ಕ್ರೀಡೆ

ವಿಜಿಗೆ ಡೋಪಿಂಗೆ ಟೆಸ್ಟ್

ವಿಜಿಗೆ ಡೋಪಿಂಗೆ ಟೆಸ್ಟ್
Published On :

ನವದೆಹಲಿ: ಬಾಕ್ಸರ್ಗಳು ಸಿಲುಕಿಹಾಕಿಕೊಂಡಿರುವ ಮಾದಕ ವಸ್ತು ವಿವಾದಕ್ಕೆ ಅಂತ್ಯ ಹಾಡಲು ಕೇಂದ್ರ ಕ್ರೀಡಾ ಸಚಿವಾಲಯ ಮುಂದಾಗಿದೆ.
ಸ್ಟಾರ್ ಬಾಕ್ಸರ್ ವಿಜೇಂದ್ರ ಸಿಂಗ್ ಹೆರಾಯಿನ್ ಸೇವಿಸಿರುವ ಬಗ್ಗೆ ತಕ್ಷಣವೇ ಪರೀಕ್ಷೆ ನಡೆಸಲು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಪಡೆ (ನಾಡಾ)ಗೆ, ಕ್ರೀಡಾ ಸಚಿವಾಲಯ ಸೋಮವಾರ ನಿರ್ದೇಶನ ನೀಡಿದೆ. ವಿಜೇಂದ್ರ್ ಹೆರಾನ್ ಸೇವಿಸಿದ್ದಾರೆ ಎಂದು ಪಂಜಾಬ್ ಪೊಲೀಸರು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ.
ಕಳೆದ ಒಂದು ತಿಂಗಳಿನಿಂದಲೇ ಪ್ರಕರಣದಲ್ಲಿ ವಿಜೇಂದರ್ ಸಿಂಗ್ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಪ್ರಕರಣಕ್ಕೆ ಅಂತ್ಯ ಹಾಡಲು ಸಚಿವಾಲಯ ಮುಂದಾಗಿದೆ.
ಬೀಜಿಂಗ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ವಿಜೇಂದರ್ ಸಿಂಗ್ ಹೆರಾಯಿನ್ ಸೇವಿಸಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾದ ಹಿನ್ನೆಲೆಯಲ್ಲಿ, ಅವರನ್ನು ಡೋಪಿಂಗ್ ಟೆಸ್ಟ್ಗೆ ಒಳಪಡಿಸುವಂತೆ ನಾಡಾ ಪ್ರಧಾನ ನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ಕ್ರೀಡಾ ಸಚಿವಾ ಮುಕುಲ್ ಚಟರ್ಜಿ ಹೇಳಿದ್ದಾರೆ. ಅಲ್ಲದೆ ಈ ಪರೀಕ್ಷೆಯನ್ನು ಸ್ಪರ್ಧೆಗಳಿಂದ ಹೊರಗೆ ನಡೆಸಲಾಗುತ್ತದೆ.
'ಹೆರಾಯಿನ್ ಸೇವಿಸಿರುವ ಆರೋಪಗಳಿಂದ ಖ್ಯಾತ ಕ್ರೀಡಾಪಟು ಆತಂಕಕ್ಕೊಳಗಾಗಿದ್ದಾರೆ. ಇದು ದೇಶದ ಇತರ ಕ್ರೀಡಾಪಟುಗಳ ಮೇಲೂ ಪರಿಣಾಮ ಬೀರಬಹುದು. ಆದಷ್ಟು ಬೇಗನೆ ವಿಜೇಂದ್ರ ಮೇಲೆ ಪರೀಕ್ಷೆ ನಡೆಸಿ ಸತ್ಯಾಸತ್ತತೆಯನ್ನು ತಿಳಿದುಕೊಳ್ಳಲು ನಾಡಾಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ವಿಜೇಂದ್ರ ಸಿಂಗ್ 12 ಬಾರಿ ಹೆರಾಯಿನ್ ಸೇವಿಸಿದ್ದಾರೆ ಎಂದು ಪಂಜಾಬ್ ಪೊಲೀಸರು ಹೇಳಿಕೆ ನೀಡಿದ ನಂತರ, ಆ ಕುರಿತು ವಿಜಿ ನಿರಾಕರಿಸಿದ್ದಾರೆ.
'ಇದುವರೆಗೂ ನಡೆಸಿದ ತನಿಖೆಯ ಪ್ರಕಾರ ವಿಜೇಂದ್ರ ಸಿಂಗ್ ಅವರು 12 ಬಾರಿ ಹೆರಾಯಿನ್ ಸೇವಿಸಿದ್ದು, ಆತನ ಸ್ನೇಹಿತ ರಾಮ್ ಸಿಂಗ್ 5 ಬಾರಿ ಸೇವಿಸಿದ್ದಾರೆ' ಎಂದು ಪಂಜಾಬ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾದಕ ವಸ್ತು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಕೆನಡಾ ಮೂಲದ ಕೊಹ್ಲನ್ ಅಲಿಯಾಸ್ ರುಬಿ ಎಂಬಾತನ್ನು ಮಾರ್ಚ್ 3ರಂದು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಆ ಸಂದರ್ಭದಲ್ಲಿ ಚಂಡೀಗಢದ ಹೊರ ವಲಯದಲ್ಲಿರುವ ಜಿರಾಕ್ಪುರದಲ್ಲಿನ ನಿವಾಸ ಒಂದರಿಂದ ರು. 130 ಕೋಟಿ ಮೊತ್ತದ 26ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.
'ಬಾಕ್ಸರ್ಗಳಾದ ರಾಮ್ ಸಿಂಗ್ ಮತ್ತು ವಿಜೇಂದರ್ ಸಿಂಗ್ ಕೊಹ್ಲನ್ ಬಳಿ ಹೆರಾಯಿನ್ ಪಡೆದು ಸೇವಿಸಿದ್ದಾರೆ. ಡಿಸೆಂಬರ್ 2012ರಿಂದ ಫೆಬ್ರುವರಿ 2013ರ ವೇಳೆಯಲ್ಲಿ ವೈಯಕ್ತಿಕ ಬಳಕೆಗೆ ಹೆರಾಯಿನ್ ಖರೀದಿಸಿ ಸೇವಿಸಿದ್ದಾರೆ' ಎಂದು ಪಂಜಾಬ್ ಪೊಲೀಸ್ ವಕ್ತಾರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.