ಈ ಬಾರಿಯ ಐಪಿಎಲ್ ಯುವ ಕ್ರಿಕೆಟಿಗರಿಗೆ ಸತ್ವಪರೀಕ್ಷೆ: ಟಾಮ್ ಮೂಡಿ
ಹೈದರಾಬಾದ್: ಉದಯೋನ್ಮುಖ ಪ್ರತಿಭೆ ಶಿಖರ್ ಧವನ್ ಅವರ ಅನುಪಸ್ಥಿಯಲ್ಲಿ, ಹೈದರಾಬಾದ್ ಸನ್ರೈಸರ್ಸ್ ತಂಡದಲ್ಲಿರುವ ಯುವ ಆಟಗಾರರಿಗೆ ಈ ಬಾರಿಯ ಐಪಿಎಲ್ ಸತ್ವಪರೀಕ್ಷೆಯನ್ನೊಡ್ಡಲಿದೆ ಎಂದು ತಂಡದ ಕೋಚ್ ಟಾಮ್ ಮೂಡಿ ಹೇಳಿದ್ದಾರೆ. ಧವನ್ ಅವರ ಅನುಪಸ್ಥಿತಿ ಬಗ್ಗೆ ಹೆಚ್ಚು ಚಿಂತಿಸದೇ ಆತ್ಮವಿಶ್ವಾಸದಿಂದ ಆಡುವಂತೆ ಅವರು ತಂಡದ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೇಗದ ಶತಕ ಬಾರಿಸಿ ಶಿಖರ್ ಧವನ್ ಗಮನ ಸೆಳೆದಿದ್ದರು.
ಆಸೀಸ್ ವಿರುದ್ಧದ ಟೆಸ್ಟ್ ಸರಣಿಯ ಸಂದರ್ಭದಲ್ಲೇ ಕೈಗೆ ಗಾಯ ಮಾಡಿಕೊಂಡಿದ್ದ ಧವನ್, ಕಾಂಗರೂ ವಿರುದ್ಧದ ಕೊನೆಯ ಪಂದ್ಯದಲ್ಲೂ ಕಣಕ್ಕಿಳಿದಿರಲಿಲ್ಲ.
'ನಮ್ಮ ತಂಡದಲ್ಲಿ ಉತ್ತಮ ಪ್ರತಿಭೆಗಳಿದ್ದಾರೆ. ಅದರಲ್ಲೂ ಇಬ್ಬರು ಆಟಗಾರರ ಬಗ್ಗೆ ಸಾಕಷ್ಟು ಭರವಸೆ ಹೊಂದಿದ್ದೇನೆ. ಈ ಬಾರಿಯ ಐಪಿಎಲ್ನಲ್ಲಿ ಅವರು ಸ್ಟಾರ್ಗಳಾಗಿ ಹೊರಹೊಮ್ಮಬಹುದು ಎಂಬ ನಿರೀಕ್ಷೆಯಿದೆ. ಇಡೀ ತಂಡವನ್ನು ಅಣಿಗೊಳಿಸುವುದರ ಜೊತೆಗೆ, ತಂಡದಲ್ಲಿರುವ ಪ್ರತಿಭೆಗಳನ್ನು ಬೆಳೆಸುವ ಬಗ್ಗೆಯೂ ಪ್ರಯತ್ನಪಡುತ್ತಿದ್ದೇನೆ. ಶಿಖರ್ ಅವರ ಅನುಪಸ್ಥಿತಿಯ ಸಂದರ್ಭದಲ್ಲಿ, ತಮ್ಮ ಪ್ರತಿಭೆ ತೋರಿಸುವ ಅವಕಾಶ ಕೈಚೆಲ್ಲದಂತೆ ನಮ್ಮ ತಂಡದಲ್ಲಿನ ಆಟಗಾರರಿಗೆ ಸೂಚಿಸಿದ್ದೇನೆ' ಎಂದು ಮೂಡಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

