂಕರಾಗಿರಬೇಕು.

ನಗರದಲ್ಲಿರುವ ಎಷ್ಟು ಫುಡ್ ಕೋರ್ಟ್ ಗಳು ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿವೆ?
21 ಮೀಟರ್ ಗಿಂತ ಕಡಿಮೆ ಎತ್ತರವಿದ್ದರೂ, ಅನೇಕ ಕಟ್ಟಡಗಳು ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿವೆ. ಈ ಕ್ರಮಗಳು ಜನರ ಸುರಕ್ಷತೆಯನ್ನು ಹೆಚ್ಚಿಸುವುದಲ್ಲದೆ, ಹೂಡಿಕೆಯ ಅವಕಾಶವನ್ನು ಸುಲಭಗೊಳಿಸುತ್ತದೆ.

ಅಗ್ನಿಶಾಮಕ ಇಲಾಖೆಯಲ್ಲಿನ ಸೇವೆಗಳ ಗುಣಮಟ್ಟವನ್ನು ಸುಧಾರಿಸುವಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರವೇನು?
ಉತ್ತಮ ಸಂಚಾರಕ್ಕಾಗಿ ಪೊಲೀಸ್ ಇಲಾಖೆಯು ಹೊಯ್ಸಳಗಳಿಗೆ ಜಿಪಿಎಸ್ ಅಳವಡಿಸಿರುವಂತೆ, ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಬಳಕೆಯೊಂದಿಗೆ ಅಗ್ನಿಶಾಮಕ ನಿಯಂತ್ರಣ ವ್ಯವಸ್ಥೆಯನ್ನು ಆಧುನೀಕರಿಸಲು ಮತ್ತು ಬಲಪಡಿಸಲು ಚಿಂತನೆ ನಡೆಸಲಾಗಿದೆ. ಅಗ್ನಿಶಾಮಕ ದಳದ ವಾಹನಗಳಿಗೂ ಅಂತಹ ಡಿವೈಸ್ ಗಳನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ. ಅಗ್ನಿಶಾಮಕ ನಿರ್ವಹಣಾ ಸಿಬ್ಬಂದಿ ಟ್ರಾಫಿಕ್ ಕಂಟ್ರೋಲ್ ರೂಮ್‌ನಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಈ ಸಿಬ್ಬಂದಿಗಳು ತುರ್ತು ಸಂದರ್ಭಗಳಲ್ಲಿ ನೆರವು ನೀಡುತ್ತಿದ್ದಾರೆ.

ನಗರದಲ್ಲಿ ನೀರಿನ ಕೊರತೆ ಎದುರಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ನೀರು ಪೂರೈಕೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆಯೇ?
ನಮ್ಮ ಇಲಾಖೆಯು ರಾಜ್ಯ ಮತ್ತು ನಗರ ನೀರು ಸರಬರಾಜು ಮಂಡಳಿಗಳಿಂದ ಅನಿಯಮಿತ ನೀರಿನ ಪೂರೈಕೆಯನ್ನು ಹೊಂದಿದೆ. ಬೇಸಿಗೆಯಲ್ಲಿ ಅಗ್ನಿ ಅವಘಡ ಘಟನೆಗಳು ಹೆಚ್ಚಾಗುತ್ತವೆ. ಆದರೆ ನಮ್ಮ ಅಗ್ನಿಶಾಮಕ ದಳದ ಸಿಬ್ಬಂದಿ ಯಾವಾಗಲೂ ಎಚ್ಚರವಾಗಿರುತ್ತಾರೆ. ಮಳೆಗಾಲದಲ್ಲಿಯೂ ಕೂಡ ರಕ್ಷಣಾ ಕಾರ್ಯಾಚರಣೆಗಳಿಗೆ ತೆರಳುತ್ತಾರೆ. ಹಳೆಯ ವಾಹನಗಳನ್ನು ಬದಲಿಸುತ್ತಲೇ ಇರುತ್ತೇವೆ. ನಮ್ಮಲ್ಲಿ ಸಾಕಷ್ಟು ವಾಹನಗಳಿವೆ.

