ಮುಂಬೈ ಇಂಡಿಯನ್ಸ್ಗೆ ರೋಚಕ ಜಯ
ಚೆನ್ನೈ: ಆರಂಭಿಕ ಪಂದ್ಯದಲ್ಲಿ ಕೊನೆ ಓವರ್ನಲ್ಲಿ ಸೋಲನುಭವಿಸಿದ್ದ ಮುಂಬೈ ಇಂಡಿಯನ್ಸ್ ತಂಡ, ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ 9 ರನ್ಗಳ ರೋಚಕ ಜಯ ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ಗಳಿಸಿತು.
ಆರಂಭಿಕರಾಗಿ ಕಣಕ್ಕಿಳಿದ ಸಚಿನ್ ಹಾಗೂ ರಿಕಿ ಪಾಂಟಿಂಗ್ ಕೇವಲ 3 ರನ್ ಪೇರಿಸಿದರು. ಈ ವೇಳೆ ಮೊದಲ ಎಸೆತದಲ್ಲಿ ಬೊಲಿಂಜರ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದ ಸಚಿನ್ ಮುಂಬೈ ಕುಸಿತಕ್ಕೆ ನಾಂದಿಯಾಡಿದರು.
ಸಚಿನ್ ನಂತರ ಪಾಂಟಿಂಗ್ 6, ಕಾರ್ತಿಕ್ 37, ಶರ್ಮಾ 8, ರಾಯುಡು 7, ಸ್ಮಿತ್ 3 ರನ್ಗಳಿಸಿ ಔಟಾದರು.
ಈ ವೇಳೆ ಜತೆಯಾದ ಪೊಲಾರ್ಡ್ ಹಾಗೂ ಹರ್ಭಜನ್ ಸಿಂಗ್ 7ನೇ ವಿಕೆಟ್ಗೆ ತಂಡಕ್ಕೆ 65 ರನ್ಗಳ ಜತೆಯಾಟ ನೀಡಿ ಆಧಾರವಾದರು.
ಪೊಲಾರ್ಡ್ ಅಜೇಯ 57 ರನ್ಗಳಿಸಿದರೆ, ಹರ್ಭಜನ್ ಅಜೇಯ 21 ರನ್ಗಳಿಸಿ ತಂಡ ಸವಾಲಿನ ಮೊತ್ತ ಪೇರಿಸಲು ಕಾರಣರಾದರು.
ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 139ರನ್ಗಳಿಸಿತು. ಈ ಮೂಲಕ ಚೆನ್ನೈ ತನ್ನ ಮೊದಲ ಪಂದ್ಯದಲ್ಲಿ 9 ರನಗಳ ಸೋಲನುಭವಿಸಿತು.
ಚೆನ್ನೈ ತಂಡದ ಪರ ಹಸ್ಸಿ 20, ವಿಜಯ್ 5, ರೈನಾ 10, ಬ್ರಾವೊ 10, ಬದ್ರಿನಾಥ್ 16 , ಜಡೇಜಾ 16 ರನ್ಗಳಿಸಿ ಔಟಾದರು. ನಂತರ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಹೋರಾಟವನ್ನು ಕೊನೆಯ ಓವರ್ವರೆಗೂ ನಡೆಸಿದರಾದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ.
ಧೋನಿ ಏಕಾಂಗಿ ಹೋರಾಟ: ಒಂದೆಡೆ ವಿಕೆಟ್ಗಳು ನಿರಂತರವಾಗಿ ಕಳೆದುಕೊಳ್ಳುತ್ತಿದ್ದರೆ ಇನ್ನೊಂದೆಡೆ ನಾಯಕ ಮಹೇಂದ್ರ ಸಿಂಗ್ ಧೋನಿ ಏಕಾಂಗಿ ಹೋರಾಟ ನಡೆಸಿದರು.
26 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಬಾರಿಸಿ 51 ರನ್ಗಳಿಸಿದರು.
ಸ್ಕೋರ್ ಬೋರ್ಡ್
ಮುಂಬೈ ಇಂಡಿಯನ್ಸ್ 148/6 (20 ಓವರ್)
ಪಾಂಟಿಂಗ್ ಸಿ ಅಶ್ವಿನ್ ಬಿ ರಜ್ಪೂತ್ 6 (10), ಸಚಿನ್ ಎಲ್ಬಿಡಬ್ಲೂ ಬಿ ನ್ಯಾನಿಸ್ 0 (1), ಕಾರ್ತಿಕ್ ಎಲ್ಬಿಡಬ್ಲೂ ಬಿ ಬ್ರಾವೊ 37 (25), ಶರ್ಮಾ ಸಿ ಧೋನಿ ಬಿ ಬ್ರಾವೊ 8 (10), ರಾಯುಡು ಸಿ ನ್ಯಾನಿಸ್ ಬಿ ಲಾಗ್ಲಿನ್ 7 (10), ಪೊಲಾರ್ಡ್ ಅಜೇಯ 57 (38), ಸ್ಮಿತ್ ಸಿ ಬ್ರಾವೊ ಬಿ ಅಶ್ವಿನ್ 3 (5), ಹರ್ಭಜನ್ ಅಜೇಯ 21 (21).
ಇತರೆ 9; ಬೌಲಿಂಗ್: ನ್ಯಾನಿಸ್ 4-0-18-1, ರಜ್ಪೂತ್ 3-0-25-1, ಬ್ರಾವೊ 4-0-44-2, ಲಾಗ್ಲಿನ್ 3-0-25-1, ಜಡೇಜಾ 2-0-12-0, ಅಶ್ವಿನ್ 4-0-21-1.
ಚೆನ್ನೈ ಸೂಪರ್ ಕಿಂಗ್ಸ್ 139/9 (20 ಓವರ್)
ಹಸ್ಸಿ ಬಿ ಹರ್ಭಜನ್ 20 (23), ವಿಜಯ್ ಬಿ ಪಟೇಲ್ 5 (8), ರೈನಾ ಸಿ ಪಾಂಟಿಂಗ್ ಬಿ ಜಾನ್ಸನ್ 10 (7), ಬ್ರಾವೊ ಸಿ ಕಾರ್ತಿಕ್ ಬಿ ಓಜಾ 10 (17), ಬದ್ರಿನಾಥ್ ಎಲ್ಬಿಡಬ್ಲೂ ಓಜಾ 16 (16), ಧೋನಿ ಸಿ ಪೊಲಾರ್ಡ್ ಬಿ ಮುನಾಫ್ 51 (26), ಜಡೇಜಾ ಬಿ ಪಟೇಲ್ 16 (11), ಅಶ್ವಿನ್ ಸಿ ಪೊಲಾರ್ಡ್ ಬಿ ಹರ್ಭಜನ್ 2 (5), ಲಾಗ್ಲಿನ್ ಬಿ ಪೊಲಾರ್ಡ್ 0 (1), ರಜಪೂತ್ ಅಜೇಯ 2, ನ್ಯಾನಿಸ್ ಅಜೇಯ 0 (0).
ಇತರೆ 7; ವಿಕೆಟ್ ಪತನ: 1-10, 2-30, 3-42, 4-58, 5-66
ಬೌಲಿಂಗ್: ಜಾನ್ಸನ್ 4-0-22-1, ಪಟೇಲ್ 4-0-29-3, ಹರ್ಭಜನ್ 3-0-31-2, ಓಜಾ 4-0-16-2, ಪೊಲಾರ್ಡ್ 4-0-40-1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

