ಭಾರತಕ್ಕೆ ತಲೆ ಬಾಗಿದ ಬಾಂಗ್ಲಾ

ವಡೋದರಾ: ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ತಂಡವನ್ನು 49 ರನ್ಗಳ ಅಂತರದಿಂದ ಮಣಿಸಿದ್ದ ಭಾರತ ವನಿತೆಯರ ತಂಡ, ಗುರುವಾರ ನಡೆದ 2ನೇ ಟಿ20 ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಾಧಿಸಿದೆ.
ಬಾಂಗ್ಲಾ ವನಿತೆಯರ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತಾದರೂ ಬೃಹತ್ ಮೊತ್ತವನ್ನು ಕಲೆಹಾಕುವಲ್ಲಿ ವಿಫಲವಾಯಿತು. ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡಿತಾದರೂ ಕೇವಲ 88 ರನ್ ಕಲೆಹಾಕಿತು.
ಬಾಂಗ್ಲಾ ಪರ ಆರಂಭಿಕ ಬ್ಯಾಟರ್ಗಳಾಗಿ ಕಣಕ್ಕಿಳಿದ ಶಹನಾಜ್ ಪರ್ವಿನ್ ಹಾಗೂ ಫರ್ಜಾನ ಹಕ್ ತಂಡಕ್ಕೆ ನಿಧಾನಗತಿಯ ಆರಂಭ ನೀಡಿದರು. 9.3 ಓವರ್ಗಳನ್ನಾಡಿದ ಈ ಜೋಡಿ ಕೇವಲ 30 ರನ್ ಕಲೆಹಾಕಿತು. ಈ ವೇಳೆ ಎಕ್ತಾ ಬಿಷ್ತ್ ಬೌಲಿಂಗ್ನಲ್ಲಿ ಧ್ರುಬ್ಗೆ ಕ್ಯಾಚ್ ನೀಡಿದ ಶಹನಾಜ್ 15 ರನ್ಗಳಿಸಿ ಔಟಾದರು. ನಂತರ ಫರ್ಜಾನಾ ಹಕ್ 23 ಹಾಗೂ ಶುಖ್ತಾರ ರೆಹಮಾನ್ 29 ರನ್ಗಳಿಸಿ ಧ್ರುಬ್ ಅವರ ಉತ್ತಮ ಫೀಲ್ಡಿಂಗ್ನಲ್ಲಿ ರನೌಟ್ ಆದರು.
ನಂತರ ಬಂದ ರುಮನಾ 4 ರನ್ಗಳಿಸಿ ನಿರಂಜನಾ ಎಸೆತದಲ್ಲಿ ಬೌಲ್ಡ್ ಆದರು. ಅಂತಿಮವಾಗಿ ಅಜೇಯರಾಗಿ ಉಳಿದ ನಾಯಕಿ ಸಲ್ಮಾ ಖತುನ್ 14 ಹಾಗೂ ಲತಾ ಮೊಂದಲ್ 1 ರನ್ಗಳಿಸಿದರು.
ಬಾಂಗ್ಲಾ ನೀಡಿ ಸಾಧಾರಣ ಮೊತ್ತವನ್ನು ಬೆನ್ನಟಿದ ಭಾರತ ವನಿತೆಯರು 18 ಓವರ್ಗಳಲ್ಲಿ 91 ರನ್ಗಳಿಸಿತು. ಆರಂಭಿಕರಾಗಿ ಕಣಕ್ಕಿಳಿದ ಅನಘಾ ದೇಶಪಾಂಡೆ ಹಾಗೂ ಮೊನಾ ಮೇಶ್ರಮ್ ತಂಡಕ್ಕೆ 52 ರನ್ಗಳ ಉತ್ತಮ ಆರಂಭ ನೀಡಿದರು. ಈ ವೇಳೆ 28 ರನ್ಗಳಿಸಿದ್ದ ಅನಘಾ, ಪನ್ನಾ ಘೋಶ್ ಎಸೆತದಲ್ಲಿ ಶಹನಾಜ್ಗೆ ಕ್ಯಾಚ್ ನೀಡಿದರು. ನಂತರ ಬಂದ ಸ್ವಾಗತಿಕ ರಾತ್ 5 ರನ್ಗಳಿಸಿ ಪನ್ನಾ ಘೋಶ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ನಂತರ 29 ರನ್ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಮೊನಾ, ಶೊಹಾಲಿ ಅಕ್ತರ್ ಫೀಲ್ಡಿಂಗ್ನಲ್ಲಿ ರನೌಟ್ ಆದರು.
ನಂತರ ಅಂತಿಮವಾಗಿ ಅಜೇಯರಾಗುಳಿದ ನಾಯಕಿ ಹರ್ಮನ್ಪ್ರೀತ್ ಕೌರ್ 11, ಪೂನಂ ರೌತ್ 18 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ 88/4 (20 ಓವರ್)
ಶುಖ್ತಾರ ರೆಹಮಾನ್ 29, ಫರ್ಜಾನಾ ಹಕ್ 23
ಬೌಲಿಂಗ್: ನಿರಂಜನಾ 14/1, ಬಿಷ್ತ್ 11/1
ಭಾರತ 91/3 (20 ಓವರ್)
ಮೊನಾ ಮೇಶ್ರಮ್ 29, ಅನಘಾ ದೇಶಪಾಂಡೆ 28
ಬೌಲಿಂಗ್: ಪನ್ನಾ ಘೋಶ್ 18/2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