ಅಗ್ನಿಶಾಮಕ ಇಲಾಖೆಗೆ ಸೇರಲು ಜನರು ಯಾವ ರೀತಿಯ ತರಬೇತಿಯನ್ನು ನೀಡಲಾಗುತ್ತದೆ?
ಅಗ್ನಿಅವಘಡ ಪ್ರಕಾರಗಳನ್ನು ಅಗ್ನಿಶಾಮಕ ಇಲಾಖೆಯ ಎಲ್ಲಾ ಅಧಿಕಾರಿಗಳು ಅರ್ಥಮಾಡಿಕೊಳ್ಳುತ್ತಾರೆ. ಇಲ್ಲಿನ ಸಿಬ್ಬಂದಿಗಳು ವಿಜ್ಞಾನದಲ್ಲಿ ಪದವೀಧರರಾಗಿದ್ದು, ರಸಾಯನಶಾಸ್ತ್ರ ಇವರ ಅಧ್ಯಯನದಲ್ಲಿ ಪ್ರಮುಖ ವಿಷಯಗಳಲ್ಲಿ ಒಂದಾಗಿರುತ್ತದೆ. ಪ್ರತಿಯೊಬ್ಬ ಅಧಿಕಾರಿಯು ನಾಗ್ಪುರದ ರಾಷ್ಟ್ರೀಯ ಅಗ್ನಿಶಾಮಕ ಸೇವಾ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಾರೆ. ಎಲ್ಲಾ ಹಿರಿಯ ಅಧಿಕಾರಿಗಳು ಲಂಡನ್‌ನಲ್ಲಿ ಒಂದೂವರೆ ತಿಂಗಳ ತರಬೇತಿಯನ್ನು ಪಡೆದುಕೊಳ್ಳುತ್ತಾರೆ. ಕಿರಿಯ ಅಧಿಕಾರಿಗಳಿಗೂ ಕೂಡ ತರಬೇತಿ ನೀಡಲಾಗುತ್ತದೆ. ಇವರಿಗೆ ಬಹು ಅಂಶಗಳ ಮೂಲಕ ಪರೀಕ್ಷೆಗೊಳಪಡಿಸಲಾಗುತ್ತದೆ.

ಸಿಬ್ಬಂದಿಗಳ ಹೆವಿ ಫೈರ್ ರೆಸಿಸ್ಟಂಟ್ ಸೂಟ್ ಗಳು ಇವೆಯೇ?
ಕಾರ್ಯಾಚರಣೆ ವೇಳೆ ಸಿಬ್ಬಂದಿಗಳು ಇವುಗಳನ್ನು ಧರಿಸುತ್ತಾರೆ. ಈ ಸೂಟ್ ಗಳನ್ನು ತುಂಬಾ ಭಾರವಾದ ವಸ್ತುಗಳಿಂದ ಮಾಡಲಾಗಿರುತ್ತದೆ. ಹೀಗಾಗಿ ಇಡೀ ದಿನ ಇವುಗಳನ್ನು ಧರಿಸಲು ಕಷ್ಟಕರವಾಗಿರುತ್ತದೆ. ಬೆಂಕಿ ನಂದಿಸುವ ವೇಳೆ ಒಳಗೆ ಪ್ರವೇಶಿಸಲು ಬೇರೆ ಮಾರ್ಗಗಳು ಕಂಡು ಬಾರದಿದ್ದರೆ, ಗೋಡೆಯನ್ನ ಒಡೆದು ಒಳಗೆ ಹೋಗುವ ತಂತ್ರಗಳು ಕೂಡ ಇವರಿಗೆ ತಿಳಿದಿರುತ್ತದೆ.

ಸಣ್ಣ ಅಂಗಡಿಗಳು ಅಥವಾ ಜನನಿಬಿಡ ಪ್ರದೇಶಗಳಲ್ಲಿ ಅಗ್ನಿ ಸುರಕ್ಷತಾ ನಿಬಂಧನೆಗಳನ್ನು ಅನುಸರಿಸುವುದು ಕಡ್ಡಾಯವೇ?
ಈ ರೀತಿಯ ಯಾವುದೇ ಆದೇಶಗಳಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ನಿಯಮ ಅನುಸರಿಸುವಂತೆ ಸೂಚಿಸಲಾಗಿದೆ. ಒಂದು ಅಂಗಡಿ ಸ್ಥಾಪಿಸಬೇಕಾದರೆ ಬಂಡವಾಳದ ಅಗತ್ಯತೆ ಹೆಚ್ಚಾಗಿರುತ್ತದೆ. ಇಷ್ಟು ಬಂಡವಾಳ ಹೂಡಿದ ವ್ಯಕ್ತಿ ಸುರಕ್ಷತೆ ಬಗ್ಗೆ ಖಂಡಿತವಾಗಿಯೂ ಯೋಚನೆ ಮಾಡುತ್ತಾನೆ. ಇಂದು ಸಣ್ಣ ಅಂಗಡಿಗಳಲ್ಲೂ ಅಗ್ನಿಶಾಮಕ ಸುರಕ್ಷತಾ ಸಾಧನಗಳಿರುವುದನ್ನು ನಾವು ನೋಡುತ್ತಿದ್ದೇವೆ.

