ಕ್ರೀಡೆ

ಆರ್‌ಸಿಬಿಗೆ ಸೂಪರ್ ಸೋಲು

ಆರ್‌ಸಿಬಿಗೆ ಸೂಪರ್ ಸೋಲು
Published On :

ಹೈದರಾಬಾದ್: ಸೂಪರ್ ಓವರ್‌ನಲ್ಲಿ ರೋಚಕವಾಗಿ ಅಂತ್ಯಗೊಂಡ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ  5 ರನ್‌ಗಳ ಅಂತರದಿಂದ ಸೋಲನುಭವಿಸಿತು.     ಟಾಸ್ ಗೆದ್ದು  ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ ತಂಡ 8 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತು. ನಂತರ ಈ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ರ್ಸ್ ಹೈದರಾಬಾದ್ ತಂಡ 7 ವಿಕೆಟ್ ಕಳೆದುಕೊಂಡು 130 ರನ್ ಗಳಿಸುವ ಮೂಲಕ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು.
 ಹೀಗಾಗಿ ಪಂದ್ಯ ಸೂಪರ್ ಓವರ್‌ಗೆ ಜಾರಲು ಕಾರಣವಾಯಿತು.    ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಕ್ರೀಸ್ ಗೇಲ್ ಬೇಗನೆ ನಿರ್ಗಮಿಸುವ ಮೂಲಕ, ಭಾನುವಾರ ನಡೆದ ಐಪಿಎಲ್‌ನ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್‌ರೈಸರ್ಸ್‌ಗೆ  130 ರನ್‌ಗಳ ಸಾಧಾರಣ ಗುರಿ ನೀಡಿತು.
ಆರಂಭಿಕರಾಗಿ ಕಣಕ್ಕಿಳಿದ ಕ್ರಿಸ್ ಗೇಯ್ಲ್ ಹಾಗೂ ತಿಲಕರತ್ನೆ ದಿಲ್ಷಾನ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಕಳೆದ ಪಂದ್ಯದಲ್ಲಿ ಆರ್ಭಟಿಸಿದ್ದ ಕ್ರಿಸ್ ಗೇಯ್ಲ್ ಈ ಪಂದ್ಯದಲ್ಲಿ ಕೇವಲ 2 ಎಸೆತಗಳನ್ನು ಎದುರಿಸಿ 1 ರನ್‌ಗಳಿಸಿ ವಿಹಾರಿ ಎಸೆತದಲ್ಲಿ ಪಾರ್ಥೀವ್‌ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು.
ಈ ವೇಳೆ ದಿಲ್ಷಾನ್ ಕೂಡ ಕೇವಲ 5 ರನ್‌ಗಳಿಸಿ ಇಶಾಂತ್ ಶರ್ಮಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ನಾಯರ್ 9 ಎಸೆತಗಳಲ್ಲಿ 9 ರನ್‌ಗಳಿಸಿ ಮಿಶ್ರಾ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಜತೆಗೂಡಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಹೆನ್ರಿಕೇಸ್ ತಂಡಕ್ಕೆ 43 ರನ್‌ಗಳ ಜತೆಯಾಟ ನೀಡಿದರು. ಈ ವೇಳೆ ಎಚ್ಚರ ತಪ್ಪಿದ ಕೊಹ್ಲಿ ಆಶಿಶ್ ರೆಡ್ಡಿಗೆ ಕಾಟ್ ಅಂಡ್ ಬೌಲ್ ಆಗುವ ಮೂಲಕ ಹೊರ ನಡೆದರು.     ನಂತರ ಹೆನ್ರಿಕೇಸ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ 40 ಎಸೆತಗಳಲ್ಲಿ 44 ರನ್‌ಗಳಿಸಿ ತಂಡದ ಮೊತ್ತ ಏರಿಕೆಯಾಗುವಂತೆ ಮಾಡಿದರು. ಉಳಿದಂತೆ ಅಗರ್ವಾಲ್ 7, ಅರುಣ್ 0, ವಿನಯ್ 7, ಕಾರ್ತಿಕ್ ಅಜೇಯ 2 ಹಾಗೂ ಉನಾದ್ಕತ್ ಅಜೇಯ 1 ರನ್‌ಗಳಿಸಿದರು.
ಇನಿಂಗ್ಸ್‌ನ ಆರಂಭದಲ್ಲೇ ಪಾರ್ಥೀವ್ ಪಟೇಲ್, ಹೆನ್ರಿಕೇಸ್ ಎಸೆತದಲ್ಲಿ ಕೀಪರ್ ಅರುಣ್‌ಗೆ ಕ್ಯಾಚ್ ನೀಡಿ ಆರಂಭಿಕ ಕುಸಿತಕ್ಕೆ ನಾಂದಿಯಾಡಿದರು. ನಂತರ ಬಂದ ಕೆಮರೂನ್ ವೈಟ್ ಕೂಡ ಹೆನ್ರಿಕೇಸ್‌ಗೆ ವಿಕೆಟ್ ಒಪ್ಪಿಸಿದರು. ನಂತರ 23 ರನ್‌ಗಳಿಸಿದ್ದ ಅಕ್ಷತ್ ರೆಡ್ಡಿ, ಮುರಳಿಧರನ್ ಎಸೆತದಲ್ಲಿ ಬೌಲ್ಡ್ ಆದರು. ನಂತರ ಬಂದ ಸಂಗಕ್ಕಾರ 16, ಪೆರೇರ 7, ಮಿಶ್ರಾ 0, ಆಶಿಶ್ 14, ಸ್ಟೇಯ್ನ್ ಅಜೇಯ 3 ರನ್‌ಗಳಿಸಿದರು. ಆದರೆ ಹನುಮ ವಿಹಾರಿ ಏಕಾಂಗಿ ಹೋರಾಟ ನಡೆಸಿದರಾದರು ಪಂದ್ಯವನ್ನು ಟೈ ವರೆಗೆ ತರುವಲ್ಲಿ ಮಾತ್ರ ಯಶಸ್ವಿಯಾದರು.
ರೋಚಕ ಕೊನೆ ಓವರ್: ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ 2 ಭರ್ಜರಿ ಸಿಕ್ಸರ್ ಬಾರಿಸಿ 20 ರನ್ ಕಲೆ ಹಾಕಿದರು.
21 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಕೇವಲ 15 ರನ್‌ಗಳಿಸಿತು. ಈ ಮೂಲಕ 5 ರನ್‌ಗಳ ಸೋಲನುಭವಿಸಿತು.
  ಸೂಪರ್ ಓವರ್‌ನಲ್ಲಿ ಸನ್‌ರೈಸರ್ಸ್ ಪರ ಭರ್ಜರಿ ಎರಡು ಸಿಕ್ಸರ್ ಬಾರಿಸಿದ ಕೆಮರೂನ್ ವೈಟ್ ತಂಡದ ಮೊತ್ತ 20 ರನ್ ತಲುಪುವಂತೆನೋಡಿಕೊಂಡರು.



