83 ವರ್ಷದ ನಟನಿಗೆ 29ರ ಪ್ರೇಯಸಿ: ಗರ್ಭಿಣಿ ಆದ ಬಳಿಕ ತಂದೆ ಯಾರೆಂದು ಕನ್ಫ್ಯೂಸ್, DNA ಪರೀಕ್ಷೆ ವೇಳೆ ಅಚ್ಚರಿ
ಹಾಲಿವುಡ್ನ ಖ್ಯಾತ ನಟ ಅಲ್ ಪಚಿನೋ ತಮ್ಮ 83ನೇ ವಯಸ್ಸಿನಲ್ಲಿ ತಮ್ಮ 29 ವರ್ಷದ ಪ್ರೇಯಸಿ ಜೊತೆ ತಂದೆಯಾಗುವ ಅವಕಾಶ ಪಡೆದಿದ್ದು, ಆದರೆ ಈ ಕಾರ್ಯದಿಂದ ಅವರಿಗೆ ಅಚ್ಚರಿಯೊಂದಿಗೆ ಗೊಂದಲವೂ ಕೂಡ ಆಗಿದೆ.
Published: 04th June 2023 10:17 PM | Last Updated: 17th August 2023 04:39 PM | A+A A-

ಅಲ್ ಪಚೀನೋ ಮತ್ತು ನೂರ್ ಅಲ್ಫಾಲ್ಲಾ
ಹಾಲಿವುಡ್ನ ಖ್ಯಾತ ನಟ ಅಲ್ ಪಚಿನೋ ತಮ್ಮ 83ನೇ ವಯಸ್ಸಿನಲ್ಲಿ ತಮ್ಮ 29 ವರ್ಷದ ಪ್ರೇಯಸಿ ಜೊತೆ ತಂದೆಯಾಗುವ ಅವಕಾಶ ಪಡೆದಿದ್ದು, ಆದರೆ ಈ ಕಾರ್ಯದಿಂದ ಅವರಿಗೆ ಅಚ್ಚರಿಯೊಂದಿಗೆ ಗೊಂದಲವೂ ಕೂಡ ಆಗಿದೆ.
ಹಾಲಿವುಡ್ನ ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ಅವರಿಗೆ ಈಗ 83 ವರ್ಷ ವಯಸ್ಸು. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಎಂಬ ಮಾತು ಅಲ್ ಪಚಿನೋ ಅವರಿಗೆ ಸೂಕ್ತವಾಗಿ ಹೊಂದಿಕೆ ಆಗುತ್ತದೆ. ಈ ಇಳಿ ವಯಸ್ಸಿನಲ್ಲೂ ಅವರು 29 ವರ್ಷದ ಪ್ರೇಯಸಿಯನ್ನು ಹೊಂದಿದ್ದಾರೆ. ಅವರ ಗರ್ಲ್ಫ್ರೆಂಡ್ ಹೆಸರು ನೂರ್ ಅಲ್ಫಾಲ್ಲಾ. ಅಚ್ಚರಿ ಎಂದರೆ ಅಲ್ ಪಚಿನೋ ಅವರ ಪ್ರೇಯಸಿ ನೂರ್ ಅಲ್ಫಾಲ್ಲಾ (Noor Alfallah) ವಯಸ್ಸು ಕೇವಲ 29 ವರ್ಷ! ಇವರಿಬ್ಬರ ನಡುವೆ ಪ್ರೀತಿ ಚಿಗುರಿದೆ.
ಈಗ ನೂರ್ ಅಲ್ಫಾಲ್ಲಾ ಪ್ರೆಗ್ನೆಂಟ್ (Pregnant) ಗರ್ಭಿಣಿಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಆದರೆ ‘ಅದಕ್ಕೆ ಕಾರಣ ನಾನಲ್ಲ’ ಅಂತ ಅಲ್ ಪಚಿನೋ ವಾದಿಸಿದ್ದಾರೆ. ಬಾಯ್ಫ್ರೆಂಡ್ನ ದುಗುಡ ಏನು ಎಂಬುದು 29ರ ಪ್ರಾಯದ ಸುಂದರಿ ನೂರ್ ಅಲ್ಫಾಲ್ಲಾ ಅವರಿಗೆ ಅರ್ಥವಾಗಿದ್ದು, ಅವರು ಡಿಎನ್ಎ ಟೆಸ್ಟ್ ಮಾಡಿಸಲು ಒಪ್ಪಿಕೊಂಡರು. ಮಾತ್ರವಲ್ಲದೇ ಡಿಎನ್ಎ ಟೆಸ್ಟ್ ಕೂಡ ಮಾಡಿಸಲಾಗಿದೆ. ಆದರೆ ಪರೀಕ್ಷಾ ವರದಿ ಮಾತ್ರ ಸ್ವತಃ ಅಲ್ ಪಚಿನೋಗೆ ಅಚ್ಚರಿ ತಂದಿದೆ.
ಪಚಿನೋ ಭಯವೇನು?
