ಕ್ರೀಡೆ

ಕುದುರಿದ ಭೂಪ ಬೋಪರ ಸ್ನೇಹ

Published On :

ಬೆಂಗಳೂರು: ಭಾರತ ಟೆನಿಸ್ ಆಟಗಾರರು ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲವೆನಿಸುತ್ತಿದೆ. ಜತೆಯಾಗಿ ಆಡುವುದು, ಅಗಲುವುದು ಮತ್ತೆ ಜತೆಯಾಗಿ ಆಡುವುದು. ಬಂಡಾಯವೇಳುವುದು ಭಾರತ ಟೆನಿಸ್ನಲ್ಲಿ ಸಾಮಾನ್ಯವಾಗಿಬಿಟ್ಟಿವೆ.ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲಬೇಕೆಂಬ ಉದ್ದೇಶದಿಂದ ಜತೆಯಾಗಿ ಆಡಿದ್ದ ಭಾರತದ ಹಿರಿಯ ಟೆನಿಸ್ ತಾರೆ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೋಡಿ, ನಂತರ ಬೇರ್ಪಟ್ಟಿತ್ತು. ಈಗ ಮತ್ತೆ ಕೈಜೋಡಿಸಿರುವುದು ಟೆನಿಸ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.2012ರ ಎಟಿಪಿ ವಿಶ್ವ ಟೂರ್ ಫೈನಲ್ಸ್ನಲ್ಲಿ ನೀಡಿದ ಯಶಸ್ವಿ ಪ್ರದರ್ಶನ ಈ ಜೋಡಿ ಮತ್ತೆ ಒಂದಾಗಲು ಕಾರಣವಂತೆ. ಹೀಗಾಗಿ ಮತ್ತೆ ಒಂದಾಗಿ ಆಡಲು ಸೋಮವಾರ ಈ ಜೋಡಿ ನಿರ್ಧರಿಸಿದೆ.ಒಂದು ಬಾರಿ ಜತೆಯಾಗಿ ಆಡಿ, ಬೇರ್ಪಟ್ಟ ನಂತರ, ಸ್ಕಾಟ್ಲೆಂಡ್ ಕಾಲಿನ್ ಫ್ಲೆಮಿಂಗ್ ಅವರೊಂದಿಗೆ ಜತೆಯಾಗಿ ಆಡಿದ್ದ ಬೋಪಣ್ಣ ಮಾರ್ಸೆಲ್ಲೀಸ್ ಓಪನ್ ಗೆದ್ದಿಕೊಂಡಿದ್ದರು. ಇನ್ನು ಫ್ರಾನ್ಸ್ನ ಮೈಕಲ್ ಲಾಡ್ರಾ ಅವರೊಂದಿಗೆ ಜತೆಯಾಗಿ ಆಡಿದ್ದ ಭೂಪತಿ ದುಬೈ ಓಪನ್ನಲ್ಲಿ ಜಯ ಕಂಡಿದ್ದರು.ವಿಶ್ವ ಟೆನಿಸ್ ರ್ಯಾಂಕಿಂಗ್ ಪುರುಷರ ಡಬಲ್ಸ್ ವಿಭಾಗದಲ್ಲಿ 10ನೇ ಸ್ಥಾನ ಹೊಂದಿರುವ ಭೂಪತಿ ಮತ್ತು 12ನೇ ಸ್ಥಾನ ಹೊಂದಿರುವ ಬೋಪಣ್ಣ ದೇಶದ ಅಗ್ರ ಟೆನಿಸ್ ತಾರೆಗಳಾಗಿದ್ದು, ಮಾಂಟೇ ಕಾರ್ಲೋ ಮಾಸ್ಟರ್ಸ್ನಲ್ಲಿ ಜತೆಯಾಗಿ ಆಡಲಿದ್ದಾರೆ.2012ರಲ್ಲಿ ಜತೆಯಾಗಿ ಆಡಿದಾಗಿನ ಅನುಭವ, ತಾವು ಜತೆಯಾಗಿ ಯಶಸ್ವಿಯಾಗುತ್ತೇವೆ ಎಂದು ನಂಬಲು ಇಬ್ಬರಿಗೂ ಪ್ರಮುಖ ಕಾರಣವಾಗಿದೆಯಂತೆ.'