ಸ್ಕೋರ್ ಬೋರ್ಡ್



ರಾಯಲ್ ಚಾಲೆಂಜರ್ಸ್ ಬೆಂಗಳೂರು 130/8 (20 ಓವರ್)
ಗೇಯ್ಲ್ ಸಿ ಪಟೇಲ್ ಬಿ ವಿಹಾರಿ 1 (2), ದಿಲ್ಷಾನ್ ಬಿ ಇಶಾಂತ್ 5 (9), ಕೊಹ್ಲಿ ಸಿ ಮತ್ತು ಬಿ ಆಶಿಶ್ 46 (44), ನಾಯರ್ ಎಲ್‌ಬಿಡಬ್ಲ್ಯೂ ಬಿ ಮಿಶ್ರಾ 9 (9), ಹೆನ್ರಿಕೇಸ್ ಸಿ ವೈಟ್ ಬಿ ಶರ್ಮಾ 44 (40), ಅಗರ್ವಾಲ್ ಸಿ ಅಂಕಿತ್ ಬಿ ಸ್ಟೇಯ್ನ್ 7 (8), ಅರುಣ್ ಸಿ ಆಶಿಶ್ ಬಿ ಪೆರೇರಾ 0 (1), ವಿನಯ್‌ಸಿ ಸಂಗಕಾರ ಬಿ ಶರ್ಮಾ 7 (4), ಕಾರ್ತಿಕ್ ಅಜೇಯ 2 (2), ಉನಾದ್ಕತ್ ಅಜೇಯ 1 (1), ಇತರೆ 8
ವಿಕೆಟ್ ಪತನ: 1-8, 2-22, 3-42, 4-85, 5-108, 6-114, 7-125, 8-127
ಬೌಲಿಂಗ್: ಸ್ಟೇಯ್ನ್ 4-0-37-1, ವಿಹಾರಿ 1-0-5-1, ಇಶಾಂತ್ 4-0-27-3, ಅಂಕಿತ್ 2-0-17-0, ಪೆರೇರಾ 4-0-21-1, ಮಿಶ್ರಾ 4-0-15-1, ಆಶಿಶ್ 1-0-7-1
ಸನ್‌ರೈಸರ್ಸ್ 130/7 (20 ಓವರ್) ಅಕ್ಷತ್ ಬಿ ಮುರಳಿಧರನ್ 23 (21), ಪಾರ್ಥೀವ್ ಸಿ ಅರುಣ್ ಬಿ ಹೆನ್ರಿಕೇಸ್ 2 (4), ವೈಟ್ ಸಿ ಮುರಳಿಧರನ್ ಬಿ ಹೆನ್ರಿಕೇಸ್ 5 (9), ವಿಹಾರಿ ಅಜೇಯ 44 (46), ಸಂಗಕ್ಕಾರ ಸಿ ಅರುಣ್ ಬಿ ಉನಾದ್ಕತ್ 16 (17), ಪೆರೇರಾ ಸಿ ಹೆನ್ರಿಕೇಸ್ ಬಿ ಉನಾದ್ಕತ್ 7 (8), ಮಿಶ್ರಾ ರನೌಟ್ ವಿನಯ್ ಕುಮಾರ್ 0 (4), ಆಶಿಶ್ ಸಿ ಕೊಹ್ಲಿ ಬಿ ವಿನಯ್ 14 (12), ಸ್ಟೇಯ್ನ್ ಅಜೇಯ 3 (3). ಇತರೆ 16.
ವಿಕೆಟ್ ಪತನ: 1-4, 2-20, 3-48, 4-81, 5-98, 6-101, 7-124
ಬೌಲಿಂಗ್: ಉನಾದ್ಕತ್ 4-0-24-2, ಹೆನ್ರಿಕೇಸ್ 3-0-14-2, ಕಾರ್ತಿಕ್ 4-0-27-0, ವಿನಯ್ 4-0-27-1, ಮುರಳಿ 4-0-18-1, ದಿಲ್ಷಾನ್ 1-0-10-0


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.