ಕ್ರೀಡೆ

ಗೆಲುವಿನ ಕೇಕೆ ಹಾಕುವುದೇ ಕೆಕೆಆರ್

ಗೆಲುವಿನ ಕೇಕೆ ಹಾಕುವುದೇ ಕೆಕೆಆರ್
Published On :

ಕೊಲ್ಕತ್ತಾ: ವಿಶ್ವ ಕ್ರಿಕೆಟ್‌ನ ಶ್ರೀಮಂತ ಪಂದ್ಯಾವಳಿಯಲ್ಲಿ ಎಂಬ ಖ್ಯಾತಿ ಪಡೆದಿರುವ ಐಪಿಎಲ್‌ನ 6ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಎದುರಿಸಲಿದೆ.
ಈ ಬಾರಿಯೂ ಪ್ರಶಸ್ತಿಯನ್ನು ತನ್ನಲೇ ಉಳಿಸಿಕೊಳ್ಳುವ ಕನಸು ಕಾಣುತ್ತಿರುವ ಕೊಲ್ಕತ್ತಾ ತಂಡ ಈ ಪಂದ್ಯವನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡುವರೇ ಎಂಬುದು ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಕಳೆದ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಗೌತಮ್ ಗಂಭೀರ್ ನಾಯಕತ್ವದ ಕೆಕೆಆರ್ ಹಾಲಿ ಚಾಂಪಿಯನ್ ಎಂಬ ಗತ್ತಿನಲ್ಲಿ ಈ ಬಾರಿ ಕಣಕ್ಕಿಳಿಯಲಿದ್ದು, ಕಳೆದ ಬಾರಿಯ ಉತ್ತಮ ಪ್ರದರ್ಶನವನ್ನು ಮುಂದುವರಿಸಲು ಕಾತರದಿಂದ ಕಾಯುತ್ತಿದೆ. ಇತ್ತ ಡೆಲ್ಲಿ ಡೇರ್‌ಡೆವಿಲ್ಸ್ ತಂಡವೂ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರುವ ಕನಸಿನೊಂದಿಗೆ ಕಣಕ್ಕಿಳಿಯಲಿದ್ದು, ಖ್ಯಾತ ಸ್ಫೋಟಕ ಬ್ಯಾಟ್ಸ್‌ಮನ್‌ಗಳೊಂದಿಗೆ ತನ್ನ ಗೆಲುವಿನ ಯಾತ್ರೆಯನ್ನು ಆರಂಭಿಸಲು ಎದುರು ನೋಡುತ್ತಿದೆ.

ಡೆಲ್ಲಿಗೆ ಗಾಯದ ಢರ್: ಪಂದ್ಯಾವಳಿ ಆರಂಭಕ್ಕು ಮುನ್ನವೇ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಜತೆಗೆ ಬಾರ್‌ವೊಂದರಲ್ಲಿ ಗಲಾಟೆ ಮಾಡಿಕೊಂಡು ಕೋಮಾ ಸ್ಥಿತಿಗೆ ಜಾರಿದ್ದ ಜೆಸ್ಸಿ ರೈಡರ್ ಈ ಬಾರಿ ಡೆಲ್ಲಿ ತಂಡದ ಪರ ಕಣಕ್ಕಿಳಿಯುತ್ತಿಲ್ಲ.
ಈ ಗಾಯದ ಸಮಸ್ಯೆಗಳ ನಡುವೆ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಕೂಡ ಬೆನ್ನು ನೋವಿಗೆ ಸಿಲುಕಿದ್ದು, ಇಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಜತೆಗೆಕಳೆದ ಬಾರಿ ಹೆಚ್ಚು ವಿಕೆಟ್ ಪಡೆದಿದ್ದ ಮಾರ್ನೆ ಮಾರ್ಕೆಲ್ ರಾಮ್ ಸ್ಲ್ಯಾಮ್ ಟಿ20 ಪಂದ್ಯಾವಳಿಯಲ್ಲಿ ಟೈಟಾನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಆರಂಭಿಕ ಪಂದ್ಯದಲ್ಲಿ ಆಡುತ್ತಿಲ್ಲ.  ಆದರೆ ಡೆಲ್ಲಿ ತಂಡದಲ್ಲಿ ನಾಯಕ ಜಯವರ್ಧನೆ ಜತೆಗೆ, ಆಸೀಸ್‌ನ ವಾರ್ನರ್, ಆ್ಯಂಡ್ರೂ ರಸೆಲ್ ಹಾಗೂ ಭಾರತದ ಉನ್ಮುಕ್ ಚಾಂದ್, ಇರ್ಫಾನ್ ಪಠಾಣ್, ಉಮೇಶ್ ಯಾದವ್ ತಂಡದಲ್ಲಿರುವುದು ತಂಡಕ್ಕೆ ಬಲ ನೀಡಲಿದೆ.
ಇತ್ತ ಕೆಕೆಆರ್ ತಂಡದಲ್ಲೂ ಇಯಾನ್ ಮಾರ್ಗನ್, ಬ್ರೆಂಡನ್ ಮೆಕಲಂ, ಬ್ರಾಡ್ ಹ್ಯಾಡಿನ್, ಜಾಕ್ ಕಾಲೀಸ್ ಜತೆಗೆ ನಾಯಕ ಗಂಭೀರ್, ಯೂಸುಫ್ ಪಠಾಣ್, ಮನೋಜ್ ತಿವಾರಿ ತಂಡದಲ್ಲಿರುವುದು ಕೆಕೆಆರ್‌ಗೆ ಬಲ ತಂದಿದೆ. ಒಟ್ಟಿನಲ್ಲಿ ಎರಡು ತಂಡವು ಅತ್ಯುತ್ತಮ ದೇಶಿ ಹಾಗೂ ವಿದೇಶಿಯ ಆಟಗಾರರನ್ನು ಹೊಂದಿದ್ದು, ಎರಡೂ ತಂಡಗಳು ಬಲಾಬಲ ಸಮನಾಗಿದೆ. ಹೀಗಾಗಿ ಈ ಬಾರಿಯ ಉದ್ಘಾಟನಾ ಪಂದ್ಯ ಐಪಿಎಲ್‌ನ ಹೈವೊಲ್ಟೇಜ್ ಪಂದ್ಯಗಳಲ್ಲಿ ಒಂದಾಗುವ ಸಾಧ್ಯತೆಗಳು ಹೆಚ್ಚಾಗಿದೆ.