ಕಳೆದ ವರ್ಷ ನಾವಿಬ್ಬರೂ ಯಶಸ್ವಿ ಹೋರಾಟ ನಡೆಸಿದ್ದೆವು. ಇಬ್ಬರೂ ಜತೆಯಾಗಿ ಆಡುವಾಗ ಕೋರ್ಟ್ನಲ್ಲಿ ಉತ್ತಮ ಲಯ ಕಂಡುಕೊಂಡಿದ್ದೆವು. ಟೆನಿಸ್ನ ಹಲವು ಮಗ್ಗಲುಗಳನ್ನು ಇಬ್ಬರೂ ಅರ್ಥ ಮಾಡಿಕೊಂಡಿದ್ದೇವೆ. ಅಲ್ಲದೆ, ಟೆನಿಸ್ ಕೋರ್ಟ್ನ ಹೊರಗೂ ನಾವಿಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದೇವೆ.
ಹೀಗಾಗಿ ಭವಿಷ್ಯದಲ್ಲಿ ನಾವು ಯಶಸ್ಸು ಸಾಧಿಸುತ್ತೇವೆ ಎಂಬ ಭರವಸೆ ಹೊಂದಿದ್ದೇವೆ. ಅಲ್ಲದೆ ದೇಶದ ಅಗ್ರ ಡಬಲ್ಸ್ ಜೋಡಿಯಾಗಿ ಹೊರಹೊಮ್ಮುವುದರಲ್ಲಿ ಎರಡು ಮಾತಿಲ್ಲ' ಎಂದಿದ್ದಾರೆ ಮತ್ತೆ ಒಂದಾಗಿರುವ ಬಗ್ಗೆ ಭೂಪತಿ.
'ಮಹೇಶ್ ಭೂಪತಿ ಅವರೊಂದಿಗೆ ಆಡುತ್ತಿರುವುದು ಟೆನಿಸ್ನಲ್ಲಿ ನನಗೆ ದೊಡ್ಡ ಅನುಭವದ ವೇದಿಕೆ ಒದಗಿಸಿಕೊಟ್ಟಿದೆ. ಅಲ್ಲದೆ ನಾವಿಬ್ಬರು ಅದ್ಭುತ ಜೋಡಿಯಾಗಬಲ್ಲೆವು. ಈ ಹಿಂದಿಗಿಂತ ಉತ್ತಮ ಪ್ರದರ್ಶನ ನೀಡಲು ಇಬ್ಬರೂ ಸೇರಿ ಕಠಿಣ ಪರಿಶ್ರಮಪಡುತ್ತಿದ್ದೇವೆ' ಎಂದಿದ್ದಾರೆ ರೋಹನ್ ಬೋಪಣ್ಣ.
ಪುರುಷರ ಡಬಲ್ಸ್ ವಿಭಾಗದಲ್ಲಿ ನಾಲ್ಕು ಗ್ರಾನ್ಸ್ಲ್ಯಾಮ್ ಪ್ರಶಸ್ತಿಗಳು ಸೇರಿಂದಂತೆ ಒಟ್ಟು 52 ಪ್ರಶಸ್ತಿಗಳನ್ನು ಹಾಗೂ ಮಿಶ್ರ ಡಬಲ್ಸ್ನಲ್ಲಿ 8 ಗ್ರಾನ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ದೇಶದ ಹಿರಿಯ ಆಟಗಾರ ಮಹೇಶ್ ಭೂಪತಿ ಈ ವರ್ಷ ತಮ್ಮ ಅಂತಾರಾಷ್ಟ್ರೀಯ ವೃತ್ತಿಗೆ ವಿದಾಯ ಹೇಳುವ ಮೂಲಕ ರ್ಯಾಕೆಟ್ ಮತ್ತು ಬೂಟುಗಳಿಗೆ ಕಾಯಂ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.