ನೂರ್ ಅಲ್ಫಾಲ್ಲಾ ಗರ್ಭಿಣಿ ಆಗಿದ್ದಕ್ಕೆ ತಾವು ಕಾರಣ ಅಲ್ಲ ಎಂಬುದು ಅವರ ಪಚಿನೋ ಅವರ ವಾದ. 83 ವರ್ಷ ವಯಸ್ಸಿನ ಪಚಿನೋಗೆ ಈ ವಯಸ್ಸಿನಲ್ಲಿ ತಮಗೆ ಮಕ್ಕಳಾಗುವುದಿಲ್ಲ ಎಂಬುದು ಪಚಿನೋ ಅವರ ಗಟ್ಟಿ ನಂಬಿಕೆ. ಇದೇ ಕಾರಣಕ್ಕೆ ಪ್ರೇಯಸಿ ಮೇಲೆ ಅವರಿಗೆ ಅನುಮಾನ ಬಂದಿದೆ. ಆಗಿದ್ದಾಗಲಿ ಟೆಸ್ಟ್ ಮಾಡಿಸಿಯೇ ಬಿಡೋಣ ಅಂತ ಈ ಜೋಡಿ ತೀರ್ಮಾನಿಸಿತು. ಕೊನೆಗೂ ಡಿಎನ್ಎ ಪರೀಕ್ಷೆ ನಡೆದಿದ್ದು ಅದರ ಫಲಿತಾಂಶ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಜೇನು ಸಾಕಾಣಿಕೆ ಮಾಡುವ ಬುಡಕಟ್ಟು ಕುಟುಂಬಗಳಿಗೆ ನೆರವು: ಯೋಜನೆ ರೂಪಿಸಿ ಜೇನುತುಪ್ಪ ಮಾರಾಟ ಮಾಡಲು ಅರಣ್ಯ ಇಲಾಖೆ ಮುಂದು!
ವರದಿಯಲ್ಲೇನಿತ್ತು?
ಅಲ್ ಪಚಿನೋ ಪ್ರೇಯಸಿ ನೂರ್ ಅಲ್ಫಾಲ್ಲಾ ರನ್ನು ಡಿಎನ್ ಎ ಪರೀಕ್ಷೆಗೊಳಪಡಿಸಿದಾಗ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಅಲ್ ಪಚಿನೋ ಅವರೇ ತಂದೆ ಎಂಬುದು ಸಾಬೀತಾಗಿದೆ. ಹೀಗಾಗಿ ಡಿಎನ್ಎ ಪರೀಕ್ಷಾ ವರದಿ ನಟನಿಗೂ ಅಚ್ಚರಿ ತಂದಿದೆ. ಅಲ್ಲದೆ ಪ್ರೇಯಸಿ ಮೇಲಿನ ಅನುಮಾನಕ್ಕೂ ಬ್ರೇಕ್ ಹಾಕಿದೆ.
ಯಾರೂ ಈ ನಟ ಅಲ್ ಪಚೀನೋ?
ಹಾಲಿವುಡ್ನಲ್ಲಿ ಡಿಗ್ಗಜ ನಟನಾಗಿ ಅಲ್ ಪಚಿನೋ ಗುರುತಿಸಿಕೊಂಡಿದ್ದಾರೆ. ‘ಗಾಡ್ ಫಾದರ್’, ‘ಸೆಂಟ್ ಆಫ್ ಎ ವುಮನ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಅವರು ಗಮನ ಸೆಳೆದಿದ್ದಾರೆ. ಅವರ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿ, ಟೋನಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆ ಮತ್ತು ರಂಗಭೂಮಿಯಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದಾರೆ. 1969ರಿಂದಲೂ ಅವರು ಹಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್: ಏಕ ಶಿಕ್ಷಕಿ ಶಾಲೆಯ ವಿದ್ಯಾರ್ಥಿನಿಯರ ಅದ್ಭುತ ಸಾಧನೆ; ಶೇ.93 ರಷ್ಟು ಫಲಿತಾಂಶ!
ಹಾಲಿವುಡ್ ನಟ ಐಶಾರಾಮಿ ಜೀವನ!
ಅಲ್ ಪಚಿನೋ ಅವರ ವೈಯಕ್ತಿಕ ಜೀವನ ಡಿಫರೆಂಟ್ ಆಗಿದೆ. ಅವರಿಗೆ ಈಗಾಗಲೇ ಮೂವರು ಮಕ್ಕಳು ಇದ್ದಾರೆ. ಆದರೆ ಅಲ್ ಪಚಿನೋಗೆ ಮದುವೆ ಆಗಿಲ್ಲ! ಹೌದು, ಈ ಮೂವರು ಮಕ್ಕಳು ಜನಿಸಿದ್ದು ಇಬ್ಬರು ಮಾಜಿ ಪ್ರೇಯಸಿಯರಿಗೆ. ಈಗ 4ನೇ ಮಗುವಿಗೆ ತಂದೆ ಆಗುತ್ತಿದ್ದಾರೆ. ಈ ಬೆಳವಣಿಗೆ ಬಗ್ಗೆ ಮೂವರು ಮಕ್ಕಳು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು, ಅಲ್ ಪಚಿನೋ ಪ್ರೇಯಸಿ ನೂರ್ ಅಲ್ಫಾಲ್ಲಾ ಇತಿಹಾಸ ಕೂಡ ದೊಡ್ಡದಿದೆ. 22 ವಯಸ್ಸಿನಲ್ಲೇ ಅವರು 50 ಪ್ಲಸ್ ವಯಸ್ಸಿನ ವ್ಯಕ್ತಿಗಳ ಜೊತೆ ಡೇಟಿಂಗ್ ಮಾಡಿದ್ದರು. ಇದೀಗ ಅಲ್ ಪಚೀನೋ ಜೊತೆ ಜೀವನ ಸಾಗಿಸುತ್ತಿದ್ದಾರೆ.