ಇದು ಮಹಿಳಾ ಶಕ್ತಿ: ರೊಟ್ಟಿ ತಟ್ಟಿ ಬದುಕು ಕಟ್ಟಿಕೊಳ್ಳುತ್ತಿರುವ ಗಟ್ಟಿಗಿತ್ತಿಯರು; ಬೆನ್ನೆಲುಬಾಗಿ ನಿಂತ ಕಲಬುರಗಿ ಜಿಲ್ಲಾಡಳಿತ ಮಂಡಳಿ

ಸಿರಿಧಾನ್ಯಗಳ ರಾಜ ಎಂದೇ ಕರೆಯಲಾಗುವ ಜೋಳದಿಂದ ಮಾಡಿದ 'ಕಲಬುರಗಿ ರೊಟ್ಟಿ' ಈಗ ಆರೋಗ್ಯ ಪ್ರಜ್ಞೆಯುಳ್ಳವರ ಪ್ರಮುಖ ಆದ್ಯತೆ ಹಾಗೂ ಆಯ್ಕೆಯಾಗಿ ಮಾರ್ಪಟ್ಟಿದೆ.
Members of the self-help group display their wide range of products, including Kalaburagi rotti.
ಕಲಬುರಗಿ ರೊಟ್ಟಿ ಸೇರಿದಂತೆ ತಮ್ಮ ವಿವಿಧ ಉತ್ಪನ್ನಗಳನ್ನು ಸ್ವಸಹಾಯ ಗುಂಪಿನ ಸದಸ್ಯರು ಪ್ರದರ್ಶಿಸುತ್ತಿರುವುದು.
Updated on

ಕಲಬುರಗಿ: ಕಲಬುರಗಿ ಜಿಲ್ಲಾಡಳಿತ ಮಂಡಳಿಯು ಜಿಲ್ಲೆಯಲ್ಲಿ ರೊಟ್ಟಿಗಳನ್ನು ತಯಾರಿಸಲು ಒಂದೂವರೆ ವರ್ಷದ ಹಿಂದೆ ಪ್ರಾರಂಭಿಸಲಾದ ಉಪಕ್ರಮವೊಂದು ಇಲ್ಲಿನ ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಇಂದು ಜಿಲ್ಲೆಯ ನೂರಾರು ಮಹಿಳೆಯರು ಉದ್ಯಮಿಗಳಾಗಿ ಪರಿವರ್ತನೆಗೊಂಡಿದ್ದಾರೆ.

ಸಿರಿಧಾನ್ಯಗಳ ರಾಜ ಎಂದೇ ಕರೆಯಲಾಗುವ ಜೋಳದಿಂದ ಮಾಡಿದ 'ಕಲಬುರಗಿ ರೊಟ್ಟಿ' ಈಗ ಆರೋಗ್ಯ ಪ್ರಜ್ಞೆಯುಳ್ಳವರ ಪ್ರಮುಖ ಆದ್ಯತೆ ಹಾಗೂ ಆಯ್ಕೆಯಾಗಿ ಮಾರ್ಪಟ್ಟಿದೆ.

ಕಲಬುರಗಿ ರೊಟ್ಟಿ ಉತ್ಪಾದಕರ ಸಹಕಾರ ಸಂಘ (ಕಲಬುರಗಿ ರೊಟ್ಟಿ ಉತ್ಪಾದಕರ ಸಹಕಾರ ಸಂಘ) ತಯಾರಿಸಿ ಮಾರಾಟ ಮಾಡುವ ಈ ರೊಟ್ಟಿಗಳು ಇಂದು ಹಲವರ ಗಮನ ಸೆಳೆದಿದೆ. ಪ್ರತಿದಿನ ಈ ಸಂಘವು 3,000 ರೊಟ್ಟಿಗಳು ಮತ್ತು ಆಕರ್ಷಕ ಚಟ್ನಿಗಳನ್ನು ಮಾರಾಟ ಮಾಡುತ್ತದೆ.

ಈ ಆರೋಗ್ಯಕರ ರೊಟ್ಟಿಗಳನ್ನು ಮೃದು, ಕಡಕ್, ಹೋಳಿಗೆ ಸೇರಿದಂತೆ ವಿವಿಧ ರೀತಿಯಲ್ಲಿ ತಯಾರಿಸಲಾಗುತ್ತಿದ್ದು, ಇವುಗಳನ್ನು ಅಮೆಜಾನ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲೂ ಮಾರಾಟವಾಗುತ್ತಿದೆ. www.kalaburagirotti.com ನಲ್ಲಿಯೂ ಆರ್ಡರ್‌ಗಳನ್ನು ನೀಡಬಹುದು.

