ಕ್ರೀಡೆ

ಮೂರನೇ ಸುತ್ತಿಗೆ ಗುರುಸಾಯಿ

Published On :

ಬೆಂಗಳೂರು: ಭಾರತದ ಶಟ್ಲರ್ ಗುರುಸಾಯಿ ದತ್ ಅವರು ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಪಂದ್ಯಾವಳಿಯ ಪುರುಷರ ವಿಭಾಗದ ಮೂರನೇ ಸುತ್ತನ್ನು ಪ್ರವೇಶಿಸಿದ್ದಾರೆ. ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು, ಥಾಯ್ಲೆಂಡ್‌ನ ಸುಪ್ಪನ್ಯು ಅವಿಹಿಂಗ್‌ಸ್ಯಾನನೋನ್ ಅವರನ್ನು 21-14, 18-21, 21-19 ಅಂತರದಲ್ಲಿ ಸೋಲಿಸಿದರು.
ಆದರೆ, ಪಂದ್ಯಾವಳಿಯಲ್ಲಿ ಮೊದಲ ಸುತ್ತಿನಲ್ಲಿ ಜಯಗಳಿಸಿ, ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದ ಭಾರತದ ಮತ್ತಿತರ ಆಟಗಾರರಾದ ಅಜಯ್ ಜಯರಾಮ್ ಸೋಲು ಕಂಡು ನಿರಾಸೆಗೊಳಿಸಿದರು. ಬುಧವಾರ ನಡೆದ ಪಂದ್ಯದಲ್ಲಿ ಅವರು, ದಕ್ಷಿಣ ಕೊರಿಯಾದ ಡಾಂಗ್ ಕ್ಯುನ್ ಲೀ ಅವರ ವಿರುದ್ಧ 24-26, 19-21 ಅಂತರದಲ್ಲಿ ಸೋಲಿಸಿದರು.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಬುಧವಾರ ಅಂತ್ಯಗೊಂಡಿತು. ಉದಯೋನ್ಮುಖ ಆಟಗಾರ್ತಿಯಾದ ಶಾರದಾ ಜಸ್ತಿ ಅವರು ಜಪಾನ್‌ನ ಯುಯ್ ಹಶಿಮೊಟೋ ಅವರ ವಿರುದ್ಧ 5-21, 13-21 ಅಂತರದಲ್ಲಿ ಪರಾಭವಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.