ಕ್ರೀಡೆ

ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಐತಿಹಾಸಿಕ ಚಿನ್ನ

ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಐತಿಹಾಸಿಕ ಚಿನ್ನ
Published On :

ನವದೆಹಲಿ: ಕೊರಿಯಾದ ಚಾಂಗ್‌ವಾನ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಶೂಟರ್ ರಾಹಿ ಸರ್ನೋಬತ್ ಅವರು ಶುಕ್ರವಾರ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಶುಕ್ರವಾರ ನಡೆದ 25 ಮೀ. (ಮಹಿಳೆಯರ ವಿಭಾಗ) ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅವರು, ಸ್ಥಳೀಯ ಪ್ರತಿಭೆ ಕಿಯೋನೇಜ್ ಕಿಮ್ ಅವರನ್ನು 8-6 ಅಂತರದಲ್ಲಿ ಹಿಂದಿಕ್ಕಿ ಚಿನ್ನದ ಗೌರವಕ್ಕೆ ಪಾತ್ರರಾದರಲ್ಲದೇ, ಐಎಸ್‌ಎಸ್‌ಎಫ್ ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ಪ್ರಪ್ರಥಮ ಭಾರತೀಯ ಎಂಬ ಗೌರವಕ್ಕೂ ಪಾತ್ರರಾದರು. ಈ ಜಯದ ಮೂಲಕ ಅವರೀಗ ಭಾರತದ ಇನ್ನಿತರ ಶೂಟರ್‌ಗಳಿರುವ ಎಲೈಟ್ ಗ್ರೂಪ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಅಂಜಲಿ ಭಾಗವತ್, ಗಗನ್ ನಾರಂಗ್, ಸಂಜೀವ್ ರಜಪೂತ್, ರಾಜ್ಯವರ್ಧನ್ ಸಿಂಗ್ ರಾಥೋಡ್, ರಂಜನ್ ಸಿಂಗ್ ಸೋಧಿ ಹಾಗೂ ಮಾನವ್ಜೀತ್ ಸಿಂಗ್ ಸಂಧು ಅವರು ಈವರೆಗೆ ಎಲೈಟ್ ಗ್ರೂಪ್‌ನಲ್ಲಿ ಸ್ಥಾನ ಪಡೆದಿರುವ ಭಾರತೀಯ ಶೂಟರ್‌ಗಳಾಗಿದ್ದಾರೆ.
ಸ್ಪರ್ಧೆಯ ಬಳಿಗೆ ಮಾಧ್ಯಮಗಳೊಂದಿಗೆ ಅಭಿಪ್ರಾಯ ಹಂಚಿಕೊಂಡ ರಾಹಿ, 'ನನ್ನ ಜೀವನದ ಕನಸು ಇಂದು ನನಸಾಗಿದೆ. ಕಳೆದ ಕೆಲವು ತಿಂಗಳಿನಿಂದ ಈ ಪಂದ್ಯಾವಳಿಗಾಗಿ ತಯಾರಿ ನಡೆಸಿದ್ದೆ. ನನ್ನ ಗುರು ಅನಾಟೋಲಿ ಪುದ್ದುನ್ಬಿ ಅವರು ನನಗೆ ಸೂಕ್ತ ತರಬೇತಿ ನೀಡಿದರು. ನನ್ನ ದೀರ್ಘಾವಧಿಯ ಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದೆ' ಎಂದು ಅವರು ತಿಳಿಸಿದರು.
ಪಂದ್ಯಾವಳಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ್ದ ರಾಹಿ, ಕ್ವಾರ್ಟರ್ ಫೈನಲ್ ಹಂತದಲ್ಲಿ 585 ಅಂಕಗಳನ್ನು ಪಡೆದುಕೊಂಡು ನಾಲ್ಕನೇ ಸ್ಥಾನ ಪಡೆದಿದ್ದರು. ಆನಂತರ, ಸೆಮಿಫೈನಲ್ ಹಂತದಲ್ಲಿ 15 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಗಳಿಸುವ ಮೂಲಕ, ಫೈನಲ್‌ಗೆ ಕಾಲಿಟ್ಟಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.