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರಣಮ್ ಅವರ ಪರಿಶ್ರಮದಿಂದಾಗಿ ಕಲಬುರಗಿ ರೊಟ್ಟಿ ಉತ್ಪಾದಕರ ಸಹಕಾರ ಸಂಘ ಸ್ಥಾಪನೆಗೊಂಡಿತು. ಕಲಬುರಗಿಯಲ್ಲಿ ಜೋಳ ಮತ್ತು ಸಜ್ಜೆ.ನ್ನು ಹೇರಳವಾಗಿ ಬೆಳೆಯಲಾಗುತ್ತಿದ್ದು, ಇಲ್ಲಿನ ಪ್ರಧಾನ ಆಹಾರವಾಗಿದೆ.

ಕಲಬುರಗಿ ರೊಟ್ಟಿ ಉತ್ಪಾದಕರ ಸಹಕಾರ ಸಂಘವು ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೆಲೆಗೊಂಡಿರುವ 150 ಮಹಿಳಾ ಸ್ವಸಹಾಯ ಗುಂಪುಗಳಿಂದ ರೊಟ್ಟಿಯನ್ನು ಖರೀದಿಸುತ್ತದೆ. ಪ್ರತೀ ಸ್ವಸಕಹಾಯ ಗುಂಪುಗಳಲ್ಲಿಯೂ 6 ಮಂದಿ ಸದಸ್ಯರಿದ್ದು, ಇವರು ರೊಟ್ಟಿಗಳನ್ನು ತಯಾರಿಸಿ ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ಪ್ರತಿಯೊಂದೂ ಕನಿಷ್ಠ ಆರು ಸದಸ್ಯರನ್ನು ಹೊಂದಿರುತ್ತದೆ. ಸ್ವಸಹಾಯ ಗುಂಪುಗಳು ಸಂಘಕ್ಕೆ ಮಾರಾಟ ಮಾಡುತ್ತಾರೆ.

Members of the self-help group display their wide range of products, including Kalaburagi rotti.
ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ SSLC ತರಬೇತಿ: ಇತರರಿಗೆ ಪ್ರೇರಣೆಯಾದ ಶಾಸಕ ಚಂದ್ರು ಲಮಾಣಿ

ಇಲ್ಲಿಯವರೆಗೂ ನಮ್ಮ ಹೊಟ್ಟೆ ತುಂಬಿಸುತ್ತಿದ್ದ ರೊಟ್ಟಿ ಇಂದು, ನಮಗೆ ಹಣವನ್ನೂ ನೀಡುತ್ತಿದೆ. ರೊಟ್ಟಿ ತಟ್ಟಿಯೂ ಉದ್ಯಮ ಮಾಡಬಹುದು ಎಂದು ಎಂದಿಗೂ ಯೋಜಿಸಿರಲಿಲ್ಲ ಎಂದು ಅಯ್ಯಮ್ಮ ಕುಂಬಾರ್ ಎಂಬುವವರು ಹೇಳಿದ್ದಾರೆ.

ಅಯ್ಯಮ್ಮ ಕುಂಬಾರ್ ಅವರಂತೆಯೇ, 1,000 ಕ್ಕೂ ಹೆಚ್ಚು ಮಹಿಳೆಯರು ರೊಟ್ಟಿ ತಟ್ಟುವುದನ್ನು ಉದ್ಯಮವಾಗಿ ಬಳಕೆ ಮಾಡುತ್ತಿದ್ದಾರೆ.

ಕಲಬುರಗಿಯ ಹೊರವಲಯದ ನಂದೂರಿನ ಮಂಜುನಾಥ ಆಹಾರ ಉತ್ಪಾದಕರ ಮಹಿಳಾ ಸ್ವಸಹಾಯ ಸಂಘದ ಮುಖ್ಯಸ್ಥೆ ಶರಣಮ್ಮ ಪಾಟೀಲ್ ಅವರು ಮಾತನಾಡಿ, ನಮ್ಮ ಸ್ವಸಹಾಯ ಗುಂಪಿನಲ್ಲಿ ಆರು ಮಹಿಳೆಯರು ಕೆಲಸ ಮಾಡುತ್ತಾರೆ. ಅವರು ಪ್ರತಿದಿನ ಕನಿಷ್ಠ 600 ರಿಂದ 700 ರೊಟ್ಟಿಗಳನ್ನು ತಯಾರಿಸುತ್ತಾರೆ. ಪ್ರತಿ ರೊಟ್ಟಿಗೆ 5 ರೂ ದರದಲ್ಲಿ ಸುಮಾರು 400 ರೊಟ್ಟಿಗಳನ್ನು ಸಂಘಕ್ಕೆ ನೀಡಲಾಗುತ್ತದೆ.

