ವಿಜೇಂದರ್ ಪರೀಕ್ಷೆ ಸಾಧ್ಯವಿಲ್ಲ: ನಾಡಾ

ನವದೆಹಲಿ: ಹೆರಾಯಿನ್ ಡ್ರಗ್ಸ್ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ಹೆಚ್ಚುವರಿ ಪರೀಕ್ಷೆಗೆ ಒಳಪಡಿಸುವುದಿಲ್ಲವೆಂದು ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ದಳ (ನಾಡಾ) ಹೇಳುವ ಮೂಲಕ ಕೇಂದ್ರ ಕ್ರೀಡಾ ಇಲಾಖೆಯನ್ನು ತಬ್ಬಿಬ್ಬುಗೊಳಿಸಿದೆ.
ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ನಾಡಾದ ಮಹಾ ನಿರ್ದೇಶಕ ಮುಕುಲ್ ಚಟರ್ಜಿ, 'ವಿಶ್ವ ಉದ್ದೀಪನಾ ಮದ್ದು ನಿಗ್ರಹ ದಳ (ವಾಡಾ)ದ ನಿಯಮಗಳ ಪ್ರಕಾರ, ಕ್ರೀಡಾಪಟುವೊಬ್ಬನನ್ನು ಪಂದ್ಯಾವಳಿಗೆ ಸಂದರ್ಭದಲ್ಲಿ ಮಾತ್ರ ಉದ್ದೀಪನಾ ಮದ್ದು ಪರೀಕ್ಷೆಗೊಳಪಡಿಸುವ ನಿಯಮವಿದೆ. ಆದರೆ, ಇದೀಗ ಕೇಂದ್ರ ಕ್ರೀಡಾ ಇಲಾಖೆಯ ಸೂಚನೆ ನಮ್ಮ ನೀತಿ ಸಂಹಿತೆಯನ್ನು ಮೀರುವುದರಿಂದ ಸದ್ಯಕ್ಕೆ ವಿಜೇಂದರ್ ಅವರ ಪರೀಕ್ಷೆ ನಡೆಸಲು ಸಾಧ್ಯವಿಲ್ಲ' ಎಂದು ಹೇಳಿದರು.
ಆದರೆ, ಕೇಂದ್ರ ಕ್ರೀಡಾ ಇಲಾಖೆಯು ತನಗೆ ನೀಡಿರುವ ಸೂಚನಾ ಪತ್ರದಲ್ಲಿ ವಿಜೇಂದರ್ ಪರೀಕ್ಷೆಗೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲವಾದ್ದರಿಂದ ವಾಡಾದೊಂದಿಗೆ ಈ ವಿಷಯವನ್ನು ಚರ್ಚಿಸಿ, ನಂತರ ವಿಜೇಂದರ್ ಪರೀಕ್ಷೆ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಮುಕುಲ್ ಹೇಳಿದ್ದಾರೆ.
ನಾಡಾದ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕ್ರೀಡಾ ಇಲಾಖೆಯ ಕಾರ್ಯದರ್ಶಿ ಪಿ.ಕೆ. ದೇಬ್, 'ವಿಜೇಂದರ್ ಸಿಂಗ್ ವಿಚಾರದಲ್ಲಿ ವಾಡಾ ನೀಡಿರುವ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ಕುರಿತಂತೆ ಲಿಖಿತ ರೂಪದಲ್ಲಿ ವಾಡಾ, ಕೇಂದ್ರ ಸರ್ಕಾರಕ್ಕೆ ತನ್ನ ಅಭಿಪ್ರಾಯವನ್ನು ತಿಳಿಸಬೇಕಿದೆ. ವಾಡಾದಿಂದ ಪತ್ರ ಬಂದ ಮೇಲಷ್ಟೇ ನಾವು ಮುಂದಿನ ನಿರ್ಧಾರದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ' ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


