ವಾರಿಯರ್ಸ್ಗೆ ಕಿಂಗ್ಸ್ ಸೆಡ್ಡು
ಪುಣೆ: ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲೇ 22 ರನ್ಗಳ ಸೋಲು ಕಂಡಿರುವ ಪುಣೆ ವಾರಿಯರ್ಸ್ ತಂಡ, ಭಾನುವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.
ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ, ಬೌಲಿಂಗ್ನಲ್ಲಿ ಮಿಂಚಿದ್ದ ಪುಣೆ ತಂಡ, ಎದುರಾಳಿ ತಂಡವನ್ನು 126 ರನ್ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಆದರೆ, ತಾನು ಚೇಸಿಂಗ್ಗೆ ಇಳಿದಾಗ ಮಾತ್ರ 104 ರನ್ಗಳಿಗೆ ಆಲೌಟ್ ಆಯಿತು. ಹಾಗಾಗಿ, ಪಂಜಾಬ್ ವಿರುದ್ಧದ ಪಂದ್ಯದಲ್ಲಿ, ಪುಣೆ ತನ್ನ ಬ್ಯಾಟಿಂಗ್ ವಿಭಾಗವನ್ನು ಉತ್ತಮಪಡಿಸಿಕೊಳ್ಳುವ ಅನಿವಾರ್ಯತೆಯಿದೆ.
ಟೀಂ ಇಂಡಿಯಾದ ಹಿರಿಯ ಆಟಗಾರ ಯುವರಾಜ್ ಸಿಂಗ್ ಅವರು ಆ ತಂಡದ ಪ್ರಮುಖ ಆಲ್ರೌಂಡರ್. ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ವಿಫಲವಾಗಿದ್ದ ಯುವಿ, ಬೌಲಿಂಗ್ನಲ್ಲಿ ಎರಡು ಓವರ್ ಮಾಡಿ 8 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಆದರೆ, ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅವರು, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದರೆ, ತಂಡಕ್ಕೆ ಉತ್ತಮ ರೀತಿಯಲ್ಲಿ ನೆರವಾಗಬಹುದು. ಆದರೆ, ಮೈಕಲ್ ಕ್ಲಾಕ್ ಅವರ ಅನುಪಸ್ಥಿತಿ ತಂಡದ ಬ್ಯಾಟಿಂಗ್ ವಿಭಾಗದ ಮೇಲೆ ಪರಿಣಾಮ ಬೀರಿದೆ.
ಇನ್ನು, ತಂಡದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಅಶೋಕ್ ದಿಂಡಾ ಹಾಗೂ ನಾಯಕ ಆಂಗೆಲೋ ಮ್ಯಾಥ್ಯೂಸ್, ಮಾರ್ಲೊನ್ ಸ್ಯಾಮ್ಯುಯೆಲ್ಸ್ ಇದ್ದಾರೆ.
ಮತ್ತೊಂದು ಕಡೆ, ಪಂಜಾಬ್ ತಂಡ ಗೆಲುವಿನ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ತನ್ನ ಅಭಿಯಾನವನ್ನು ಆರಂಭಿಸುವ ಇರಾದೆ ಹೊಂದಿದೆ. ಕಳೆದ ಐದೂ ಐಪಿಎಲ್ಗಳಲ್ಲಿ ಸೋಲಿನ ಮೂಲಕವೇ ತನ್ನ ಅಭಿಯಾನ ಆರಂಭಿಸಿದ್ದ ಆ್ಯಡಮ್ ಗಿಲ್ಕ್ರಿಸ್ಟ್ ನಾಯಕತ್ವದ ಪಡೆಗೆ, ಈ ಬಾರಿ ಹಳೇ ಚಾಳಿಯನ್ನು ಕೈಬಿಡುವ ತವಕವಿದೆ.
ಬ್ಯಾಟಿಂಗ್ ವಿಭಾಗದಲ್ಲಿ, ಶಾನ್ ಮಾರ್ಷ್ ಅವರ ಅನುಪಸ್ಥಿತಿಯಿದ್ದರೂ, ಗಿಲ್ಕ್ರಿಸ್ಟ್ ಸೇರಿದಂತೆ, ಡೇವಿಡ್ ಹಸ್ಸಿ, ಲ್ಯೂಕ್ ಪೊಮೆರ್ಬ್ಯಾಚ್, ಆಲ್ರೌಂಡರ್ ಅಜರ್ ಮಹಮೂದ್ ಹಾಗೂ ಡಿಮಿಟ್ರಿ ಮ್ಯಾಸ್ಕನ್ಹ್ಯಾಸ್ ಅವರಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ, ರಿಯಾನ್ ಹ್ಯಾರಿಸ್, ಮನ್ಪ್ರೀತ್ ಗೋನಿ ಹಾಗೂ ಪ್ರವೀಣ್ ಕುಮಾರ್, ಫಿಯೂಶ್ ಚಾವ್ಲಾ ಇದ್ದಾರೆ.