ಸ್ವಸಹಾಯ ಸಂಘದ ಸದಸ್ಯರು ಪ್ರತಿ ರೊಟ್ಟಿಗೆ 2.50 ರೂ ಪಡೆಯುತ್ತಾರೆ. ದಿನಕ್ಕೆ ಕನಿಷ್ಠ 250 ರೂ ಗಳಿಸುತ್ತಾರೆ. ಮೃದು ಮತ್ತು ಕಡಕ್ ರೊಟ್ಟಿಗಳನ್ನು 5 ರೂ ಗೆ ಮಾರಾಟ ಮಾಡಲಾಗುತ್ತದೆ. ಇತರ ರೊಟ್ಟಿಗಳು ಹೆಚ್ಚು ದುಬಾರಿಯಾಗಿದೆ ಎಂದು ಹೇಳಿದ್ದಾರೆ.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸಮದ್ ಪಟೇಲ್ ಅವರು ಜಿಲ್ಲಾಡಳಿತ ಮತ್ತು ರೊಟ್ಟಿ ಉತ್ಪಾದಕರ ಸಹಕಾರ ಸಂಘದ ನಡುವಿನ ಕೊಂಡಿಯಾಗಿದ್ದು, ಮಹಿಳೆಯ ಸ್ವಾವಲಂಬಿ ಜೀವನಕ್ಕೆ ಸಾಕಷ್ಟು ನೆರವು ನೀಡುತ್ತಿದ್ದಾರೆ.

ಮಾಲ್ದಂಡಿ ವಿಧದ ಜೋಳವನ್ನು ಸ್ಥಳೀಯವಾಗಿ ಬೆಳೆಯುವುದರಿಂದ ಮತ್ತು ಪೌಷ್ಟಿಕಾಂಶವನ್ನು ಹೊಂದಿರುವುದರಿಂದ ರೊಟ್ಟಿ ತಯಾರಿಸಲು ಬಳಸಲಾಗುತ್ತಿದೆ ಎಂದು ಸಮದ್ ಪಟೇಲ್ ಅವರು ಹೇಳಿದ್ದಾರೆ.

ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳೊಂದಿಗೆ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಕಲಬುರಗಿ ರೊಟ್ಟಿ ಉತ್ಪಾದಕರ ಸಹಕಾರ ಸಂಘದ ಉದ್ದೇಶವಾಗಿದೆ ಎಂದು ಎಂದು ಉಪ ಆಯುಕ್ತ ತರಣಮ್ ಅವರು ತಿಳಿಸಿದ್ದಾರೆ.

ನಗರೀಕರಣದಿಂದಾಗಿ ಆಹಾರ ಪದ್ಧತಿ ಬದಲಾಗಿದ್ದು, ಇಂದು ಅಕ್ಕಿ ಮತ್ತು ಗೋಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆಹಾರ ಪದ್ಧತಿಯಲ್ಲಿನ ಬದಲಾವಣೆಯು ಮಹಿಳೆಯರು ರಕ್ತಹೀನತೆಗೆ ಒಳಗಾಗಲು ಕಾರಣವಾಗಿದೆ. ಜನರಿಗೆ ಆರೋಗ್ಯಕರ ಆಹಾರವನ್ನು ಒದಗಿಸುವ ನಮ್ಮ ಪ್ರಯತ್ನದಲ್ಲಿ, ನಾವು ರೊಟ್ಟಿಯನ್ನು ಉತ್ತೇಜಿಸಲು ನಿರ್ಧರಿಸಿದ್ದೇವೆ.

'ಕಲಬುರಗಿ ರೊಟ್ಟಿ'ಯನ್ನು ಬ್ರ್ಯಾಂಡಿಂಗ್ ಮಾಡುವ ಮೂಲಕ ಜಿಲ್ಲಾಡಳಿತವು ಸಿರಿಧಾನ್ಯವನ್ನು ಆಹಾರ ಪದ್ಧತಿಯಾಗಿ ಮಾಡಲು ಮುಂದಾಗಿದ್ದೇವೆ. ಜೋಳವನ್ನು ಸಿರಿಧಾನ್ಯಗಳ ರಾಜ ಎಂದು ಕರೆಯಲಾಗುತ್ತದೆ, ಸಜ್ಜೆಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿದೆ. ಈ ಉಪಕ್ರಮವು ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಒದಗಿಸುವಲ್ಲಿ, ಜೋಳ ಮತ್ತು ಸಜ್ಜೆಯ ಬೆಲೆಯನ್ನು ಸ್ಥಿರಗೊಳಿಸುವಲ್ಲಿ ಯಶಸ್ವಿಯಾಗಿದೆ, ಇದರಿಂದಾಗಿ ಎಲ್ಲರಿಗೂ ಲಾಭ ಸಿಗುತ್ತಿದೆ ಎಂದು ತಿಳಿಸಿದ್ದಾರೆ.