ನಗರದಲ್ಲಿ ಹೆಚ್ಚಿನ ಅಗ್ನಿಶಾಮಕ ದಳ ಠಾಣೆಗಳ ಅಗತ್ಯವಿದೆಯೇ?
ಪ್ರಸ್ತುತ ನಗರದಲ್ಲಿ 20 ಠಾಣೆಗಳಿವೆ. ಪ್ರಸ್ತುತ ಈ ಠಾಣೆಗಳು ಸಾಕಾಗುತ್ತದೆ. ಹೊಸ ಪ್ರದೇಶಗಳೊಂದಿಗೆ ನಗರ ಹೆಚ್ಚು ಬೆಳೆದಂತೆ ಅಗತ್ಯಗಳು ಬರಬಹುದು. ಈ ಅಗತ್ಯತೆಗಳ ಪೂರೈಸಲು ಕೆಲವು ಖಾಸಗಿ ಸಂಸ್ಥೆಗಳೂ ಅಸ್ತಿತ್ವದಲ್ಲಿವೆ. ಈ ಸಂಸ್ಥೆಗಳು ಇಲಾಖೆಗೆ ಸಹಾಯ ಮಾಡುತ್ತದೆ.

ಪಟಾಕಿ ಅಂಗಡಿಗಳ ಕುರಿತು ಯಾವ ರೀತಿಯ ನಿರ್ಧಾರ ಕೈಗೊಂಡಿದ್ದೀರಿ?
ಪ್ರಮುಖ ಬದಲಾವಣೆಗಳಾಗಲಿವೆ. ಗೃಹ ಸಚಿವರು ಸಭೆ ನಡೆಸಿದ್ದಾರೆ. ಪಟಾಕಿ ಅಂಗಡಿಗಳಿಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ) ಮರು ರೂಪಿಸಲಾಗುತ್ತಿದೆ. ಈ ಎಸ್‌ಒಪಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಅತ್ತಿಬೆಲೆ ಸುತ್ತಲೂ ಸಗಟು ಮಾರುಕಟ್ಟೆಗಳಿವೆ. ಕೆಲವು ನಿಬಂದನೆಗಳೊಂದಿಗೆ ವ್ಯವಹಾರಗಲನ್ನು ನಡೆಸುತ್ತಿದ್ದಾರೆ. ಹೀಗಾಗಿ ಸರ್ಕಾರ ಕಠಿಣ ಕ್ರಮಗಳೊಂದಿಗೆ, ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ. ಅಗತ್ಯಕ್ಕೆ ತಕ್ಕಂತೆ ನಿಯಮಗಳನ್ನು ಬದಲಿಸಲಾಗುತ್ತಿದೆ. ದೀಪಾವಳಿಗೂ ಮುನ್ನ ಹೊಸ ನಿಯಮಗಳು ಜಾರಿಗೆ ಬರಲಿವೆ.

ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದಾಗ ನೀವು ನಗರ ಪೊಲೀಸ್ ಆಯುಕ್ತರಾಗಿದ್ದಿರಿ. ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದ್ದೀರಿ?
ಇಂತಹ ಪರಿಸ್ಥಿತಿಯನ್ನು ಈ ಮೊದಲೂ ನೋಡಿದ್ದೆ. ಆದರೆ, ಡಿಜೆ ಹಳ್ಳಿಯಲ್ಲಿ ನಡೆದ ಘಟನೆ ಸಂಪೂರ್ಣ ವಿಭಿನ್ನವಾಗಿತ್ತು. ಕೋವಿಡ್ ನಿರ್ಬಂಧಗಳಿದ್ದ ಕಾರಣ ಶೇ.30ರಷ್ಟು ಸಿಬ್ಬಂದಿಗಳು ರಜೆಯಲ್ಲಿದ್ದರು. ಘಟನೆ ಬಳಿಕ ಕೂಡಲೇ ಸಿಬ್ಬಂದಿಗಳನ್ನು ಸಜ್ಜುಗೊಳಿಸಬೇಕಾಗಿ ಬಂದಿತ್ತು. ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಸ್ಥಳದಲ್ಲಿ ವಿದ್ಯುತ್ ಇರಲಿಲ್ಲ. ವಾಹನಕ್ಕೆ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಭಯಭೀತರಾಗಿ ಜನರು ದಿಕ್ಕಾಪಾಲಾಗಿ ಓಡುತ್ತಿದ್ದರು. ಠಾಣೆಯೊಳಗೆ 50-60 ಜನರು ಸಿಲುಕಿಕೊಂಡಿದ್ದರು. ಅವರ ಬಳಿಕೆ ನಾವು ಹೋಗಲೇ ಬೇಕಾಗಿತ್ತು. 4-5 ವಾಹನಗಳಿಗೂ ಬೆಂಕಿ ಹಚ್ಚಲಾಗಿತ್ತು. ಠಾಣೆ ಬಳಿಗೆ ಹೋಗಲು ಜನರು ನಮಗೆ ಸಹಾಯ ಮಾಡಿದರು. ಬಳಿಕ ನಾವು ನಿಧಾನಗತಿಯಲ್ಲಿ ನಮ್ಮ ಕರ್ತವ್ಯ ಮುಂದುವರೆಸಿದೆವು. 15 ನಿಮಿಷಗಳ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ತಂದೆವು. ಸ್ಥಳೀಯರು ಹಾಗೂ ಇತರೆ ನಾಯಕರು ನಮಗೆ ಸಹಾಯ ಮಾಡಿದರು.

ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಪೊಲೀಸರು ನಿರಂತರವಾಗಿ ಕರ್ತವ್ಯದಲ್ಲಿ ಸಕ್ರಿಯರಾಗಿರುತ್ತಾರೆ. ಅಗ್ನಿಶಾಮಕ ದಳದ ಕಾರ್ಯವೈಖರಿಯೇ ಬೇರೆ. ಸಿಬ್ಬಂದಿಗಳನ್ನು ಯಾವ ರೀತಿ ಪ್ರೇರೇಪಿಸುತ್ತೀರಿ?
ಆಗುವುದಿಲ್ಲ ಎಂಬುದು ಏನೂ ಇಲ್ಲ. ಇತರರ ಗಮನ ಸೆಳೆಯದೆ ಅಗ್ನಿಶಾಮಕ ದಳದ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳ ರಕ್ಷಣೆಗಳಿಗೂ ನಮ್ಮ ಸಿಬ್ಬಂದಿ ಹೋಗುತ್ತಾರೆ. ಯಾವುದೇ ಜೀವ ಮತ್ತು ಆಸ್ತಿ ರಕ್ಷಣೆಗೆ ನಮ್ಮ ಸಿಬ್ಬಂದಿ ಹೋಗುತ್ತಾರೆ. ಒಬ್ಬರಿಗೆ ಸಹಾಯ ಮಾಡಲು 30-40 ಕಿಮೀ ಹೋಗಬೇಕಾದರೂ ನಮ್ಮ ಸಿಬ್ಬಂದಿ ಹಿಂಜರಿಯುವುದಿಲ್ಲ. ಯಾವುದೇ ದೂರವಾಣಿ ಕರೆಯನ್ನು ನಿರ್ಲಕ್ಷಿಸುವುದಿಲ್ಲ. ಯಾವಾಗಲೂ ಕರ್ತವ್ಯದಲ್ಲಿರುತ್ತಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಎಂದರೆ ಸೈನಿಕನಿದ್ದಂತೆ. ಸಲಕರಣೆಗಳ ನಿರ್ವಹಣೆ ಕೂಡ ಬಹಳ ಮುಖ್ಯವಾಗುತ್ತದೆ. ಏಕೆಂದರೆ, ಸಮಯಕ್ಕೆ ಸರಿಯಾಗಿ ಅದು ಕೆಲಸ ಮಾಡಿದ್ದರೆ, ಅವಘಡ ಮತ್ತಷ್ಟು ಹೆಚ್ಚಾಗುತ್ತದೆ. ಠಾಣೆಗಳಿಗೆ ತೆರಳಿ ವಾಹನಗಳ ಚಾಲನೆ ಮಾಡುವಂತೆ ಹೇಳಿದರೆ, ಕೂಡಲೇ ಚಾಲನೆ ಮಾಡುತ್ತಾರೆ. ಪಂಪ್ ಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸಬೇಕು.