ಸಂಭಾವ್ಯ ತಂಡಗಳು
ಪುಣೆ ವಾರಿಯರ್ಸ್: ಏಕಲವ್ಯ ದ್ವಿವೇದಿ, ಉದಿತ್ ಬಿರ್ಲಾ, ಮೈಕಲ್ ಕ್ಲಾರ್ಕ್, ಅಶೋಕ್ ದಿಂಡಾ, ರೈಫಿ ಗೊಮೇಜ್, ಹರ್ಪ್ರೀತ್ ಸಿಂಗ್, ಧೀರಜ್ ಜಾದವ್, ಭುವನೇಶ್ವರ್ ಕುಮಾರ್, ಅನುಸ್ತುಪ್ ಮಜುಂಮ್ದಾರ್, ಮಿಥುನ್ ಮನಾಸ್, ಮಿಚ್ಚೆಲ್ ಮಾರ್ಷ್, ಆ್ಯಂಜಲೋ ಮ್ಯಾಥ್ಯೂಸ್, ಅಜಂತಾ ಮೆಂಡೀಸ್, ಅಲಿ ಮುರ್ತಾಜಾ, ಅಭಿಶೇಕ್ ನಾಯರ್, ಈಶ್ವರ್ ಪಾಂಡೆ, ಮನೀಶ್ ಪಾಂಡೆ, ವೇಯ್ನ್ ಪಾರ್ನೆಲ್, ಪರ್ವೆಜ್ ರಸೂಲ್, ಮಹೇಶ್ ರಾವತ್, ಕೇನ್ ರಿಚರ್ಡ್ಸನ್, ಮರ್ಲಾನ್ ಸ್ಯಾಮ್ಯೂಯೆಲ್ಸ್, ರಾಹುಲ್ ಶರ್ಮಾ, ಸ್ಟೀವ್ ಸ್ಮಿತ್, ಟಿ.ಸುಮನ್, ತಮಿಮ್ ಇಕ್ಬಾಲ್, ರಾಸ್ ಟೇಲರ್, ಕೃಷ್ಣಕಾಂತ್ ಉಪಾದ್ಯಾಯ್, ರಾಬಿನ್ ಉತ್ತಪ್ಪ, ಶ್ರೀಕಾಂತ್ ವಾ, ಲ್ಯೂಕು ರೈಟ್, ಯುವರಾಜ್ ಸಿಂಗ್.
ಕಿಂಗ್ಸ್ ಇಲೆವೆನ್ ಪಂಜಾಬ್: ಆ್ಯಡಮ್ ಗಿಲ್ಕ್ರಿಸ್ಟ್, ಶಾನ್ ಮಾರ್ಷ್, ಡೇವಿಡ್ ಹಸ್ಸಿ, ಡೇವಿಡ್ ಆ್ಯಂಡ್ರೂ ಮಿಲ್ಲರ್, ರಿಯಾನ್ ಹ್ಯಾರಿಸ್, ಡಿಮಿಟ್ರಿ ಮಸ್ಕೆರೆನ್ಹ್ಯಾಸ್, ಅಜರ್ ಮೆಹಮೂದ್, ಪಿಯೂಶ್ ಚಾವ್ಲಾ, ಪ್ರವೀಣ್ ಕುಮಾರ್, ಮನದೀಪ್ ಸಿಂಗ್, ಸಿದ್ದಾರ್ಥ್ ಚಿಂಟಿಸ್, ನಿತಿನ್ ಸೈನಿ, ಸನ್ನಿ ಸಿಂಗ್, ಭಾರ್ಗವ್ ಭಟ್, ಬಿಪುಲ್ ಶರ್ಮಾ, ಪಾಲ್ ಚಂದ್ರಶೇಖರ್ ವಾಲ್ತಾಟಿ, ಲ್ಯೂಕ್ ಪ್ಯುಮರ್ಬ್ಯಾಚ್, ಮನ್ಪ್ರೀತ್ ಸಿಂಗ್ ಗೋನಿ, ಗುರ್ಕೀರತ್ ರೂಪಿಂದರ್ ಸಿಂಗ್, ಪರ್ವಿಂದರ್ ಆವಾನಾ, ರಾಜಗೋಪಾಲ್ ಸತೀಶ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