ರೊಟ್ಟಿಯನ್ನು ಉತ್ತೇಜಿಸಲು ನಾವು 100 ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು / ಸ್ವಸಹಾಯ ಸಂಘಗಳಿಗೆ ಕೃಷಿ ಮತ್ತು ಸಂಬಂಧಿತ ಇಲಾಖೆಗಳ ವಿವಿಧ ಯೋಜನೆಗಳ ಅಡಿಯಲ್ಲಿ ರೊಟ್ಟಿ ತಯಾರಿಸುವ ಯಂತ್ರಗಳನ್ನು ಒದಗಿಸಿದ್ದೇವೆ. ನಮ್ಮ ಈ ಉಪಕ್ರಮವನ್ನು ಆಹಾರ ತಜ್ಞರೂ ಶ್ಲಾಘಿಸಿದ್ದಾರೆ.

ಜೋಳ ಹಾಗೂ ಸಜ್ಜೆ ಬೆಳೆಯುವ ರೈತರಿಗೂ ಲಾಭವಾಗುತ್ತಿದೆ. ರೊಟ್ಟಿ ಪೌಷ್ಟಿಕ ಆಹಾರ ಮಾತ್ರವಲ್ಲ, ಮಧುಮೇಹಿಗಳು, ರಕ್ತದೊತ್ತಡ ಮತ್ತು ವೃದ್ಧರಿಗೂ ಸಹ ವಿವಿಧ ವೈದ್ಯಕೀಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಿದ್ದಾರೆ.

Members of the self-help group display their wide range of products, including Kalaburagi rotti.
ಬೆಳಗಾವಿ: ಕುರಿ ಕಾಯುತ್ತಲೇ UPSC ಪರೀಕ್ಷೆ ಪಾಸ್ ಮಾಡಿದ ಬೀರಪ್ಪ, ಹನುಮಂತಪ್ಪ!

ರೊಟ್ಟಿ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶರಣು ಆರ್ ಪಾಟೀಲ್ ಅವರು ಮಾತನಾಡಿ, ಸಂಘವು ಪ್ರತಿದಿನ 3,000 ರೊಟ್ಟಿಗಳಿಗೆ ಆರ್ಡರ್‌ಗಳನ್ನು ಪಡೆಯುತ್ತಿದೆ. ಸಂಘವು ಉತ್ಪಾದಕರಿಂದ 5 ರೂ.ಗೆ ರೊಟ್ಟಿಯನ್ನು ಖರೀದಿಸುತ್ತದೆ. 7 ರೂ.ಗೆ ಮಾರಾಟ ಮಾಡುತ್ತದೆ. 10 ರೊಟ್ಟಿಗಳನ್ನು ಹೊಂದಿರುವ ರೊಟ್ಟಿ ಪ್ಯಾಕ್ ಅನ್ನು ಪ್ರತಿ ಪ್ಯಾಕ್‌ಗೆ 110/- ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ಗ್ರಾಹಕರು ಆನ್‌ಲೈನ್ ಮತ್ತು ಸ್ಥಳೀಯ ಅಂಗಡಿಗಳಲ್ಲಿ ಖರೀದಿ ಮಾಡಬಹುದು. ರೊಟ್ಟಿಯ ಜೊತೆಗೆ ವಿವಿಧ ರೀತಿಯ ಚಟ್ನಿಗಳನ್ನೂ ಖರೀದಿ ಮಾಡಬಹುದು.

'ಆರೋಗ್ಯಕರವಾಗಿ ತಿನ್ನಿರಿ' ಪರಿಕಲ್ಪನೆಯು ರಾಜ್ಯಾದ್ಯಂತ ಉತ್ತಮ ಬೆಂಬಲವನ್ನು ಪಡೆಯುತ್ತಿದ್ದು, ನಗರ ಕೇಂದ್ರಗಳಲ್ಲಿ ಕಲಬುರಗಿ ರೊಟ್ಟಿಗೆ ಸಾಕಷ್ಟು ಬೇಡಿಕೆಗಳಿವೆ. ಸೊಸೈಟಿಯು ಇತ್ತೀಚೆಗೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ 'ಕಲಬುರಗಿ ರೊಟ್ಟಿ' ಕೇಂದ್ರವನ್ನೂ ತೆರೆದಿದೆ. ಜೊಮಾಟೊ ಮತ್ತು ಸ್ವಿಗ್ಗಿಯಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ನೋಂದಾಯಿಸಿದ್ದು, ಖರೀದಿಗೆ ಕ್ಯೂಆರ್ ಕೋಡ್ ಅನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com