ಸಿಬ್ಬಂದಿಗೆ ನೀಡಲಾಗುವ ಪ್ರೋತ್ಸಾಹ ಧನ ಯಾವ ರೀತಿ ಇರುತ್ತದೆ?
ಅಗ್ನಿಶಾಮಕ ಸಿಬ್ಬಂದಿಗೂ ಕಠಿಣ ಕರ್ತವ್ಯ ಭತ್ಯೆ ಅನ್ವಯಿಸುತ್ತದೆ. ಇತರ ಕೆಲವು ಪ್ರೋತ್ಸಾಹ ಧನಗಳು ನೀಡಲು ಸಾಧ್ಯವಾದರೆ, ಅದನ್ನು ನೀಡುತ್ತೇವೆ. ಮನೆ, ಆರೋಗ್ಯ ನಿಧಿಯಂತಹ ಇತರ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ. ಬೇರೆ ಯಾವುದೇ ಸಮಸ್ಯೆಗಳಿದ್ದರೆ ನಾವು ಅವರಿಗೆ ಸಹಾಯ ಮಾಡಲು ಮತ್ತು ಬೆಂಬಲಿಸಲು ಪ್ರಯತ್ನಿಸುತ್ತೇವೆ. ಅಗ್ನಿಶಾಮಕ ಸಿಬ್ಬಂದಿ ಪೊಲೀಸರಿಗೆ ಸಮಾನವಾದ ಪ್ರಯೋಜನಗಳನ್ನು ಪಡೆಯುತ್ತಾರೆ.

9/11 ಘಟನೆ ಸಿಬ್ಬಂದಿಗಲನ್ನು ಯಾವ ರೀತಿ ಪ್ರೇರೇಪಿಸಿತು? ಎಲ್ಲರೂ ಸ್ಥಳದಿಂದ ಓಡಿ ಹೋಗುತ್ತಿದ್ದರು. ಆದರೆ, ಅಗ್ನಿಶಾಮಕ ದಳದ ಸಿಬ್ಬಂದಿ ಮಾತ್ರ ಮುನ್ನುಗ್ಗುತ್ತಿದ್ದರು?
ಸೇನೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ವೃತ್ತಿ ಮತ್ತು ಸೇವೆ ಒಂದೇ ಆಗಿಸುತ್ತದೆ ಎಂಬುದು ಹೆಮ್ಮೆಯ ಸಂಗತಿ. ಅವಘಡ ಸಂಭವಿಸಿದಾಗ ಕಟ್ಟದ ಹೆಚ್ಚು ಕಾಲ ನಿಲ್ಲುವುದಿಲ್ಲ ಎಂದು ತಿಳಿದಿದ್ದರೂ ನಮ್ಮ ಸಿಬ್ಬಂದಿ ಜನರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಕೋರಮಂಗಲದ ಘಟನೆಯ ಸಂದರ್ಭದಲ್ಲೂ ಕಟ್ಟದ ರೂಮ್ ಗಳು ಕರಗುತ್ತಿದ್ದವು. ಆದರೆ, ನಮ್ಮ ಸಿಬ್ಬಂದಿ ತಮ್ಮ ಕರ್ತವ್ಯವವನ್ನು ಮುಂದುವರೆಸಿದ್ದರು.

ತುರ್ತು ಸಹಾಯವಾಣಿಹೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೇ?
ಈ ಮೊದಲ ನಮ್ಮಲ್ಲ 101 ಸಂಖ್ಯೆ ಇತ್ತು. ಗೃಹ ಸಚಿವಾಲಯದ ತುರ್ತು ಸಹಾಯವಾಣಿ ಸಂಖ್ಯೆ ಇದೀಗ 112 ಆಗಿದೆ. ನಾವು 100-101 ರಿಂದ 112ಗೆ ಬದಲಾಯಿಸಿದ್ದೇವೆ. ಕೆಲವು ಸಮಯಗಳ ಕಾಲ 100-101 ಕಾರ್ಯನಿರ್ವಹಿಸುತ್ತಿದ್ದವು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com