ಕ್ರೀಡೆ

ಪ್ರಕರಣಕ್ಕೆ ಹೊಸ ತಿರುವು ?

Published On :

ನವದೆಹಲಿ: ವಿಜೇಂದರ್ ಸಿಕ್ಕಿಬಿದ್ದಿರುವ ಹೆರಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ದಿನೇಶ್ ಎಂಬ ಮತ್ತೊಬ್ಬ ಬಾಕ್ಸರ್ ಹೇಳಿಕೆ ನೀಡಿದ್ದು, 'ಇಡೀ ಪ್ರಕರಣ ಪೊಲೀಸರ ಕುತಂತ್ರ ಎಂದು ಹೇಳಿದ್ದಾರೆ. ವಿಜೇಂದರ್ ಅವರನ್ನು ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ಸಿಲುಕಿಸಲಾಗಿದೆ ಎಂಬರ್ಥದ ಹೇಳಿಕೆ ನೀಡಿರುವ ದಿನೇಶ್, ಪ್ರಕರಣಕ್ಕೆ ಮತ್ತೊಂದು ತಿರುವು ತಂದಿದ್ದಾರೆ.
ಯಾರೀತ ದಿನೇಶ್?: ಓರ್ವ ಬಾಕ್ಸರ್ ಕೂಡಾ ಆಗಿರುವ ದಿನೇಶ್ ಕುಮಾರ್, ವಿಜೇಂದರ್ ಅವರ ಸ್ನೇಹಿತರಲ್ಲೊಬ್ಬ. ತಿಂಗಳ ಹಿಂದೆ ವಿಜೇಂದರ್ ಅವರ ಕಾರಿನಲ್ಲಿ ಹೆರಾಯಿನ್ ಪತ್ತೆಯಾದ ದಿನದಂದು, ಬಾಕ್ಸರ್‌ಗಳಾದ ರಾಮ್‌ಸಿಂಗ್, ದಿನೇಶ್ ಹಾಗೂ ಮತ್ತೊಬ್ಬ ಬಾಕ್ಸರ್ ಬಂಟಿ ಅವರನ್ನು ಪೊಲೀಸರು ಬಂಧಿಸಿದ್ದರು.
ದಿನೇಶ್ ಹೇಳೋದೇನು?: ದಿನೇಶ್ ಹೇಳುವ ಪ್ರಕಾರ, ಹೆರಾಯಿನ್ ಪತ್ತೆಯಾದ ರಾತ್ರಿ, ದಿನೇಶ್, ಬಂಟಿ ಹಾಗೂ ರಾಮ್ ಸಿಂಗ್ ಅವರು ಫತೇಪುರ್ ಸಾಹಿಬ್ ಪೊಲೀಸ್ ಠಾಣೆಗೆ ಪೊಲೀಸರೊಂದಿಗೆ ತೆರಳಿದರು. ಕೆಲ ನಿಮಿಷಗಳ ಕಾಲ ಈ ಮೂವರನ್ನೂ ತನಿಖೆಗೊಳಪಡಿಸಿದ ಪೊಲೀಸರು, ರಾಮ್‌ಸಿಂಗ್ ಹಾಗೂ ಹೆರಾಯಿನ್ ಇದ್ದ ಕಾರನ್ನು ತಮ್ಮಲ್ಲೇ ಬಿಟ್ಟು ಹೋಗುವಂತೆ ದಿನೇಶ್ ಹಾಗೂ ಬಂಟಿಗೆ ಸೂಚಿಸಿದ್ದಾರೆ.
ಆದರೆ, ಕಾರು ತಮ್ಮದಲ್ಲವೆಂದೂ, ಹಾಗಾಗಿ ಕಾರನ್ನು ಪಟಿಯಾಲಾಕ್ಕೆ ವಾಪಸ್ ತೆಗೆದುಕೊಂಡು ಹೋಗಲೇಬೇಕೆಂದು ದಿನೇಶ್, ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಅವರ ಮನವಿಗೆ ಸಮ್ಮತಿಸದ ಪೊಲೀಸರು ಕಾರನ್ನು ಪೊಲೀಸ್ ಠಾಣೆಯ ಮುಂಭಾಗದಲ್ಲೇ ಬಿಡುವಂತೆ ಕಟ್ಟುನಿಟ್ಟಾಗಿ ಹೇಳಿದ್ದಾರೆ. ದಿನೇಶ್ ಅವರು ಕಾರನ್ನು ಪೊಲೀಸ್ ಠಾಣೆ ಬಳಿಯೇ ಬಿಟ್ಟು ಬಂಟಿಯನ್ನು ಕರೆದುಕೊಂಡು ಮನೆಗೆ ಹಿಂದಿರುಗಿದ್ದಾರೆ.
ಆದರೆ, ಮರುದಿನ ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ ಕಾರು ಝೀರಕ್‌ಪುರ ಬಳಿ ವಿಜೇಂದರ್ ನಿವಾಸದ ಬಳಿ ಪತ್ತೆಯಾಗಿತ್ತೆಂದು ಹೇಳಲಾಗಿತ್ತು. ಇದು ಶುದ್ಧ ಸುಳ್ಳು  ಎಂದು ದಿನೇಶ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.