ಕ್ರೀಡೆ

ಟಿ20: ಭಾರತ ವನಿತೆಯರಿಗೆ ಜಯ

Published On :

ವಡೋದರಾ: ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ತೋರಿ ಭಾರಿ ಮುಖಭಂಗ ಅನುಭವಿಸಿದ್ದ ಭಾರತ ವನಿತೆಯರ ತಂಡ, ವಿಶ್ವಕಪ್ ನಂತರ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 49 ರನ್‌ಗಳ ಭರ್ಜರಿ ಜಯ ಸಾಧಿಸಿತು.
ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದಿತಾದರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಭಾರತಕ್ಕೆ ಬಿಟ್ಟುಕೊಟ್ಟಿತ್ತು. ಈ ಅವಕಾಶವನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ಭಾರತ ವನಿತೆಯರು ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 143ರನ್ ಕಲೆಹಾಕಿತು.
ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪೂನಂ ರೌತ್ ಹಾಗೂ ತಿರುಷ್ಕಾಮಿನಿ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುವ ಮೂಲಕ ಬಾಂಗ್ಲಾ ವನಿತೆಯರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 17.5 ಓವರ್‌ಗಳಿಗೆ 130ರನ್‌ಗಳಿಸಿದರು. ಈ ವೇಳೆ 57 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನೊಂದಿಗೆ 56ರನ್‌ಗಳಿಸಿದ್ದ ತಿರುಷ್ಕಾಮಿನಿ ಸಲ್ಮಾ ಖತುನ್ ಎಸೆತದಲ್ಲಿ ಬೌಲ್ಡ್ ಆದರು.
ಇದಾದ ಕೆಲವೇ ಹೊತ್ತಿನಲ್ಲಿ 56 ಎಸೆತಗಳಲ್ಲಿ 10 ಬೌಡರಿಗಳನ್ನು ಹೊಡೆದು 75 ರನ್‌ಗಳಿಸಿದ್ದ ಪೂನಂ ರೌತ್ ಸಲ್ಮಾ ಖತುನ್ ಎಸೆತದಲ್ಲಿ ಸ್ಟಂಪ್ ಔಟಾದರು. ನಂತರ ತಂಡದ ಮೊತ್ತ 142ರನ್ ಆಗಿದ್ದಾಗ 3ರನ್‌ಗಳಿಸಿದ್ದ ನಾಯಕ ಹರ್ಮನ್‌ಪ್ರೀತ್ ಸ್ಟಂಪ್ ಔಟಾದರು.
ಭಾರತ ವನಿತೆಯರು ನೀಡಿದ ಸವಾಲನ್ನು ಬೆನ್ನಟ್ಟಿದ ಬಾಂಗ್ಲಾ ವನಿತೆಯರು 20 ಓವರ್‌ಗಳಲ್ಲಿ 94ರನ್ ಕಲೆಹಾಕಿದರು.
ಆರಂಭಿಕರಾಗಿ ಕಣಕ್ಕಿಳಿದ ಶಹನಾಜ್ ಪರ್ವಿನ್ 13ರನ್ ಗಳಿಸಿ ರನೌಟ್ ಆದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ಫರ್ಜಾನಾ ಹಕ್ 9 ರನ್‌ಗಳಸಿದ್ದಾಗ ಶರ್ಮಾ ಎಸೆತದಲ್ಲಿ ಬೌಲ್ಡ್ ಆದರು.
ಈ ವೇಳೆ ಏಕಾಂಗಿಯಾಗಿ ಹೋರಾಟ ನಡೆಸಿದ ಬಾಂಗ್ಲಾ ನಾಯಕಿ ಸಲ್ಮಾ ಖತುನ್ 43 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ ಅಜೇಯ 49 ರನ್‌ಗಳಿಸಿದರು. ಬಾಂಗ್ಲಾದ ಯಾವ ಆಟಗಾರ್ತಿಯೂ ಸಲ್ಮಾಗೆ ಉತ್ತಮ ಸಾಥ್ ನೀಡದ ಕಾರಣ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 94 ರನ್‌ಗಳನ್ನಷ್ಟೇ ಕಲೆ ಹಾಕಿತು.

ಸಂಕ್ಷಿಪ್ತ ಸ್ಕೋರ್
ಭಾರತ 143/3 (20 ಓವರ್)
ಪೂನಂ ರೌತ್ 75, ತಿರುಷ್ಕಾಮಿನಿ 56
ಬೌಲಿಂಗ್: ಸಲ್ಮಾ ಖತುನ್ 12/3
ಬಾಂಗ್ಲಾದೇಶ 94/7 (20 ಓವರ್)
ಸಲ್ಮಾ ಖತುನ್ ಅಜೇಯ 49, ಪವಿರ್ನ್ 13
ಬೌಲಿಂಗ್: ನಿರಂಜನಾ 17/1, ಎಕ್ತಾ ಬಿಷ್ತ್ 17/1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.