ತವರಿನಲ್ಲೂ ಸೋತ ಡೆವಿಲ್ಸ್

ನವದೆಹಲಿ: ಐಪಿಎಲ್ನ ಆರಂಭಿಕ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋಲನುಭವಿಸಿದ್ದ ಡೆಲ್ಲಿ ಡೇರ್ಡೆವಿಲ್ಸ್ ತಂಡ ಶನಿವಾರ ತವರಿನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ 5 ರನ್ಗಳ ಸೋಲನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 165 ರನ್ ಕಲೆ ಹಾಕಿತು. ಈ ಸವಾಲಿನ ಮೊತ್ತವನ್ನು ಬೆನ್ನಟಿದ ಡೆಲ್ಲಿ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 ರನ್ಗಳಿಸಲಷ್ಟೇ ಶಕ್ತವಾಯಿತು.
ರಾಜಸ್ಥಾನ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕುಸಾಲ್ ಪೆರೇರಾ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಕೇವಲ 22 ರನ್ಗಳ ಆರಂಭ ನೀಡಿದರು. ಈ ವೇಳೆ 14 ರನ್ಗಳಿಸಿದ್ದ ಪೆರೇರಾ, ಯಾದವ್ ಎಸೆತದಲ್ಲಿ ಪಠಾಣ್ಗೆ ಕ್ಯಾಚ್ ನೀಡಿದರು. ನಂತರ ಬಂದ ದ್ರಾವಿಡ್, ರಹಾನೆ ಜತೆಗೂಡಿ 2ನೇ ವಿಕೆಟ್ಗೆ 65 ರನ್ಗಳ ಜತೆಯಾಟ ನೀಡಿ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು.
ಈ ವೇಳೆ ನದೀಂ ಎಸೆತದಲ್ಲಿ ಕಾಟ್ ಅಂಡ್ ಬೌಲ್ ಆದ ರಹಾನೆ ನಿರಾಸೆ ಮೂಡಿಸಿದರು. ಈ ವೇಳೆ ಬಂದ ಸ್ಟುವರ್ಟ್ ಬಿನ್ನಿ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿ 40 ರನ್ಗಳಿಸಿದರು.
ಇತ್ತ ಸಮಯೋಜಿತ ಬ್ಯಾಟಿಂಗ್ ಮುಂದುವರಿಸಿದ ರಾಹುಲ್ ದ್ರಾವಿಡ್ ಕೂಡ 51 ಎಸೆತಗಳಲ್ಲಿ 65 ರನ್ಗಳಿಸಿದರು. ದ್ರಾವಿಡ್ರ ಈ ಮೊತ್ತದಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ಗಳು ಸೇರಿದ್ದವು. ಈ ಹಂತದಲ್ಲಿ ಬೃಹತ್ ಮೊತ್ತ ಪೇರಿಸುವ ಅವಕಾಶ ಪಡೆದಿದ್ದ ರಾಜಸ್ಥಾನ್ ತಂಡ ದ್ರಾವಿಡ್ ವಿಕೆಟ್ ನಂತರ ಸತತವಾಗಿ ವಿಕೆಟ್ ಕಳೆದುಕೊಂಡಿತು. ಈ ಕಾರಣದಿಂದ ರಾಜಸ್ಥಾನ್ ತಂಡ 165 ರನ್ಗಳ ಸವಾಲಿನ ಮೊತ್ತವನಷ್ಟೇ ಪೇರಿಸಿತು.
ನಂತರ ಈ ಗುರಿಯನ್ನು ಬೆನ್ನಟಿದ ಡೆಲ್ಲಿ ಡೇರ್ಡೆವಿಲ್ಸ್ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಉನ್ಮುಕ್ತ್ ಚಾಂದ್ ಹಾಗೂ ಡೇವಿಡ್ ವಾರ್ನರ್ 39 ರನ್ಗಳ ಜತೆಯಾಟವಾಡಿದರು. ಈ ವೇಳೆ 23 ರನ್ಗಳಿಸಿದ್ದ ಚಾಂದ್, ಶ್ರೀಶಾಂತ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಜಯವರ್ಧನೆ ಕೇವಲ 19 ರನ್ಗಳಿಸಿದರಾದರೂ, ವಾರ್ನರ್ ಜತೆಗೂಡಿ 41 ರನ್ ಜತೆಯಾಟವಾಡಿದರು. ಈ ವೇಳೆ ರಾಹುಲ್ ಶುಕ್ಲಾ ಎಸೆತದಲ್ಲಿ ಕ್ಯಾಚ್ ನೀಡಿದ ಜಯವರ್ಧನೆ ತಮ್ಮ ಇನಿಂಗ್ಸ್ ಮುಗಿಸಿದರು.
ನಂತರ ಬಂದ ಜುನೇಜಾ, ವಾರ್ನರ್ ಜತೆಗೂಡಿ ತಂಡಕ್ಕೆ 67 ರನ್ಗಳ ಉತ್ತಮ ಜತೆಯಾಟ ನೀಡಿದರು. ಈ ವೇಳೆ ಡೆಲ್ಲಿ ಗೆಲುವಿನ ದಡ ಸೇರುವ ಸಾಧ್ಯತೆಗಳು ದಟ್ಟವಾಗುತ್ತಾ ಸಾಗಿತ್ತು.
