ಕ್ರೀಡೆ

ಧೋನಿ ಟೀಂಗೆ ರಿಕಿ ಪಡೆ ಸವಾಲು

ಧೋನಿ ಟೀಂಗೆ ರಿಕಿ ಪಡೆ ಸವಾಲು
Published On :

ಚೆನ್ನೈ: ರಾಯಲ್ ಚಾಲೆಂಜರ್ಸ್ ವಿರುದ್ಧ ಕೊನೆ ಓವರ್‌ನಲ್ಲಿ ಸೋಲನುಭವಿಸಿದ ಮುಂಬೈ ಇಂಡಿಯನ್ಸ್ ತಂಡ ಶನಿವಾರ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಹಾಳೆಯ ಮೇಲೆ ಎರಡೂ ತಂಡಗಳ ಬಲಾಬಲ ಸಮನಾಗಿದ್ದು, ಅಭಿಮಾನಿಗಳು ರೋಚಕ ಪಂದ್ಯದ ನಿರೀಕ್ಷೆಯಲ್ಲಿದ್ದಾರೆ.
ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲನುಭವಿಸಿದ್ದರೂ, ಸಚಿನ್ ಹಾಗೂ ಪಾಂಟಿಂಗ್‌ರ ಉತ್ತಮ ಆರಂಭ, ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಆರ್ಭಟ, ಬುಮ್ರಾ, ಮಿಚೆಲ್ ಜಾನ್ಸನ್ ರ ಮಾರಕ ಬೌಲಿಂಗ್ ತಂಡಕ್ಕೆ ಸಿಕ್ಕ ಧನಾತ್ಮಕ ಅಂಶವಾಗಿದೆ. ಹೀಗಾಗಿ ತಂಡ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳಲು ಚಿಂತನೆ ನಡೆಸಿದೆ.
ಇತ್ತ ಎರಡು ಬಾರಿ ಚಾಂಪಿಯನ್ ಪಟ್ಟ ಹಾಗೂ ಎರಡು ಬಾರಿ ರನ್ನರ್ ಅಪ್ ಆಗಿರುವ ಚೆನ್ನೈ ಎಂದಿನಂತೆ ಉತ್ತಮ ಆಲ್ರೌಂಡರ್‌ಗಳನ್ನು ಹೊಂದಿದೆ. ಮೈಕ್ ಹಸ್ಸಿ, ಡ್ವೈನ್ ಬ್ರಾವೊ, ಡು ಪ್ಲೆಸಿಸ್, ಆಲ್ಬಿ ಮಾರ್ಕೆಲ್ ಕ್ರಿಸ್ ಮೊರಿಸ್‌ರಂತಹ ವಿದೇಶಿ ಆಟಗಾರರೊಂದಿಗೆ, ಮುರಳಿ ವಿಜಯ್, ಧೋನಿ, ರೈನಾ, ಆರ್.ಅಶ್ವಿನ್, ರವೀಂದ್ರ ಜಡೇಜಾರಂತಹ ದೇಶಿ ಟಿ20 ಸ್ಪೆಷಲಿಸ್ಟ್‌ಗಳನ್ನು ಹೊಂದಿದ್ದು ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ.
ಒಟ್ಟಿನಲ್ಲಿ ವಿಶ್ವದ ಶ್ರೇಷ್ಠ ನಾಯಕರಲ್ಲಿ ಸ್ಥಾನ ಪಡೆದಿರುವ ರಿಕಿ ಪಾಂಟಿಂಗ್, ಧೋನಿ ನೇತೃತ್ವದ ತಂಡಗಳು ಮುಖಾಮುಖಿಯಾಗಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.