ಡೆಲ್ಲಿ ತಂಡ: ವೀರೇಂದ್ರ ಸೆಹ್ವಾಗ್, ಡೇವಿಡ್ ವಾರ್ನರ್, ಮಹೇಲಾ ಜಯವರ್ಧನೆ, ಮನ್‌ಪ್ರೀತ್ ಜುನೇಜಾ, ಅಜಿತ್ ಅಗರ್ಕರ್, ಗುಲಬ್ ಬೋಡಿ, ಜೊಹಾನ್ ಬೊತಾ, ಉನ್ಮುಕ್ತ್ ಚಂದ್, ರಾಯ್‌ಸ್ಟನ್ ಡಯಾಸ್, ಸಿ.ಎಂ.ಗೌತಮ್, ಕೇದಾರ್ ಜಾದವ್, ಸಿದ್ದಾರ್ತ್ ಕೌರ್, ಜೀವನ್ ಮೆಂಡಿಸ್, ಮಾರ್ನೆ ಮಾರ್ಕೆಲ್, ಶಹ್‌ನಾಬ್ ನದೀಂ, ಯೋಗೇಶ್ ನಾಯರ್, ಸುಜಿತ್ ನಾಯಕ್, ಪವನ್ ನೇಗಿ, ನಮನ್ ಓಜಾ, ಇರ್ಫಾನ್ ಪಠಾಣ್, ಆ್ಯಂಡ್ರೂ ರಸೆಲ್, ಬೆನ್ ರೊಹ್ರರ್, ಅರ್ಷಿತ್ ಸಿಂಗ್ವಿ, ವಾನ್ ಡರ್ ಮರ್ವೆ, ವೇಣುಗೋಪಾಲ್ ರಾವ್, ಉಮೇಶ್ ಯಾದವ್.

ಕೊಲ್ಕತ್ತಾ ತಂಡ: ಗೌತಮ್ ಗಂಭೀರ್ (ನಾಯಕ), ಇಯಾನ್ ಮಾರ್ಗನ್, ಮನೋಜ್ ತಿವಾರಿ, ದೇಬಬ್ರತಾ ದಾಸ್, ಬ್ರಾಡ್ ಹ್ಯಾಡಿನ್, ಮನೇವೀರ ಬಿಸ್ಲಾ, ಬ್ರೆಂಡಾನ್ ಮೆಕಲಂ, ಶಕೀಬ್ ಅಲ್ ಹಸನ್, ರಿಯಾನ್ ಟೆನ್ ಡೋಶ್ಕೆಟ್, ಜಾಕ್ ಕಾಲಿಸ್, ಯೂಸುಫ್ ಪಠಾಣ್, ಲಕ್ಷ್ಮೀ ರತನ್ ಶುಕ್ಲಾ, ರಜತ್ ಭಾಟಿಯಾ, ರಿಯಾನ್ ಮೆಕ್‌ಲಾರೆನ್, ಬ್ರೆಟ್ ಲೀ, ಜೇಮ್ಸ್ ಪ್ಯಾಟಿನ್ಸನ್, ಲಕ್ಷ್ಮೀಪತಿ ಬಾಲಾಜಿ, ಇಕ್ಬಾಲ್ ಅಬ್ದುಲ್ಲಾ, ಮಹಮ್ಮದ್ ಶಮಿ, ಪ್ರದೀಪ್ ಸಾಂಗ್ವಾನ್, ಸರಬ್ಜೀತ್ ಲಡ್ಡಾ, ಸುನಿಲ್ ನಾರಾಯಣ್, ಸಚಿತ್ರಾ ಸೇನಾನಾಯಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.