ಆದರೆ 20 ರನ್ಗಳಿಸಿದ್ದ ಜುನೇಜಾ, ಕೂಪರ್ ಎಸೆತದಲ್ಲಿ ಹಾಡ್ಜ್ಗೆ ಕ್ಯಾಚ್ ನೀಡಿದರು. ಆನಂತರ ಬಂದ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೆ ಒಬ್ಬರಂತೆ ಔಟಾಗುವ ಮೂಲಕ ತಂಡದ ಸೋಲಿಗೆ ಕಾರಣರಾದರು.
ವ್ಯರ್ಥವಾದ ವಾರ್ನರ್ ಆಟ: ಸ್ಪೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಡೆಲ್ಲಿ ತಂಡದ ಪರ ಉತ್ತಮ ಬ್ಯಾಟಿಂಗ್ ನಡೆಸಿದರು. ಕೇವಲ 56 ಎಸೆತಗಳನ್ನು ಎದುರಿಸಿದ ಇವರು 9 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿ 77 ರನ್ಗಳಿಸಿದರು. ಈ ವೇಳೆ ವಾರ್ನರ್, ಬ್ರಾಡ್ ಹಾಡ್ಜ್ ಅವರ ಚುರುಕಿನ ಫೀಲ್ಡಿಂಗ್ನಿಂದಾಗಿ ರನೌಟ್ ಆದರು. ಇದು ಪಂದ್ಯದ ಫಲಿತಾಂಶವನ್ನೆ ಬದಲಿಸಿತು.
ಸ್ಕೋರ್ ಬೋರ್ಡ್
ರಾಜಸ್ಥಾನ್ ರಾಯಲ್ಸ್ 165/7 (20 ಓವರ್)
ಪೆರೇರಾ ಸಿ ಪಠಾಣ್ ಬಿ ಯಾದವ್ 14 (12), ರಹಾನೆ ಸಿ ಮತ್ತು ಬಿ ನಧೀಂ 28 (24), ದ್ರಾವಿಡ್ ಸಿ ಜಯವರ್ಧನೆ ಬಿ ಯಾದವ್ 65 (51), ಬಿನ್ನಿ ಬಿ ಯಾದವ್ 40 (20), ಹಾಡ್ಜ್ ಸಿ ವಾರ್ನರ್ ಬಿ ಯಾದವ್ 5 (7), ಕೂಪರ್ ಸಿ ಯಾದವ್ ಬಿ ನೆಹ್ರಾ 2 (2), ಮನೇರಿಯಾ ಬಿ ನೆಹ್ರಾ 1 (2), ಶ್ರೀಶಾಂತ್ ಅಜೇಯ 0 (0), ಶುಕ್ಲಾ ಅಜೇಯ 1 (2). ಇತರೆ 9. ವಿಕೆಟ್ ಪತನ: 1-22, 2-87, 3-142, 4-161, 5-161, 6-164, 7-164
ಬೌಲಿಂಗ್: ಪಠಾಣ್ 4-0-31-0, ನೆಹ್ರಾ 4-0-35-2, ಯಾದವ್ 4-0-24-4 , ರಸ್ಸೆಲ್ 3-0-31-0, ನದೀಂ 4-0-22-1, ಬೋತಾ 1-0-19-0
ಡೆಲ್ಲಿ ಡೇರ್ಡೆವಿಲ್ಸ್ 160/6 (20 ಓವರ್)
ವಾರ್ನರ್ ರನೌಟ್ (ಹಾಡ್ಜ್) 77 (56), ಉನ್ಮುಕ್ತ್ ಚಾಂದ್ ಬಿ ಶ್ರೀಶಾಂತ್ 23 (19), ಜಯವರ್ಧನೆ ಸಿ ರಹಾನೆ ಬಿ ಶುಕ್ಲಾ 19 (16), ಜುನೇಜಾ ಸಿ ಹಾಡ್ಜ್ ಬಿ ಕೂಪರ್ 20 (18), ರಸ್ಸೆಲ್ ಬಿ ಕೂಪರ್ 7 (6), ಬೋತಾ ಎಲ್ಬಿಡಬ್ಲ್ಯೂ ಕೂಪರ್ 2 (3), ಪಠಾಣ್ ಅಜೇಯ 1 (1), ಓಜಾ ಅಜೇಯ 0 (1). ಇತರೆ 11
ವಿಕೆಟ್ ಪತನ: 1-39, 2-82, 3-149, 4-153, 5-159, 6-160
ಬೌಲಿಂಗ್: ಬದ್ರೀ 4-0-34-0, ಶ್ರೀಶಾಂತ್ 4-0-18-1, ತ್ರಿವೇದಿ 4-0-35-0, ಕೂಪರ್ 4-0-30-3, ಶುಕ್ಲಾ 3-0-27-1, ಬಿನ್ನಿ 1-0-11-0.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


